AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Videocon Industries: ವಿಡಿಯೋಕಾನ್ ಇಂಡಸ್ಟ್ರೀಸ್ ಆಸ್ತಿ ವಶಕ್ಕೆ ಎನ್​ಸಿಎಲ್​ಟಿಗೆ ಅರ್ಜಿ; ಏನಿದು ಪ್ರಕರಣ? ಇಲ್ಲಿದೆ ಮಾಹಿತಿ

ವಿಡಿಯೋಕಾನ್ ಇಂಡಸ್ಟ್ರೀಸ್​ನಿಂದ ಗರಿಷ್ಠ ಪ್ರಮಾಣದಲ್ಲಿ ಸಾಲ ವಸೂಲಿ ಮಾಡಬೇಕು ಎಂಬ ಉದ್ದೇಶದೊಂದಿಗೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯ ಮಂಡಳಿಯಲ್ಲಿ ಕೇಂದ್ರದಿಂದ ಅರ್ಜಿ ಹಾಕಲಾಗಿದೆ.

Videocon Industries: ವಿಡಿಯೋಕಾನ್ ಇಂಡಸ್ಟ್ರೀಸ್ ಆಸ್ತಿ ವಶಕ್ಕೆ ಎನ್​ಸಿಎಲ್​ಟಿಗೆ ಅರ್ಜಿ; ಏನಿದು ಪ್ರಕರಣ? ಇಲ್ಲಿದೆ ಮಾಹಿತಿ
ವೇಣುಗೋಪಾಲ್ ಧೂತ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on:Aug 30, 2021 | 2:58 PM

Share

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು (Ministry Of Corporate Affairs) ವಿಡಿಯೋಕಾನ್ ಇಂಡಸ್ಟ್ರೀಸ್‌ನಿಂದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಆ ಮೂಲಕ ಹಣವನ್ನು ವಸೂಲಿ ಮಾಡಲು ಯೋಜನೆ ರೂಪಿಸುತ್ತಿದೆ. 5,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ವಿಡಿಯೋಕಾನ್​ ಕಂಪೆನಿಯ ಆಸ್ತಿಯನ್ನು ಸಚಿವಾಲಯದಿಂದ ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಸ್ವತ್ತುಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಸಚಿವಾಲಯವು ತೊಡಗಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು ಮನಿಕಂಟ್ರೋಲ್‌ಗೆ ಈ ಬಗ್ಗೆ ತಿಳಿಸಿರುವಂತೆ: “ವಿಡಿಯೋಕಾನ್ ಪ್ರಕರಣದ ಪರಿಹಾರಕ್ಕಾಗಿ ಸರ್ಕಾರ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಇದರಲ್ಲಿ ಬ್ಯಾಂಕ್​ಗಳು ತಮ್ಮ ಒಟ್ಟು ಬಾಕಿಯ ಶೇ 4.15ರಷ್ಟನ್ನು ಮಾತ್ರ ಪಡೆಯುತ್ತವೆ. ಇದು ಭಾರತದ ಅತಿದೊಡ್ಡ ದಿವಾಳಿತನ ಪ್ರಕರಣಗಳಲ್ಲಿ ಒಂದಾಗಿದೆ. ಗರಿಷ್ಠ ಹಣವನ್ನು ಹಿಂಪಡೆಯಲು ಸರ್ಕಾರ ಎಲ್ಲ ಮಾರ್ಗಗಳನ್ನೂ ಹುಡುಕುತ್ತಿದೆ. ಈ ಪ್ರಕ್ರಿಯೆಯಲ್ಲಿ ಕಂಪೆನಿಯ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅದರ ಸ್ವತ್ತುಗಳನ್ನು ಮಾರಾಟ ಮಾಡುವ ಮೂಲಕ ಹಣವನ್ನು ಪಡೆದುಕೊಳ್ಳುವುದಕ್ಕೆ ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯವು ಅಧಿಕಾರವನ್ನು ಬಳಸುತ್ತಿದೆ”.

5,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ಈಗಾಗಲೇ ಗುರುತಿಸಲಾಗಿದೆ. ಅದಕ್ಕೂ ಹೆಚ್ಚಿನದನ್ನು ಗುರುತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಡಿಯೋಕಾನ್ ಕಂಪೆನಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ಕಂಪೆನಿಗಳ ಕಾಯ್ದೆಯ ಸೆಕ್ಷನ್ 241 ಮತ್ತು 242ರ ಅಡಿಯಲ್ಲಿ ಸಚಿವಾಲಯದಿಂದ ಮುಂಬೈನ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯಲ್ಲಿ (NCLT) ಅರ್ಜಿ ಸಲ್ಲಿಸಲಾಗಿದೆ. ಅಂದಹಾಗೆ ಎನ್‌ಸಿಎಲ್‌ಟಿ ಮುಂಬೈ ಪೀಠವು ಈ ವಾರ ಅರ್ಜಿಯ ವಿಚಾರಣೆ ನಡೆಸಬಹುದು. ಈ ಕಾಯ್ದೆಗಳು ಮುಖ್ಯವಾಗಿ ಕಂಪೆನಿಯ ದುರಾಡಳಿತದ ಸಮಸ್ಯೆಗಳ ಬಗ್ಗೆ ವ್ಯವಹರಿಸುತ್ತವೆ. ಹಣಕಾಸು ನಷ್ಟ ಮತ್ತು ದಿವಾಳಿತನ ಸಂಹಿತೆ, 2016ರ ಅಡಿಯಲ್ಲಿ ದಿವಾಳಿತನ ಪ್ರಕ್ರಿಯೆಗಳನ್ನು ಆರಂಭಿಸಲು ವಿಡಿಯೋಕಾನ್ ಇಂಡಸ್ಟ್ರೀಸ್ ವಿರುದ್ಧ 2018ರಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ಅದರ ಒಟ್ಟು ಕ್ಲೇಮ್ ಮೊತ್ತವು ಸುಮಾರು 71,433.75 ಕೋಟಿ ರೂಪಾಯಿ ಇದ್ದರೆ, ಆ ಪೈಕಿ ಒಪ್ಪಿಗೆ ಆಗಿದ್ದು 64,838.63 ಕೋಟಿ ರೂಪಾಯಿಗೆ.

