Gold Rate Today: ಬೆಂಗಳೂರಿನಲ್ಲಿ ಇಳಿಕೆಯಾದ ಚಿನ್ನ, ಬೆಳ್ಳಿ ದರ; ವಿವಿಧ ನಗರಗಳಲ್ಲಿ ಎಷ್ಟಿದೆ ರೇಟ್?
Gold Price Today: ಚಿನ್ನಾಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
Gold Silver Price Today | ಬೆಂಗಳೂರು: ಹಲವು ದಿನಗಳಿಂದ ಚಿನ್ನದ ದರ ಏರುತ್ತಲೇ ಇತ್ತು. ಇಂದು ಪ್ರಮುಖ ನಗರಗಳಲ್ಲಿ ಚಿನ್ನದ ದರ ಕೊಂಚ ಇಳಿಕೆ ಆಗಿದೆ. ಗ್ರಾಹಕರಿಗೆ ಕೊಂಚ ಸಮಾಧಾನದ ವಿಷಯ. ಚಿನ್ನಾಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನದ ದರ (Gold Price) ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ. ಬೆಳ್ಳಿ ದರದಲ್ಲಿಯೂ (Silver Price) ಸಹ ಇಂದು ( ಆಗಸ್ಟ್ 31, ಮಂಗಳವಾರ) ಇಳಿಕೆ ಆಗಿದೆ. ಚಿನ್ನಾಭರಣ ಖರೀದಿಸುವ ಕುರಿತಾಗಿ ಯೋಚನೆ ಇದ್ದರೆ ಇದು ಸುಸಮಯ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,450 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,55,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,490 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,84,900 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,200 ರೂಪಾಯಿ ಇಳಿಕೆ ಕಂಡಿದೆ. ಹಾಗೆಯೇ ಕೆಜಿ ಬೆಳ್ಳಿ ಬೆಲೆ 200 ರೂಪಾಯಿ ಇಳಿಕೆ ಬಳಿಕ 63,600 ರೂಪಾಯಿ ನಿಗದಿ ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,450 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,44,500 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,100 ರೂಪಾಯಿ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,490 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,84,900 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,200 ರೂಪಾಯಿಯಷ್ಟು ಇಳಿಕೆ ಕಂಡಿದೆ. ಸುಮಾರು 200 ರೂಪಾಯಿ ಇಳಿಕೆ ಬಳಿಕ ಕೆಜಿ ಬೆಳ್ಳಿಗೆ 63,600 ರೂಪಾಯಿ ನಿಗದಿಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,600 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,66,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 1,100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,800 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,08,000 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,400 ರೂಪಾಯಿ ಇಳಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿ ಬೆಲೆ 200 ರೂಪಾಯಿ ಇಳಿಕೆ ಬಳಿಕ 63,600 ರೂಪಾಯಿ ಇಳಿಕೆ ಕಂಡಿದೆ.
ಇದನ್ನೂ ಓದಿ:
Gold Rate Today: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?
Gold Rate Today: ಸತತ 2 ದಿನಗಳಿಂದ ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ ಗೊತ್ತಾ?
Published On - 7:20 am, Tue, 31 August 21