ಉಡುಗೆ ಯಾವುದಾದರೇನು, ರಣವೀರ್ ಸಿಂಗ್ ಮಟ್ಟಸ ದೇಹದ ಮೇಲೆ ಚೆನ್ನಾಗಿ ಕಾಣುತ್ತದೆ ಅನ್ನೋದು ಸುಳ್ಳಲ್ಲ!
ನಮ್ಮ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆಯನ್ನು ಮದುವೆಯಾಗಿ ಕಪಿಲ್ ಶರ್ಮ ಸೇರಿದಂತೆ ಲಕ್ಷಾಂತರ ಪಡ್ಡೆಗಳ ಹೃದಯಗಳನ್ನು ಘಾಸಿಗೊಳಿಸಿದ ರಣವೀರ್ ಸಿಂಗ್ ಬಾಲಿವುಡ್ನ ಬ್ಯೂಸಿ ನಟರಲ್ಲೊಬ್ಬರು. ಸದ್ಯಕ್ಕೆ ಅವರು ‘ಸರ್ಕಸ್’ ಹೆಸರಿನ ಹೊಸ ಪ್ರಾಜೆಕ್ಟ್ನಲ್ಲಿ ತಲ್ಲೀನರಾಗಿದ್ದಾರೆ. ಕೇವಲ ಒಂದು ದಶಕದ ಹಿಂದೆ ಬಾಲಿವುಡ್ ಪ್ರವೇಶಿಸಿ ಯಾವುದೇ ಗಾಡ್ ಫಾದರ್ ನೆರವಿಲ್ಲದೆ ರಣವೀರ್ ಈ ಮಟ್ಟಕ್ಕೆ ಬೆಳೆದಿರುವುದು ಸೋಜಿಗ ಹುಟ್ಟಿಸುತ್ತದೆ. 36 ವರ್ಷ ವಯಸ್ಸಿನ ಇವರು ಶ್ರಮಜೀವಿ ಮತ್ತು ಸ್ನೇಹಜೀವಿ ಅಂತ ಬಾಲಿವುಡ್ ವಲಯಗಳಲ್ಲಿ ಮಾತಾಡಿಕೊಳ್ಳಲಾಗುತ್ತದೆ. ಇದುವರೆಗೆ ನಾಲ್ಕು ಬಾರಿ […]
ನಮ್ಮ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆಯನ್ನು ಮದುವೆಯಾಗಿ ಕಪಿಲ್ ಶರ್ಮ ಸೇರಿದಂತೆ ಲಕ್ಷಾಂತರ ಪಡ್ಡೆಗಳ ಹೃದಯಗಳನ್ನು ಘಾಸಿಗೊಳಿಸಿದ ರಣವೀರ್ ಸಿಂಗ್ ಬಾಲಿವುಡ್ನ ಬ್ಯೂಸಿ ನಟರಲ್ಲೊಬ್ಬರು. ಸದ್ಯಕ್ಕೆ ಅವರು ‘ಸರ್ಕಸ್’ ಹೆಸರಿನ ಹೊಸ ಪ್ರಾಜೆಕ್ಟ್ನಲ್ಲಿ ತಲ್ಲೀನರಾಗಿದ್ದಾರೆ. ಕೇವಲ ಒಂದು ದಶಕದ ಹಿಂದೆ ಬಾಲಿವುಡ್ ಪ್ರವೇಶಿಸಿ ಯಾವುದೇ ಗಾಡ್ ಫಾದರ್ ನೆರವಿಲ್ಲದೆ ರಣವೀರ್ ಈ ಮಟ್ಟಕ್ಕೆ ಬೆಳೆದಿರುವುದು ಸೋಜಿಗ ಹುಟ್ಟಿಸುತ್ತದೆ. 36 ವರ್ಷ ವಯಸ್ಸಿನ ಇವರು ಶ್ರಮಜೀವಿ ಮತ್ತು ಸ್ನೇಹಜೀವಿ ಅಂತ ಬಾಲಿವುಡ್ ವಲಯಗಳಲ್ಲಿ ಮಾತಾಡಿಕೊಳ್ಳಲಾಗುತ್ತದೆ.
