AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mutual Fund: ಮ್ಯೂಚುವಲ್ ಫಂಡ್​ ಎನ್​ಎಫ್​ಒಗಳಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತಾ?

ಎನ್​ಎಫ್​ಒಗಳಲ್ಲಿ ಹೂಡಿಕೆ ಅನಿವಾರ್ಯವೇ? ಅಂಥ ಹೂಡಿಕೆಯು ಸುರಕ್ಷಿತವೇ ಎಂಬ ಪ್ರಶ್ನೆಗಳು ಹೂಡಿಕೆದಾರರ ವಲಯದಲ್ಲಿ ಚರ್ಚೆಗೆ ಬರುತ್ತಿದೆ. ಎನ್​ಎಫ್​ಒ ಕುರಿತ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

Mutual Fund: ಮ್ಯೂಚುವಲ್ ಫಂಡ್​ ಎನ್​ಎಫ್​ಒಗಳಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತಾ?
ಸಾಂದರ್ಭಿಕ ಚಿತ್ರ
Ghanashyam D M | ಡಿ.ಎಂ.ಘನಶ್ಯಾಮ
| Updated By: Skanda|

Updated on: Aug 25, 2021 | 7:54 AM

Share

ಈಗ ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಹೊಸ ಫಂಡ್​ಗಳ ಸುರಿಮಳೆಯೇ ಆಗುತ್ತಿದೆ. ಮ್ಯೂಚುವಲ್ ಫಂಡ್​ಗಳನ್ನು ನಿರ್ವಹಿಸುವ ಎಎಂಸಿಗಳು (Asset Management Company – AMC) ಷೇರುಪೇಟೆ ಉತ್ತುಂಗದಲ್ಲಿದ್ದಾಗ ಎನ್​ಎಫ್​ಒ (New Fund Offer – NFO) ಘೋಷಿಸಿ, ಹೂಡಿಕೆದಾರರನ್ನು ಆಕರ್ಷಿಸುವುದು ವಾಡಿಕೆಯೇ ಆಗಿದೆ. ಎನ್​ಎಫ್​ಒಗಳಲ್ಲಿ ಹೂಡಿಕೆ ಅನಿವಾರ್ಯವೇ? ಅಂಥ ಹೂಡಿಕೆಯು ಸುರಕ್ಷಿತವೇ ಎಂಬ ಪ್ರಶ್ನೆಗಳು ಹೂಡಿಕೆದಾರರ ವಲಯದಲ್ಲಿ ಚರ್ಚೆಗೆ ಬರುತ್ತಿದೆ. ಮ್ಯೂಚುವಲ್ ಫಂಡ್​ ಹೂಡಿಕೆದಾರರನ್ನು ಕಾಡುವ ಎನ್​ಎಫ್​ಒ ಕುರಿತ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

ಎನ್​ಎಫ್​ಒ ಎಂದರೇನು? ಯಾವುದೇ ಎಎಂಸಿ ಒಂದು ಎನ್​ಎಫ್​ಒ ಘೋಷಿಸಿದಾಗ ಆರಂಭದ ಕೆಲವು ದಿನಗಳನ್ನು ಹೂಡಿಕೆಗೆ ತೆರೆದಿಡುತ್ತದೆ. ಈ ಅವಧಿಯಲ್ಲಿ ಫಂಡ್​ ಮ್ಯಾನೇಜರ್​ಗಳು ಆ ಫಂಡ್​ಗೆ ಬೇಕಿರುವ ಷೇರು ಅಥವಾ ಬಾಂಡ್​ಗಳನ್ನು ಆಯ್ಕೆ ಮಾಡಿಕೊಂಡು ಪೋರ್ಟ್​ಫೋಲಿಯೊ ನಿರ್ಮಿಸುತ್ತಾರೆ. ಷೇರುಪೇಟೆಯಲ್ಲಿ ಹೊಸ ಕಂಪನಿಯೊಂದು ಲಿಸ್ಟ್​ ಆಗುವ ನಡೆಯುವ ಐಪಿಒ ಜೊತೆಗೆ ಎನ್​ಎಫ್​ಒಗಳನ್ನು ಕೆಲವರು ಹೋಲಿಸುತ್ತಾರೆ. ವಾಸ್ತವದಲ್ಲಿ ಇವೆರೆಡೂ ಸಂಪೂರ್ಣ ಭಿನ್ನ. ಎನ್​ಎಫ್​ಒ ಅವಧಿ ಮುಗಿದ ನಂತರ ಫಂಡ್​ನ ಯೂನಿಟ್​ ಮೌಲ್ಯವನ್ನು ಫಂಡ್​ ಹೌಸ್ ಘೋಷಿಸಿ,​ ಸಾರ್ವಜನಿಕರು ಖರೀದಿಸಲು ಅವಕಾಶ ಮಾಡಿಕೊಡುತ್ತದೆ.