2020ರ ಡಿಸೆಂಬರ್​ನಲ್ಲಿ ಸಾಲಗಾರರ ಸಮಿತಿಯು (CoC) 13 ವಿಡಿಯೋಕಾನ್ ಸಂಸ್ಥೆಗಳ ಅನಿಲ್ ಅಗರ್​ವಾಲ್ ಬೆಂಬಲಿತ ಟ್ವಿನ್ ಸ್ಟಾರ್ 2,900 ಕೋಟಿ ರೂಪಾಯಿ ಯೋಜನೆಯನ್ನು ಅನುಮೋದಿಸಿತು. ಆದರೂ ಕಂಪೆನಿಯ ಅಧ್ಯಕ್ಷ ಮತ್ತು ಸಂಸ್ಥಾಪಕರಾದ ವೇಣುಗೋಪಾಲ್ ಧೂತ್ ಈ ಸ್ಕೀಮ್ ವಿರುದ್ಧ NCLTನಲ್ಲಿ ಮೇಲ್ಮನವಿ ಸಲ್ಲಿಸಿದರು. ಎನ್‌ಸಿಎಲ್‌ಟಿಗೆ ಧೂತ್ ಸಲ್ಲಿಸಿದ ಮನವಿಯಲ್ಲಿ, ಎನ್‌ಸಿಎಲ್‌ಟಿ ಆದೇಶವನ್ನು ಬದಿಗಿಡಬೇಕು ಮತ್ತು 31,789 ಕೋಟಿ ರೂಪಾಯಿಗೆ ತಾವು ಸಲ್ಲಿಸಿದ ಪರಿಹಾರ ಯೋಜನೆಯನ್ನು ಸಾಲದಾತರು ಪರಿಗಣಿಸುವಂತೆ ಸೂಚಿಸಬೇಕು ಎಂದು ಕೇಳಿದ್ದರು. ಅಂದಹಾಗೆ ವಿಡಿಯೋಕಾನ್ ಇಂಡಸ್ಟ್ರೀಸ್ ಮತ್ತು ಅದರ 12 ಗುಂಪು ಕಂಪೆನಿಗಳು 64,838.63 ಕೋಟಿ ರೂಪಾಯಿಯ ಬಾಕಿ ಉಳಿಸಿಕೊಂಡಿವೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು SIDBI, ಮತ್ತು IFCI ಹಾಗೂ ABG ಶಿಪ್ ಯಾರ್ಡ್ ಸೇರಿದಂತೆ ಮೂರು ಬ್ಯಾಂಕ್​ಗಳು ಶೇಕಡಾ 0.024 ಷೇರುಗಳನ್ನು ಹೊಂದಿದ್ದು, ಈ ವಿಲೇವಾರಿ ಪ್ರಕ್ರಿಯೆಯಲ್ಲಿ ಕಡಿಮೆ ಮೊತ್ತದ ವಸೂಲಿ ಆಗುತ್ತದೆ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಇನ್ನು ಮನಿಕಂಟ್ರೋಲ್​ನಿಂದ ವೇಣುಗೋಪಾಲ್ ಧೂತ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗಿದ್ದು, ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ವರದಿ ಮಾಡಲಾಗಿದೆ. ಈಗಾಗಲೇ ವಿಡಿಯೋಕಾನ್ ಇಂಡಸ್ಟ್ರೀಸ್ ಮೇಲೆ ಗಂಭೀರ ವಂಚನೆ ತನಿಖಾ ಕಚೇರಿ (SFIO) ತನಿಖೆಗೆ ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯದಿಂದ ಆದೇಶಿಸಲಾಗಿದೆ. ಜುಲೈನಲ್ಲಿ ಕಂಪೆನಿಯ ಆವರಣ ಮತ್ತು ಪ್ರವರ್ತಕರ ಬಳಿ SFIO ಶೋಧ ಕಾರ್ಯಾಚರಣೆಯನ್ನು ನಡೆಸಿತ್ತು.

ಇದನ್ನೂ ಓದಿ: ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆಯೇ ದಿವಾಳಿ ಸಂಹಿತೆಯ ಮಸೂದೆ-2021 ಅಂಗೀಕಾರ

(Ministry Of Corporate Affairs To Apply NCLT For Attachment Of Videocon Industries Assets)

Published On - 2:56 pm, Mon, 30 August 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