ಡಿಸಿಎಂ ಹುಟ್ಟುಹಬ್ಬಕ್ಕೆ ಸ್ಪೆಷಲ್​​ ಗಿಫ್ಟ್​: 4 ಸಾವಿರ ಕೆಜಿ ರಂಗೋಲಿಯಲ್ಲಿ ಮೂಡಿದ ಡಿ.ಕೆ. ಶಿವಕುಮಾರ್​​

Edited By:

Updated on: May 15, 2026 | 12:57 PM

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಸಿಎಂ ಸಿದ್ದರಾಮಯ್ಯನವರ ತವರಿನಲ್ಲಿ ವಿನೂತನವಾಗಿ ಆಚರಿಸಲಾಯಿತು. ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ 8,125 ಚದರಡಿಯಲ್ಲಿ 4,000 ಕೆ.ಜಿ ರಂಗೋಲಿಯಿಂದ ಕನ್ನಡ ಧ್ವಜದೊಂದಿಗೆ ಡಿಕೆಶಿ ಭಾವಚಿತ್ರ ರಚಿಸಲಾಗಿದೆ. ಈ ವಿಶೇಷ ಕಲಾಕೃತಿಯು ನೋಡುಗರ ಗಮನ ಸೆಳೆದಿದೆ.

ಮೈಸೂರು, ಮೇ 15: ಡಿಸಿಎಂ ಡಿ.‌ಕೆ‌. ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಸಿಎಂ ಸಿದ್ದರಾಮಯ್ಯ ಅವರ ತವರಲ್ಲಿ ವಿನೂತನವಾಗಿ ಆಚರಿಸಲಾಗಿದೆ. ಮೈಸೂರಿನ ಕೋಟೆ ಅಂಜನೇಯಸ್ವಾಮಿ ದೇವಾಲಯದ ಮುಂಭಾಗ 8,125 ಚದರಡಿ ಜಾಗದಲ್ಲಿ ಡಿಕೆಶಿ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ರಚಿಸಲಾಗಿದೆ. 60 ಅಡಿ ಅಗಲ, 135 ಅಡಿ ಉದ್ದವಿರುವ ಈ ಚಿತ್ರವನ್ನು 4 ಸಾವಿರ ಕೆ.ಜಿ. ರಂಗೋಲಿ ಬಳಸಿ ಕಲಾವಿದ ಪುನೀತ್ ಬಿಡಿಸಿದ್ದಾರೆ. ಕನ್ನಡ ಭಾವುಟದ ಒಳಭಾಗದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾವಚಿತ್ರ ಮೂಡಿಬಂದಿರೋದು ನೋಡುಗರ ಗಮನ ಸೆಳೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 15, 2026 12:56 PM
Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More