ಇದುವರೆಗೆ ನಾಲ್ಕು ಬಾರಿ ಫಿಲಂಫೇರ್ ಪ್ರಶಸ್ತಿ ಪಡೆದಿರುವ ರಣವೀರ್ ತಮ್ಮ ನಟನಾ ಪ್ರತಿಭೆಯಿಂದ ಖ್ಯಾತರಾಗಿರುವ ಹಾಗೆ ವಿಚಿತ್ರ ವೇಷ-ಭೂಷಣಗಳಿಗೂ ಪ್ರಸಿದ್ಧರು. ಬಗೆಬಗೆಯ ಪೋಷಾಕುಗಳಲ್ಲಿರುವ ರಣವೀರ್ ಅವರ ಚಿತ್ರಗಳು ಈ ವಿಡಿಯೋನಲ್ಲಿವೆ. ಸಾಂಪ್ರದಾಯಿಕ ಉಡುಗೆಗಳಲ್ಲಿ ಮಿಂಚುವಂತೆ ಅವರು ಫಂಕೀ ಡ್ರೆಸ್ಗಳಲ್ಲೂ ಕಾಣಿಸಿಕೊಂಡು ಭೇಷ್ ಅನಿಸಿಕೊಳ್ಳುತ್ತಾರೆ. ಬೇರೆ ನಟರು ಧರಿಸಲು ಮುಜಿಗುರ ಪಡುವಂಥ ಫ್ರಾಕು ಮತ್ತು ಗೌನುಗಳನ್ನು ರಣವೀರ್ ಧರಿಸುತ್ತಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಈ ಚಿತ್ರಗಳನ್ನು ನೋಡಿ. ಥೇಟ್ ಹುಡುಗಿಯರ ಹಾಗೆ ಸ್ಕರ್ಟ್ ಮತ್ತು ಮುಚ್ಚುವುದಕ್ಕಿಂತ ಹೆಚ್ಚು ರಿವೀಲ್ ಮಾಡುವಂಥ ಟಾಪ್ ಧರಿಸಿ ಕೆಮೆರಾಗೆ ಫೋಸ್ ನೀಡಿದ್ದಾರೆ. ಓವರ್ ಸೈಜ್ ಶರ್ಟ್ಗಳನ್ನು ಧರಿಸುವ ಫ್ಯಾಶನ್ 80 ರ ದಶಕದಲ್ಲಿತ್ತು. ಆದರೆ ರಣವೀರ್ ಸ್ಲಿಮ್ ಫಿಟ್ ಜಮಾನದಲ್ಲಿ ದೊಗಳೆ ಶರ್ಟ್ ಧರಿಸಿದ್ದಾರೆ.
ಅರ್ಧ ಓಪನ್ ಜಿಪ್ ಇರುವ ಜಾಕೆಟ್ ಧರಿಸಿ ತಮ್ಮ ಮಟ್ಟಸ ದೇಹವನ್ನು ಪ್ರದರ್ಶಿಸುವುದು ರಣವೀರ್ಗೆ ಇಷ್ಟ ಅಂತ ಕಾಣುತ್ತೆ! ಈ ಫೋಟೋಗಳನ್ನು ನೋಡುತ್ತಿದ್ದರೆ, ಇವರು ಕೇವಲ ತಮಗೆಂದೇ ಒಬ್ಬ ವಸ್ತ್ರ ವಿನ್ಯಾಸಕಾರನನ್ನು ಇಟ್ಟುಕೊಂಡಿರಬಹುದು ಎಂದೆನಿಸದಿರದು. ಅವರ ಉಡುಗೆ-ತೊಡುಗೆ, ಡ್ರೆಸ್ ಸೆನ್ಸ್ ಬಗ್ಗೆ ದೀಪಿಕಾ ಯಾವತ್ತೂ ಕಾಮೆಂಟ್ ಮಾಡಿಲ್ಲ, ನಾವ್ಯಾಕೆ ಮಾಡೋದು ಮಾರಾಯ್ರೇ, ಅಲ್ಲವೋ?
ಇದನ್ನೂ ಓದಿ: Videocon Industries: ವಿಡಿಯೋಕಾನ್ ಇಂಡಸ್ಟ್ರೀಸ್ ಆಸ್ತಿ ವಶಕ್ಕೆ ಎನ್ಸಿಎಲ್ಟಿಗೆ ಅರ್ಜಿ; ಏನಿದು ಪ್ರಕರಣ? ಇಲ್ಲಿದೆ ಮಾಹಿತಿ