AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mutual Fund: ಫೋಕಸ್ಡ್​ ಮ್ಯೂಚುವಲ್​ ಫಂಡ್​ಗಳ ಬಗ್ಗೆ ಕುದುರುತ್ತಿದೆ ಹೂಡಿಕೆದಾರರ ಆಸಕ್ತಿ

ಅತಿವೈವಿಧ್ಯದ ಮಿತಿಯನ್ನು ಮೀರುವ ಉದ್ದೇಶದಿಂದಲೇ ರೂಪುಗೊಂಡಿದ್ದು ಫೋಕಸ್ಡ್​ ಮ್ಯೂಚುವಲ್​ ಫಂಡ್. ಇಂಥ ಫಂಡ್​ಗಳು ಸಾಮಾನ್ಯವಾಗಿ 20ರಿಂದ 30 ಕಂಪನಿಗಳಿಗಷ್ಟೇ ಹೂಡಿಕೆಯನ್ನು ಮಿತಗೊಳಿಸುತ್ತವೆ.

Mutual Fund: ಫೋಕಸ್ಡ್​ ಮ್ಯೂಚುವಲ್​ ಫಂಡ್​ಗಳ ಬಗ್ಗೆ ಕುದುರುತ್ತಿದೆ ಹೂಡಿಕೆದಾರರ ಆಸಕ್ತಿ
ಸಾಂದರ್ಭಿಕ ಚಿತ್ರ
Ghanashyam D M | ಡಿ.ಎಂ.ಘನಶ್ಯಾಮ
| Edited By: |

Updated on: Aug 31, 2021 | 9:07 AM

Share

ಹೂಡಿಕೆಯ ಬಗ್ಗೆ ಯಾರನ್ನೇ ಸಲಹೆ ಕೇಳಿದರೂ ಹೇಳುವ ಮೊದಲ ಮಾತು, ‘ವೈವಿಧ್ಯತೆ ಇರಲಿ. ಎಲ್ಲ ಹಣವನ್ನೂ ಒಂದೇ ಕಡೆ ಹಾಕಬೇಡಿ’. ಮ್ಯೂಚುವಲ್​ ಫಂಡ್​ಗಳ ವಿಚಾರದಲ್ಲಿಯೂ ಅಷ್ಟೇ. ನಿಮ್ಮ ಗುರಿಗೆ ತಕ್ಕಂತೆ ಈಕ್ವಿಟಿ, ಡೆಟ್, ಗೋಲ್ಡ್​- ಹೀಗೆ ವೈವಿಧ್ಯಮಯ ಆಯ್ಕೆಗಳ ಹದವರಿತ ಮಿಶ್ರಣದ ಪೋರ್ಟ್​ಫೋಲಿಯೊ ರೂಪಿಸಿಕೊಳ್ಳಿ ಎಂದು ಎಲ್ಲರೂ ಹೇಳುತ್ತಾರೆ.

ವೈವಿಧ್ಯತೆಯು ಅತಿಯಾದರೆ ಅದೂ ಒಂದು ಮಿತಿಯೂ ಆಗಿಬಿಡುತ್ತದೆ. ಇದೇ ಕಾರಣಕ್ಕೆ ಕೆಲವರು ಮ್ಯೂಚುವಲ್​ ಫಂಡ್​ಗಳಿಂದ ದೂರ ಉಳಿದು, ಸ್ವತಃ ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಹಲವು ಸೆಕ್ಟರ್​ಗಳ ನೂರಾರು ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಡೈವರ್ಸಿಫೈಡ್​ ಫಂಡ್​ಗಳು ನಿರೀಕ್ಷಿತ ಗ್ರೋತ್ ಕೊಡಲಾರವು ಎಂಬುದು ಇಂಥವರ ಆಕ್ಷೇಪ. ಸ್ವತಃ ಷೇರುಗಳ ಖರೀದಿ-ಮಾರಾಟ ನಿರ್ವಹಿಸಲು ಮುಂದಾಗುವ ಇಂಥವರು, ಸಮಯ ಕೊರತೆಯೂ ಸೇರಿದಂತೆ ಹತ್ತಾರು ಕಾರಣಗಳಿಂದ ಹಲವು ಬಾರಿ ನಷ್ಟ ಅನುಭವಿಸುತ್ತಾರೆ.

ಅತಿವೈವಿಧ್ಯದ ಮಿತಿಯನ್ನು ಮೀರುವ ಉದ್ದೇಶದಿಂದಲೇ ರೂಪುಗೊಂಡಿದ್ದು ಫೋಕಸ್ಡ್​ ಮ್ಯೂಚುವಲ್​ ಫಂಡ್. ಇಂಥ ಫಂಡ್​ಗಳು ಸಾಮಾನ್ಯವಾಗಿ 20ರಿಂದ 30 ಕಂಪನಿಗಳಿಗಷ್ಟೇ ಹೂಡಿಕೆಯನ್ನು ಮಿತಗೊಳಿಸುತ್ತವೆ. ಹೆಚ್ಚು ಕಂಪನಿಗಳಲ್ಲಿ ಹೂಡಿಕೆ ಮಾಡಬಾರದು ಎಂಬ ಷರತ್ತಿಗೆ ಅನುಗುಣವಾಗಿಯೇ ಫಂಡ್​ ಮ್ಯಾನೇಜರ್​ ಮತ್ತು ಫಂಡ್​ಹೌಸ್​ನ ಸಂಶೋಧನಾ ತಂಡ ಕಾರ್ಯನಿರ್ವಹಿಸುವುದರಿಂದ ಹೂಡಿಕೆದಾರರಿಗೆ ಸಾಮಾನ್ಯವಾಗಿ ಷೇರುಪೇಟೆಯ ಸೂಚ್ಯಂಕಕ್ಕಿಂತಲೂ ಹೆಚ್ಚಿನ ಪ್ರಮಾಣದ ಲಾಭ ಗಳಿಕೆಯ ಸಾಧ್ಯತೆಗಳು ಇರುತ್ತವೆ.

ಆದರೆ ಇದರಲ್ಲಿಯೂ ಅಪಾಯ ಇಲ್ಲ ಎಂದಲ್ಲ. ಇಂಥ ಫಂಡ್​ಗಳಲ್ಲಿ ಮಾರುಕಟ್ಟೆ ಪರಿಸ್ಥಿತಿಯ ಜೊತೆಗೆ ಫಂಡ್​ ಮ್ಯಾನೇಜರ್ ನಿರ್ಧಾರದ ಮೇಲೆ ಹೂಡಿಕೆಯ ಪ್ರತಿಫಲ ಅವಲಂಬಿತವಾಗಿರುತ್ತದೆ. ಎಲ್ಲವೂ ಚೆನ್ನಾಗಿದ್ದರೆ ಸರಿ, ಆದರೆ ಆರ್ಥಿಕತೆ ಕುಸಿತ ಮುನ್ನೋಟ ಅಥವಾ ಬೇರೆ ಕಾರಣಗಳಿಂದ ಷೇರುಪೇಟೆ ಕುಸಿಯಲು ಆರಂಭಿಸಿದರೆ ಇಂಥ ಫಂಡ್​ಗಳು ಅಗ್ನಿಪರೀಕ್ಷೆಯನ್ನೇ ಎದುರಿಸುತ್ತವೆ.

ಏಕೆಂದರೆ ಡೈವರ್ಸಿಫೈಡ್​ ಫಂಡ್​ಗಳಲ್ಲಿ ನೂರಾರು ಕಂಪನಿಗಳಲ್ಲಿ ಹೂಡಿಕೆ ಹಂಚಿಹೋಗಿರುತ್ತದೆ. ಹೀಗಾಗಿ ಮಾರುಕಟ್ಟೆಯ ಲಾಭ ಅಥವಾ ನಷ್ಟವು ಅಲ್ಲಿ ಪ್ರತಿಫಲಿತವಾಗುತ್ತದೆ. ಆದರೆ ಫೋಕಸ್ಡ್​ ಫಂಡ್​ಗಳಲ್ಲಿ ಕೆಲವೇ ಕಂಪನಿಗಳಲ್ಲಿ ಹೂಡಿಕೆ ನಡೆಯುವುದರಿಂದ ಬೇರೆಯದೇ ಲೆಕ್ಕಾಚಾರ ಚಾಲ್ತಿಯಲ್ಲಿರುತ್ತದೆ. ನಷ್ಟದ ಪ್ರಮಾಣವೂ ಹೆಚ್ಚಾಗಬಹುದಾ ಅಪಾಯ ಇರುತ್ತದೆ.

