Mutual Funds CAS: ಮ್ಯೂಚುವಲ್​ ಫಂಡ್​ ಹೂಡಿಕೆದಾರರೆ? ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ ಬಗ್ಗೆ ಗೊತ್ತೆ?

Mutual Fund CAS: ಮ್ಯೂಚುವಲ್ ಫಂಡ್ ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್​ ಬಗ್ಗೆ ಹೂಡಿಕೆದಾರರಿಗೆ ಗೊತ್ತಿರಬೇಕಾದ ಸಂಗತಿಗಳೇನು? ಇಲ್ಲಿದೆ ಪ್ರಮುಖ ಮಾಹಿತಿ.

Mutual Funds CAS: ಮ್ಯೂಚುವಲ್​ ಫಂಡ್​ ಹೂಡಿಕೆದಾರರೆ? ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ ಬಗ್ಗೆ ಗೊತ್ತೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 18, 2021 | 5:55 PM

ನೀವು ಮ್ಯೂಚುವಲ್ ಫಂಡ್ ಹೂಡಿಕೆದಾರರಾಗಿದ್ದಲ್ಲಿ ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ (CAS) ಬರುತ್ತಿರುತ್ತದೆ. ಒಂದು ತಿಂಗಳಲ್ಲಿ (ಆಯಾ ತಿಂಗಳು) ಎಲ್ಲ ಮ್ಯೂಚುವಲ್​ ಫಂಡ್​ಗಳಲ್ಲಿ ಸೇರಿ ನಡೆಸಿದ ಹಣಕಾಸು ವ್ಯವಹಾರ ಮಾಹಿತಿಯನ್ನು ಕಳುಹಿಸಲಾಗುತ್ತದೆ. ಆ CAS ಅನ್ನು ಎಲೆಕ್ಟ್ರಾನಿಕ್ ಫಾರ್ಮ್​ನಲ್ಲಿ (eCAS) ಹಾಗೂ ಕಾಗದ ರೂಪದಲ್ಲಿ ಕೂಡ ದೊರೆಯುತ್ತದೆ. ಇದರಿಂದ ಹೆಚ್ಚಿನ ಮೌಲ್ಯ, ಅನುಕೂಲ ಹಾಗೂ ಭದ್ರತೆ ಕೂಡ ಒದಗಿಸುತ್ತದೆ. ಎಲೆಕ್ಟ್ರಾನಿಕ್ ಸಂಗ್ರಹ ಮತ್ತು ಯಾವುದೇ ಸಂದರ್ಭದಲ್ಲಿ ಹಾಗೂ ಎಲ್ಲಿಂದ ಬೇಕಾದರೂ ಸಂಪರ್ಕಿಸಬಹುದು. ಹೂಡಿಕೆದಾರರ ಪೈಕಿ ಎಷ್ಟು ಮಂದಿ ಈ ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್​ಮೆಂಟ್ ಪೂರ್ಣ ಪ್ರಮಾಣದಲ್ಲಿ ನೋಡುತ್ತೇವೋ? CAS ಎಂಬುದು ಸರಳವಾಗಿ ಹೇಳಬೇಕೆಂದರೆ, ಹೂಡಿಕೆದಾರರಾಗಿ ಯಾವ್ಯಾವ ಮ್ಯೂಚುವಲ್ ಫಂಡ್​ಗಳಲ್ಲಿ ನಿಮ್ಮ ಹೂಡಿಕೆ ಇದೆ ಎಂದು ತಿಳಿಸುವ ಸ್ಟೇಟ್​ಮೆಂಟ್. ಒಂದು ಪ್ಯಾನ್​ ನಂಬರ್ ಅಡಿಯಲ್ಲಿ ಸಿಡಿಎಸ್​ಎಲ್ ಅಥವಾ ಎನ್​ಎಸ್​ಡಿಎಲ್​ನ ಡಿಮ್ಯಾಟ್​ ಖಾತೆಯಲ್ಲಿ ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಮ್ಯೂಚುವಲ್ ಫಂಡ್ ಹೊಂದಿದ್ದರೆ ಈ ಸಿಎಎಸ್ ಕಳುಹಿಸಲಾಗುತ್ತದೆ. ಹೂಡಿಕೆದಾರರ ಮ್ಯೂಚುವಲ್ ಫಂಡ್​ಗಳ ಮಾಹಿತಿಯನ್ನು ಮತ್ತು ಡೆಪಾಸಿಟರಿ ಖಾತೆಗಳನ್ನು ಸಿಎಎಸ್ ಒದಗಿಸುತ್ತದೆ.

ಸಿಎಎಸ್ ಯಾವಾಗ ಜನರೇಟ್ ಆಗುತ್ತದೆ? ಕಂಪ್ಯೂಟರ್ ಏಜ್ ಮ್ಯಾನೇಜ್​ಮೆಂಟ್ ಸರ್ವೀಸಸ್ (ಸಿಎಎಂಎಸ್) ಮತ್ತು ಕಾರ್ವಿ ಕೂಡ ಹೂಡಿಕೆದಾರರಿಗೆ ಸರಾಸರಿ ಸ್ಟೇಟ್​ಮೆಂಟ್​ಗಳನ್ನು ಒಂದು ಪ್ಯಾನ್ ಅಡಿಯಲ್ಲಿ ಪಡೆಯಲು ಅವಕಾಶ ಒದಗಿಸುತ್ತದೆ. ಆದರೆ ಅದನ್ನು ಮಾಡುವುದಕ್ಕಾಗಿ ಹೂಡಿಕೆದಾರರು ತಮ್ಮ ಇಮೇಲ್ ವಿಳಾಸವನ್ನು ರಿಜಿಸ್ಟ್ರಾರ್ ಅಂಡ್ ಟ್ರಾನ್ಸ್​ಫರ್ ಏಜೆನ್ಸಿ (RTA) ಅಂತ ನೋಂದಣಿ ಮಾಡಿಸಿರಬೇಕು. ಇದನ್ನು ಪ್ರತಿ ತಿಂಗಳು ಜನರೇಟ್ ಮಾಡಲಾಗುತ್ತದೆ. ಒಂದು ಸಾಮಾನ್ಯ PAN ಜತೆಗೆ ಆರ್​ಟಿಎ ಮತ್ತು ಡೆಪಾಸಿಟರಿಗಳೊಂದಿಗೆ ಮಾಡಲಾಗುತ್ತದೆ.

ಇದನ್ನು ಅರ್ಥ ಮಾಡಿಕೊಳ್ಳುವುದು ಹೂಡಿಕೆದಾರರಿಗೆ ಯಾಕಿಷ್ಟು ಮುಖ್ಯ? -ಹಣಕಾಸು ವ್ಯವಹಾರಗಳಾದ ಯೂನಿಟ್ ಖರೀದಿಗಳು, ರಿಡೆಂಪ್ಷನ್​ಗಳು, ಅದರಲ್ಲೂ ಮೆಚ್ಯೂರಿಟಿ ಪಾವತಿಗಳು, ಸ್ವಿಚ್​ಗಳು, ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್​ ಪ್ಲಾನ್ (ಎಸ್​ಐಪಿ), ಸಿಸ್ಟಮ್ಯಾಟಿಕ್ ವಿಥ್​ಡ್ರಾ ಪ್ಲಾನ್ (ಎಸ್​ಡಬ್ಲ್ಯುಪಿ), ಸಿಸ್ಟಮ್ಯಾಟಿಕ್ ಟ್ರಾನ್ಸ್​ಫರ್ ಪ್ಲಾನ್ (ಎಸ್​ಟಿಪಿ), ಡಿವಿಡೆಂಡ್ ಪಾವತಿ ಅಥವಾ ಡಿವಿಡೆಂಡ್​ಗಳ ಪುನರ್​ಹೂಡಿಕೆ, ಹೂಡಿಕೆಗಳ ವಿಲೀನ, ಬೋನಸ್ ಯೂನಿಟ್ ವಿತರಣೆ ಈ ರೀತಿಯದ್ದು ಸಿಎಎಸ್​ ಮೂಲಕ ಗೊತ್ತಾಗುತ್ತದೆ

-ವಿಳಾಸ ಬದಲಾವಣೆ, ಬ್ಯಾಂಕ್​ ಅಕೌಂಟ್ ಮಾಹಿತಿ, ನಾಮಿನೇಷನ್ ನೋಂದಣಿ ಮತ್ತು ಇತರ ಹಣಕಾಸೇತರ ವಹಿವಾಟುಗಳು ಒಳಗೊಳ್ಳುತ್ತವೆ.

