AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನಿಗಳ ಕ್ರೌರ್ಯ ಮತ್ತು ದುಷ್ಟತನಕ್ಕೆ ಅತಿಹೆಚ್ಚು ನಲುಗುತ್ತಿರುವವರು ಮಕ್ಕಳು ಮತ್ತು ಹೆಣ್ಣು ಮಕ್ಕಳು

ತಾಲಿಬಾನಿಗಳ ಕ್ರೌರ್ಯ ಮತ್ತು ದುಷ್ಟತನಕ್ಕೆ ಅತಿಹೆಚ್ಚು ನಲುಗುತ್ತಿರುವವರು ಮಕ್ಕಳು ಮತ್ತು ಹೆಣ್ಣು ಮಕ್ಕಳು

TV9 Web
| Edited By: |

Updated on: Aug 30, 2021 | 8:35 PM

Share

ತಾಲಿಬಾನಿ ಉಗ್ರರು ಮಹಿಳೆಯರ ಮೇಲೆ ಅದ್ಯಾವ ಪರಿ ನಿರ್ಬಂಧಗಳನ್ನು ಹೇರಿದ್ದಾರೆಂದರೆ, ಅವರು ಹೆಣ್ಣಾಗಿ ಹುಟ್ಟಿದ್ದಕ್ಕೆ ತಮ್ಮನ್ನು ತಾವು ಶಪಿಸಿಕೊಳ್ಳುತ್ತಿದ್ದಾರೆ.

ಇಲ್ಲಿ ಆಡಿಕೊಂಡಿರುವ ಮಕ್ಕಳನ್ನು ನೋಡಿ. ನಿರ್ಭೀತಿಯಿಂದ ಅವರು ಆಟದಲ್ಲಿ ಮಗ್ನರಾಗಿದ್ದಾರೆ, ಯಾರ ಭಯವಿಲ್ಲ, ಯಾವುದೇ ಆತಂಕವಿಲ್ಲ. ಹಿಂಭಾಗದಲ್ಲೊಂದು ಶಾಲೆ ನಿಮಗೆ ಕಾಣುತ್ತದೆ. ಮಕ್ಕಳು ಆಟವಾಡುತ್ತಿರುವುದನ್ನು ಅವರ ಪೋಷಕರು ಸಂತೋಷದಿಂದ ನೋಡುತ್ತಿದ್ದಾರೆ. ಮಕ್ಕಳು ತಮ್ಮ ಟೀಚರ್ ಗಳ ಸುಪರ್ದಿಯಲ್ಲಿ ಆಟವಾಡಿಕೊಂಡಿದ್ದಾರೆ. ಹಲವಾರು ಮಹಿಳೆಯರು ಸಹ ಅಲ್ಲಿ ನೆರೆದಿದ್ದಾರೆ. ಇದು ಕಾಬೂಲ್ ನಗರದ ದೃಶ್ಯ ಅಂದರೆ ನೀವು ನಂಬುತ್ತೀರಾ? ಕೇವಲ 2-3 ವಾರಗಳ ಹಿಂದೆ ಕಾಬೂಲ್ ನಗರ ಹೀಗಿತ್ತು, ಕೇವಲ ಕಾಬೂಲ್ ಮಾತ್ರ ಅಂತಲ್ಲ, ಇಡೀ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಿತ್ತು, ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ ಮಹಿಳೆಯರು ಸ್ವಚ್ಛಂದವಾಗಿ ಓಡಾಡಿಕೊಂಡಿದ್ದರು. ಅವರಿಗೆ ಯಾವ ನಿರ್ಬಂಧವೂ ಇರಲಿಲ್ಲ.

ಆದರೆ, ತಾಲಿಬಾನಿಗಳು ಅಫ್ಘಾನಿಸ್ತಾನದ ಒಂದೊಂದೇ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಾ ಕಾಬೂಲ್ ನಗರವನ್ನೂ ಪ್ರವೇಶಿಸಿ ಸರ್ಕಾರವನ್ನು ತಮ್ಮ ಹತೋಟಿಗೆ ತೆಗೆದುಕೊಂಡ ನಂತರ ದೇಶ ನರಕಸದೃಶವಾಗಿದೆ. ತಾಲಿಬಾನಿ ಉಗ್ರರು ಮಹಿಳೆಯರ ಮೇಲೆ ಅದ್ಯಾವ ಪರಿ ನಿರ್ಬಂಧಗಳನ್ನು ಹೇರಿದ್ದಾರೆಂದರೆ, ಅವರು ಹೆಣ್ಣಾಗಿ ಹುಟ್ಟಿದ್ದಕ್ಕೆ ತಮ್ಮನ್ನು ತಾವು ಶಪಿಸಿಕೊಳ್ಳುತ್ತಿದ್ದಾರೆ. ಅವರು ಜೀನ್ಸ್ ಧರಿಸುವಂತಿಲ್ಲ, ಬುರ್ಕಾ ಧರಿಸದೆ ಮತ್ತು ಅದನ್ನೂ ಧರಿಸಿಯೂ ಒಬ್ಬರೇ ಹೊರಬರುವಂತಿಲ್ಲ, ಮಾಳಿಗೆ ಮೇಲೆ ನಿಲ್ಲುವ ಹಾಗಿಲ್ಲ, ಟಿವಿ, ರೆಡಿಯೋ ಕೇಂದ್ರಗಳಲ್ಲಿ ಕೆಲಸ ಮಾಡುವಂತಿಲ್ಲ-ಇಂಥ ಪ್ರತಿಬಂಧನೆಗಳು ಒಂದೇ, ಎರಡೇ?

ಇದೇ ಪಾಖಂಡಿಗಳು, ಕಾಬೂಲ್ ನಗರವನ್ನು ವಶಪಡಿಸಿಕೊಂಡಾಗ ಹೆಣ್ಣುಮಕ್ಕಲ ತಂಟೆಗೆ ಹೋಗುವುದಿಲ್ಲ ಅಂತ ಭರವಸೆ ನೀಡಿದ್ದರು. ಅವರು ಮನೆಯಿಂದ ಆಚೆ ಬರಬಹುದು, ಕೆಲಸಕ್ಕೆ ಹೋಗಬಹುದು ಎಂದು ಹೇಳಿದ ಮರುದಿನವೇ, ಕೆಲಸಕ್ಕೆ ಹೋದವರನ್ನು ಮನೆಯಿಂದ ಆಚೆ ಬಂದವರನ್ನು ರಸ್ತೆಗಳಲ್ಲಿ ಎಳೆದಾಡಿ ಗುಂಡಿಟ್ಟು ಕೊಂದರು. ಈ ದುಷ್ಟರು ಎಸಗುತ್ತಿರುವ ಅನೇಕ ಕೃತ್ಯಗಳು ಹೊರಜಗತ್ತಿಗೆ ಗೊತ್ತಾಗುತ್ತಿಲ್ಲ. ವಿದೇಶೀ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ:  ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್​ ಮಾಡು’ ಎಂದ ಶಮಿತಾ ವಿಡಿಯೋ ವೈರಲ್​