ಎನ್​ಎಫ್​ಒ ಹೂಡಿಕೆ ಸುರಕ್ಷಿತವೇ? ಮೊದಲೇ ಹೇಳಿದಂತೆ ಇದು ಐಪಿಒಗಿಂತ ಸಂಪೂರ್ಣ ಭಿನ್ನವಾದುದು. ಯಾವ ಫಂಡ್​ ಹೌಸ್​ನಿಂದ ಎಂಥ ಫಂಡ್​ ಘೋಷಣೆಯಾಗಿದೆ, ಫಂಡ್ ಮ್ಯಾನೇಜರ್ ಯಾರು ಎಂಬುದನ್ನು ಗಮನದಲ್ಲಿರಿಸಿಕೊಂಡೇ ಹೂಡಿಕೆಯ ನಿರ್ಧಾರ ತೆಗೆದುಕೊಳ್ಳಬೇಕು. ಈಗಾಗಲೇ ಮಾರುಕಟ್ಟೆಯಲ್ಲಿರುವ ಫಂಡ್​ಗಳ ಮಾದರಿಯಲ್ಲಿಯೇ ಹೊಸತೊಂದು ಫಂಡ್ ಬಂದರೆ ಅಂಥದ್ದನ್ನು ಪರಿಗಣಿಸುವ ಅಗತ್ಯ ಖಂಡಿತ ಇಲ್ಲ. ಆದರೆ ಇನ್ನೊವೇಟಿವ್ ಎನಿಸುವ ಹೊಸ ರೀತಿಯ ಫಂಡ್ (ಉದಾ: ಭಾರತ್ 22 ಇಟಿಫ್ ಅಥವಾ ಮೊತಿಲಾಲ್ ಒಸ್ವಾಲ್ ನಾಸ್​ಡಾಕ್ ಫಂಡ್ ಇತ್ಯಾದಿ) ಬಂದರೆ ಖಂಡಿತ ಹೂಡಿಕೆಗೆ ಪರಿಗಣಿಸಬಹುದು.

ಎನ್​ಎಫ್​ಒ ಹೂಡಿಕೆ ರಿಸ್ಕ್​ ಏಕೆ? ಮ್ಯೂಚುವಲ್ ಫಂಡ್​ಗಳನ್ನು ಅಳೆಯುವುದೇ ಅವುಗಳ ಈವರೆಗಿನ ಕಾರ್ಯಕ್ಷಮತೆಯಿಂದ (ಟ್ರ್ಯಾಕ್ ರೆಕಾರ್ಡ್). ಅದರ ಕಾರ್ಯಕ್ಷಮತೆ ನಿರೂಪಿತವಾಗುವುದೇ ಅದು ಎಷ್ಟು ಅವಧಿಯಲ್ಲಿ ಹೂಡಿಕೆದಾರರಿಗೆ ಎಷ್ಟು ಪ್ರತಿಫಲ ತಂದುಕೊಟ್ಟಿದೆ ಎಂಬುದು ಕಾರ್ಯಕ್ಷಮತೆಯನ್ನು ಅಳೆಯುವ ಬಹುಮುಖ್ಯ ಮಾನದಂಡ. ಒಂದು ಫಂಡ್​ನ ಕಾರ್ಯಕ್ಷಮತೆಗೆ ಅದರ ಫಂಡ್​ ಮ್ಯಾನೇಜರ್​ ರೂಪಿಸಿಕೊಳ್ಳುವ ಷೇರು-ಬಾಂಡ್​ಗಳ ಗುಚ್ಛವು ಬಹುಪಾಲು ಕಾರಣ. ಇವೆಲ್ಲವೂ ಕಾಲದ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಹೊಸ ಫಂಡ್​ ಸಹಜವಾಗಿಯೇ ಕಾಲದ ಪರೀಕ್ಷೆಗೆ ಒಡ್ಡಿಕೊಂಡಿರುವುದಿಲ್ಲ. ಹೀಗಾಗಿ ಎನ್​ಎಫ್​ಒಗಳಿಂದ ದೂರ ಉಳಿಯುವುದೇ ಜಾಣತನ ಎಂದು ಬಹುತೇಕ ವೈಯಕ್ತಿಕ ಹಣಕಾಸು ಸಮಾಲೋಚಕರು ಸಲಹೆ ಮಾಡುತ್ತಾರೆ.

