ನನ್ನ ಸಮಸ್ಯೆಗಳಿಗೆ ಸುರ್ಜೆವಾಲಾ ಸ್ಪಂದಿಸಿದ್ದಾರೆ, ಪರಿಹಾರ ಒದಗಿಸುವ ಆಶ್ವಾಸನೆ ನೀಡಿದ್ದಾರೆ: ರಾಜು ಕಾಗೆ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Jul 01, 2025 | 6:13 PM

ಸ್ವಾಭಿಮಾನಕ್ಕಾಗಿ, ಆತ್ಮಸನ್ಮಾನಕ್ಕಾಗಿ ಮತ್ತು ತನ್ನ ಕ್ಷೇತ್ರದ ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ, ಈಗಿರುವ ವ್ಯವಸ್ಥೆ ಬದಲಾಗಬೇಕು, ಮಿನಿಸ್ಟ್ರುಗಳು ಶಾಸಕರೊಂದಿಗೆ ಗೌರವದಿಂದ ಮಾತಾಡಬೇಕು ಮತ್ತು ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಬೇಕು, ವರ್ಷಗಟ್ಟಲೆ ಧೂಳು ಮೆತ್ತಿಕೊಂಡು ಬಿದ್ದಿರುವ ಫೈಲ್ ಗಳನ್ನು ಕ್ಲೀಯರ್ ಮಾಡಬೇಕು ಎಂದು ರಾಜು ಕಾಗೆ ಹೇಳಿದರು.

ಬೆಂಗಳೂರು ಜುಲೈ 1: ಬೆಳಗ್ಗೆ 11 ಗಂಟೆಗೆ ರಾಜು ಕಾಗೆ ಅವರೊಂದಿಗೆ ಮಾತಾಡಬೇಕಿದ್ದ ರಂದೀಪ್ ಸುರ್ಜೇವಾಲ (Randeep Surjewala) ಅಂತಿಮವಾಗಿ ಮಾತುಕತೆಗೆ ಕರೆದಿದ್ದು ಮಧ್ಯಾಹ್ನ 2.30 ಗಂಟೆಗೆ. ಎರಡು ದಿನಗಳಿಂದ ಮಾಧ್ಯಮದವರ ಜೊತೆ ತೋಡಿಕೊಂಡ ನೋವನ್ನೇ ಸುರ್ಜೇವಾಲಾ ಅವರಿಗೂ ಹೇಳಿದ್ದೇನೆ, ನನ್ನ ಸಮಸ್ಯೆಗಳನ್ನು ಅವರು ಗಮನವಿಟ್ಟು ಕೇಳಿದ್ದಾರೆ, ನಾನು ಹೇಳಿರುವುದನ್ನು ಎಲ್ಲರೊಂದಿಗೆ ಚರ್ಚಿಸಿ ಪರಿಹಾರ ಸೂಚಿಸುವುದಾಗಿ ಹೇಳಿದ್ದಾರೆ ಎಂದು ಕಾಗೆ ಹೇಳಿದರು. ಮುಂದೆ ಯಾವುದೇ ಸಮಸ್ಯೆ ಎದುರಾದರೂ ತನ್ನೊಂದಿಗೆ ಮಾತಾಡುವಂತೆ ಸುರ್ಜೆವಾಲಾ ಹೇಳಿದ್ದಾರೆ ಎಂದು ಕಾಗೆ ಹೇಳಿದರು.

ಇದನ್ನೂ ಓದಿ:   ನನಗೆ ಅಪಮಾನ ಮಾಡಿದ ಅಧಿಕಾರಿ ರಾಜೇಂದ್ರ ಕಠಾರಿಯ ವಿರುದ್ಧ ಸರ್ಕಾರ ಕ್ರಮ ಜರುಗಿಸಲೇ ಇಲ್ಲ: ರಾಜು ಕಾಗೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jul 01, 2025 06:11 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.