Karnataka Assembly Polls; ಮಸಬಿನಾಳ ಘಟನೆ ಗಂಭೀರ ಸ್ವರೂಪದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಹೆಚ್ ಡಿ ಅನಂದ್ ಕುಮಾರ್, ವಿಜಯಪುರ ಎಸ್ ಪಿ

Karnataka Assembly Polls; ಮಸಬಿನಾಳ ಘಟನೆ ಗಂಭೀರ ಸ್ವರೂಪದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಹೆಚ್ ಡಿ ಅನಂದ್ ಕುಮಾರ್, ವಿಜಯಪುರ ಎಸ್ ಪಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 10, 2023 | 5:39 PM

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 25 ಜನರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಸ್ ಪಿ ಹೇಳಿದರು.

ವಿಜಯಪುರ: ಮಸಬಿನಾಳದಲ್ಲಿ (Masabinal) ಇಂದು ಸಾರ್ವಜನಿಕರು ಇವಿಎಮ್ (EVM) ಮತ್ತು ವಿವಿ ಪ್ಯಾಟ್ ಯಂತ್ರಗಳನ್ನು ನೆಲಕ್ಕಪ್ಪಳಿಸಿ ಧ್ವಂಸಗೊಳಿಸಿದ ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ವಿಜಯಪುರದ ಪೊಲೀಸ್ ವರಿಷ್ಠಾಧಿಕಾರಿ ಹೆಚ್ ಡಿ ಆನಂದ್ ಕುಮಾರ್ (HD Anand Kumar) ಮಸಬಿನಾಳ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಆನಂದ್ ಕುಮಾರ್, ಹೆಚ್ಚುವರಿ ಇವಿಎಮ್ ಮತ್ತು ವಿವಿ ಪ್ಯಾಟ್ ಗಳನ್ನು ಕಾರಿನಲ್ಲಿ ತರುವಾಗ ಅವುಗಳನ್ನು ಮ್ಯಾನಿಪುಲೇಟ್ ಮಾಡಲು ತೆಗೆದುಕೊಂಡು ಬರಲಾಗಿದೆ ಅಂತ ತಪ್ಪುಕಲ್ಪನೆಗೊಳಗಾದ ಜನ ಅವಗಳನ್ನು ಕಿತ್ತುಕೊಂಡು ನಾಶಗೊಳಿಸಿದ್ದಾರೆ, ಸರ್ಕಾರಿ ವಸ್ತುಗಳನ್ನು ಹಾಳು ಮಾಡುವುದು ಗಂಭೀರ ಸ್ವರೂಪದ ಅಪರಾಧವೆನಿಸಿಕೊಳ್ಳುತ್ತದೆ ಎಂದು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 25 ಜನರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಸ್ ಪಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