ಬಹುತೇಕ ಸಂದರ್ಭದಲ್ಲಿ ಎನ್​ಎಫ್​ಒಗಳು ಆ ನಿರ್ದಿಷ್ಟ ಫಂಡ್​ಹೌಸ್​ಗೆ ಮಾತ್ರ ಹೊಸದು (ನ್ಯೂ) ಎನಿಸಿಕೊಂಡಿರುತ್ತದೆ. ಮಾರುಕಟ್ಟೆಯಲ್ಲಿ ಅದಾಗಲೇ ಅಂಥ ಹಲವು ಫಂಡ್​​ಗಳು ಲಭ್ಯವಿರುತ್ತವೆ. ಆದರೆ ಈ ಫಂಡ್​ನಲ್ಲಿ ಹೂಡಿಕೆ ಮಾಡದಿದ್ದರೆ ನೀವು ಏನೋ ಕಳೆದುಕೊಳ್ಳುತ್ತೀರಿ ಎನ್ನುವಂತೆ ಜಾಹೀರಾತಿನ ಮೋಡಿ ಹೆಣೆಯಲಾಗುತ್ತದೆ. ಇಂಥ ಸಂದರ್ಭದಲ್ಲಿ ವಿವೇಚನೆ ಬಳಸಿ ಹೂಡಿಕೆಯ ನಿರ್ಧಾರ ತೆಗೆದುಕೊಳ್ಳುವುದು ಜಾಣತನವಾಗುತ್ತದೆ.

ಅಂಕಿಅಂಶ ಪ್ರಸ್ತುತ ವಿವಿಧ ಮ್ಯೂಚುವಲ್ ಫಂಡ್​ಹೌಸ್​ಗಳ 40 ಎನ್​ಎಫ್​ಒಗಳು ಘೋಷಣೆಯ ದಿನಾಂಕ ಎದುರು ನೋಡುತ್ತಿವೆ. 2021ರ ಬ್ಲಾಕ್​ಬಸ್ಟರ್​ ಎನ್​ಎಫ್​ಒ ಐಸಿಐಸಿಐ ಪ್ರು ಫ್ಲೆಕ್ಸಿಕ್ಯಾಪ್ ಫಂಡ್. ಇದು ಸಂಗ್ರಹಿಸಿದ್ದ ಮೊತ್ತ ₹ 9800 ಕೋಟಿ. 2006ರಲ್ಲಿ ಬಿಡುಗಡೆಯಾಗಿದ್ದ ರಿಲಯನ್ಸ್​ ಎಎಂಸಿಯ ಫೋಕಸ್ಡ್​ ಲಾರ್ಜ್​ಕ್ಯಾಪ್ ಸಂಗ್ರಹಿಸಿದ್ದ ಮೊತ್ತ ₹ 5690 ಕೋಟಿ. ಇದು 2ನೇ ಅತಿದೊಡ್ಡ ಮೊತ್ತ ಎನಿಸಿಕೊಂಡಿದೆ.

(Mutual Fund NFOs Are the Profitable explainer in Kannada)

ಇದನ್ನೂ ಓದಿ: How To: ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಮ್ಯೂಚುವಲ್​ ಫಂಡ್ ಹೂಡಿಕೆಗೆ ಇಲ್ಲಿದೆ ಐದು ಸರಳ ಟಿಪ್ಸ್​

ಇದನ್ನೂ ಓದಿ: Mutual Funds CAS: ಮ್ಯೂಚುವಲ್​ ಫಂಡ್​ ಹೂಡಿಕೆದಾರರೆ? ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ ಬಗ್ಗೆ ಗೊತ್ತೆ?

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