ಹೀಗಾಗಿಯೇ ಕನಿಷ್ಠ ಒಂದು ಆರ್ಥಿಕ ಆವರ್ತದಷ್ಟು (5 ವರ್ಷ) ಹೂಡಿಕೆ ಅವಧಿಯಿದ್ದರೆ ಮಾತ್ರ ಫೋಕಸ್ಡ್​ ಫಂಡ್​ಗಳಲ್ಲಿ ಹೂಡಿಕೆ ಮಾಡಿ ಎಂದು ವೈಯಕ್ತಿಕ ಹಣಕಾಸು ಸಲಹೆಗಾರರು ಸಲಹೆ ಮಾಡುತ್ತಾರೆ. 30 ವರ್ಷಕ್ಕೂ ಒಳಗಿರುವವರು ಮತ್ತು ಹೂಡಿಕೆ ಮಾಡಿ ಪ್ರತಿಫಲಕ್ಕಾಗಿ ಕಾಯುತ್ತೇವೆ ಎಂಬ ಮನಸ್ಥಿತಿ ಹೊಂದಿರುವವರಿಗೆ ಇದು ಹೇಳಿ ಮಾಡಿಸಿದ್ದು.

1ರಿಂದ 3 ವರ್ಷದ ಅವಧಿಯಲ್ಲಿ ಅತ್ಯುತ್ತಮ ಫೋಕಸ್ಡ್​ ಫಂಡ್​ಗಳ ಪಟ್ಟಿಯಲ್ಲಿ ಐಐಎಫ್​ಎಲ್ ಫೋಕಸ್ಡ್​ ಈಕ್ವಿಟಿ, ಎಸ್​ಬಿಐ ಫೋಕಸ್ಡ್​ ಈಕ್ವಿಟಿ, ಕ್ವಾಂಟ್ ಫೋಕಸ್ಡ್​, ಆ್ಯಕ್ಸಿಸ್ ಫೋಕಸ್ಡ್​ ಫಂಡ್​ಗಳು ಮುಂಚೂಣಿಯಲ್ಲಿವೆ ಎಂದು ‘ಗ್ರೂ’ ಜಾಲತಾಣ ತಿಳಿಸುತ್ತದೆ.

(ಗಮನಿಸಿ: ಮ್ಯೂಚುವಲ್ ಫಂಡ್​ಗಳ ಹೂಡಿಕೆ ಷೇರುಪೇಟೆ ಏರಿಳಿತಗಳ ಪ್ರಭಾವಕ್ಕೆ ಒಳಪಡುತ್ತವೆ. ಫಂಡ್​ ಸಂಬಂಧಿಸಿದ ಎಲ್ಲ ಮಾಹಿತಿ ತಿಳಿದುಕೊಂಡೇ ಹೂಡಿಕೆ ನಿರ್ಧಾರ ಮಾಡಿ. ಈ ಲೇಖನದ ಮೂಲಕ ಯಾವುದೇ ಫಂಡ್​ನಲ್ಲಿ ಹೂಡಿಕೆ ಮಾಡಬೇಕು ಎಂದು ಟಿವಿ9 ಕನ್ನಡ ಡಿಜಿಟಲ್ ಶಿಫಾರಸು ಮಾಡುತ್ತಿಲ್ಲ)

(Consumers showing interest for investments in focused mutual funds)

ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್​ ಎನ್​ಎಫ್​ಒಗಳಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತಾ?

ಇದನ್ನೂ ಓದಿ: How To: ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಮ್ಯೂಚುವಲ್​ ಫಂಡ್ ಹೂಡಿಕೆಗೆ ಇಲ್ಲಿದೆ ಐದು ಸರಳ ಟಿಪ್ಸ್​

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್