– ಹಿಂದಿನ ತಿಂಗಳಲ್ಲಿ ನಡೆದ ವಹಿವಾಟುಗಳು ದೊರೆಯುತ್ತವೆ (ಮಾನ್ಯತೆ ಹೊಂದಿದ ಪ್ಯಾನ್ ಸಂಖ್ಯೆಗೆ ಸಂಬಂಧಿಸಿದ ಹೂಡಿಕೆದಾರರ ಫೋಲಿಯೋ). ಉದಾಹರಣೆಗೆ, ವ್ಯಕ್ತಿಯೊಬ್ಬರಿಗೆ ಮೂರು ಪೋರ್ಟ್​ಫೋಲಿಯೋಗಳು ಇದ್ದು, ಅದರಲ್ಲಿ ಎರಡು ಮಾತ್ರ ವಹಿವಾಟು ನಡೆಸುತ್ತಿದ್ದಲ್ಲಿ, ಆ ತಿಂಗಳಿಗೆ ಸಿಎಎಸ್ ಸಕ್ರಿಯ ಆಗಿರುವ ಎರಡು ಆ್ಯಕ್ಟಿವ್ ಪೋರ್ಟ್​ಫೋಲಿಯೋಗಳನ್ನು ತೋರಿಸುತ್ತದೆ. ಮೂರನೆಯದು ತೋರಿಸುವುದಿಲ್ಲ.

-ಒಂದು ವೇಳೆ ಯಾವುದೇ ವಹಿವಾಟು ನಡೆಸದಿದ್ದಲ್ಲಿ ಆ ತಿಂಗಳು ಸಿಎಎಸ್​ ವಿತರಣೆ ಮಾಡುವುದಿಲ್ಲ.

-ಒಂದು ವೇಳೆ ಯಾರಾದರೂ ಹೂಡಿಕೆದಾರರು ಏನೇ ವಹಿವಾಟು ನಡೆಸದಿದ್ದಲ್ಲಿ ಸಿಎಎಸ್​ ಅನ್ನು ಪ್ರತಿ ಆರು ತಿಂಗಳಿಗೊಮ್ಮೆ ಸೆಪ್ಟೆಂಬರ್/ಮಾರ್ಚ್​ನಲ್ಲಿ ವಿತರಿಸಲಾಗುತ್ತದೆ.

– ಆಯಾ ಮ್ಯೂಚುವಲ್ ಫಂಡ್​ಗಳ ಬಳಿ ಇಮೇಲ್ ಐಡಿ ನೋಂದಣಿ ಮಾಡಿಸಿದಲ್ಲಿ ಹಣಕಾಸು ವಹಿವಾಟು ನಡೆಸಿದ ಐದು ದಿನದೊಳಗೆ ಪಿಡಿಎಫ್​ ದಾಖಲಾತಿ ದೊರೆಯುತ್ತದೆ.

– ಪರಿಣಾಮಕಾರಿ ಹೂಡಿಕೆ ನಿರ್ವಹಣೆ ವ್ಯೂಹ ರೂಪಿಸುವುದಕ್ಕೆ ಹೂಡಿಕೆದಾರರಿಗೆ ಸಿಎಎಸ್​ ನೆರವು ನೀಡುತ್ತದೆ. ಕಡಿಮೆ ಕಾಗದ ಪತ್ರಗಳಲ್ಲಿ ಇದಾಗುತ್ತದೆ. ಕಾಲಕಾಲಕ್ಕೆ ಪಡೆದ ರಿಡೆಂಪ್ಷನ್​ಗಳು ಹಾಗೂ ಡಿವಿಡೆಂಡ್​ಗಳನ್ನು ಬಗ್ಗೆ ಸಿಎಎಸ್ ತೋರಿಸುತ್ತದೆ.​

– ತೆರಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಿಎಎಸ್ ಬಹಳ ಮೌಲ್ಯಯುತವಾದದ್ದು. ಸಿಎಎಸ್​ ಮೂಲಕ ಎಲ್ಲ ಮ್ಯೂಚುವಲ್ ಫಂಡ್​ಗಳ ಫೋಲಿಯೋಗಳಿಗೆ ಒಂದೇ ಕಡೆ ಸಂಪರ್ಕ ದೊರಕಿಸುತ್ತದೆ.

ಇದನ್ನೂ ಓದಿ: ELSS Mutual Fund Tax Savings Planning: ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಹೂಡಿಕೆ ವರ್ಷದ ಆರಂಭದಲ್ಲೇ ಯೋಚಿಸಿ

(What is Consolidated Account Statement (CAS)? Why it is important to mutual fund investors. Here is the details)

Published On - 5:54 pm, Fri, 18 June 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