‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ರಂಗಾಯಣ ರಘು ಪತ್ನಿ, ನಟಿ ಮಂಗಳಾ ಅವರು ‘ಪಬ್ಬಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೊದಲು ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಮಂಗಳಾ ಅಭಿನಯಿಸಿದ್ದರು. ಇತ್ತೀಚೆಗೆ ‘ಪಬ್ಬಾರ್’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿನ ಬಗ್ಗೆ ಟಿವಿ9 ಜೊತೆ ಮಂಗಳಾ ಮಾತಾಡಿದರು.
ಖ್ಯಾತ ನಟ ರಂಗಾಯಣ ರಘು ಅವರ ಪತ್ನಿ, ನಟಿ ಮಂಗಳಾ ಅವರು ‘ಪಬ್ಬಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೊದಲು ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಮಂಗಳಾ ಅವರು ಅಭಿನಯಿಸಿದ್ದರು. ಇತ್ತೀಚೆಗೆ ‘ಪಬ್ಬಾರ್’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅವರು ರಂಗಾಯಣ ರಘು ನಟನೆಯ ‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿನ ಬಗ್ಗೆ ಟಿವಿ9 ಜೊತೆ ಮಾತನಾಡಿದರು. ‘ಯಾರಾದರೂ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದಾರೆ ಎಂದಾಗ ಖುಷಿ ಆಗುತ್ತದೆ. ನಮ್ಮ ಮನೆಯವರೇ ಮಾಡುತ್ತಿದ್ದಾರೆ ಎಂದಾಗ ಇನ್ನೂ ಹೆಚ್ಚು ಸಂತೋಷ ಆಗುತ್ತದೆ. ರಘು ಅವರಿಗೆ ಇನ್ನೂ ಒಳ್ಳೆಯ ಪಾತ್ರಗಳು ಸಿಗಲಿ ಅಂತ ವಿಶ್ ಮಾಡುತ್ತೇನೆ. ಪ್ರೇಮದ ಊರಲಿ ಚಿತ್ರಕ್ಕೆ ಇಡೀ ಕರ್ನಾಟಕವೇ ಮೆಚ್ಚುಗೆ ನೀಡಿದೆ. ಹಾಗಾಗಿ ನಾನು ವೈಯಕ್ತಿಕವಾಗಿ ಮಾತನಾಡುವಂಥದ್ದು ಏನೂ ಇಲ್ಲ. ಇಡೀ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಮನೆಯಲ್ಲಿ ಪ್ರತಿ ಮಾತುಕಥೆ ಕೂಡ ಸಿನಿಮಾ, ಸಾಹಿತ್ಯ, ರಂಗಭೂಮಿ ಬಗ್ಗೆ ಇರುತ್ತದೆ. ನಾನು ರಂಗಭೂಮಿಯಲ್ಲಿ ಹೆಚ್ಚು ಬ್ಯುಸಿ ಆಗಿದ್ದೇನೆ’ ಎಂದು ಮಂಗಳಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
