AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿ ಸಂಬಳ ಪಡೆಯುತ್ತಿದ್ದ ಎಂಜಿನಿಯರ್ ಈಗ ಫುಡ್ ಡೆಲಿವರಿ ಬಾಯ್; ಇದು ಭಾರತದ ಕಥೆಯಲ್ಲ, ಅಮೆರಿಕದ್ದು

Story of US software engineer who lost job: ಅಮೆರಿಕದ ಸಾಫ್ಟ್​​ವೇರ್ ಎಂಜಿನಿಯರ್ ಶಾನ್ ಕೇ ಎಂಬಾತನ ಭಯಾನಕ ಕಥೆ ಇದು. ತಿಂಗಳುಗಳ ಹಿಂದೆ ವರ್ಷಕ್ಕೆ ಕೋಟಿ ರೂಗಿಂತ ಹೆಚ್ಚು ಸಂಬಳ ಪಡೆಯುತ್ತಿದ್ದ ಈತ ಇವತ್ತು ಫೂಡ್ ಡೆಲಿವರಿ ಕೆಲಸ ಮಾಡುತ್ತಿದ್ದಾನೆ. ಮೆಟಾವರ್ಸ್ ಎಂಜಿನಿಯರ್ ಆಗಿದ್ದ ಈತನಿಗೆ ಈಗ ಜನರೇಟಿವ್ ಎಐ ಟೆಕ್ನಾಲಜಿ ಆಗಮನದಿಂದ ಕೆಲಸ ಇಲ್ಲದಂತಾಗಿದೆ.

ಕೋಟಿ ಸಂಬಳ ಪಡೆಯುತ್ತಿದ್ದ ಎಂಜಿನಿಯರ್ ಈಗ ಫುಡ್ ಡೆಲಿವರಿ ಬಾಯ್; ಇದು ಭಾರತದ ಕಥೆಯಲ್ಲ, ಅಮೆರಿಕದ್ದು
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 21, 2025 | 6:12 PM

Share

ನವದೆಹಲಿ, ಮೇ 21: ತಂತ್ರಜ್ಞಾನ ಯಾವ ಪರಿ ಬದಲಾಗುತ್ತಿದೆ ಎಂದರೆ ಇವತ್ತು ಆವಿಷ್ಕಾರಗೊಂಡಿದ್ದು ನಾಳೆ ಅಪ್ರಸ್ತುತವೆನಿಸಿಬಿಡುತ್ತದೆ. ಈ ಆವಿಷ್ಕಾರದ ಹುಚ್ಚುಹೊಳೆಯಲ್ಲಿ ಮುಳುಗಿದವರೆಷ್ಟೋ, ಕೊಚ್ಚಿ ಹೋದವರೆಷ್ಟೋ ಗೊತ್ತಿಲ್ಲ. ಅಮೆರಿಕದ ಸಾಫ್ಟ್​​ವೇರ್ ಎಂಜಿನಿಯರೊಬ್ಬನ (software engineer) ಕಥೆ ಮುಂಬರುವ ದಿನಗಳ ಕಠೋರತೆಯ ಸುಳಿವು ನೀಡುತ್ತದೆ.

ಕೆಲವೇ ತಿಂಗಳ ಹಿಂದೆ 1,50,000 ಲಕ್ಷ ಡಾಲರ್ (1.28 ಕೋಟಿ ರೂ) ವಾರ್ಷಿಕ ಸಂಪಾದನೆ ಗಳಿಸುತ್ತಿದ್ದ 42 ವರ್ಷದ ಶಾನ್ ಕೇ (Shawn Kay) ಅವರು ಇವತ್ತು ಫುಡ್ ಡೆಲಿವರಿ ಕೆಲಸಗಳನ್ನು ಮಾಡುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ಶಾನ್ ಕೇ ಮೆಟಾವರ್ಸ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವತ್ತು ಚ್ಯಾಟ್​ಜಿಪಿಟಿಯಂತ ಎಐ ಮಾಡಲ್​​ಗಳು ಬೂಮ್ ಆಗತೊಡಗಿವೆ. ಹಿಂದೆ ದೊಡ್ಡ ಟ್ರೆಂಡ್ ಸೃಷ್ಟಿಸಿದ್ದ ಮೆಟಾವರ್ಸ್​ನಂತಹ ಕ್ಷೇತ್ರ ದಿಕ್ಕಿಲ್ಲದಂತಾಗಿದೆ. ಶಾನ್ ಕೇ ಅವರಂತಹ ಹಲವು ಜನರು ಇವತ್ತು ಉದ್ಯೋಗ ಕಳೆದುಕೊಂಡು ಒದ್ದಾಡುತ್ತಿದ್ದಾರೆ.

ಇದನ್ನೂ ಓದಿ
Image
ಹೊಸ ಮಾದರಿಯ ಫೋನ್ ತರಲಿದೆ ಓಪನ್​ಎಐ
Image
ಟ್ರಂಪ್​ರಿಂದ ರೆಮಿಟೆನ್ಸ್ ಬರೆ; ಭಾರತಕ್ಕೆ ಹೊರೆ
Image
ಈ ಕಂಪನಿಯಲ್ಲಿ ಉಚಿತ ಶೌಚಾಲಯ, ಉಚಿತ ಲಿಫ್ಟ್, ನೈಟ್ ಸ್ನಾಕ್ಸ್
Image
ಖರ್ಚು ಮಾಡಿದ ದುಡ್ಡನ್ನೆಲ್ಲಾ ವಾಪಸ್ಸು ಕೊಡು ಎಂದ ಮಾಜಿ ಪ್ರಿಯಕರ

ಇದನ್ನೂ ಓದಿ: ಕೀಪ್ಯಾಡ್ ಇಲ್ಲ, ಟಚ್ ಸ್ಕ್ರೀನ್ ಇಲ್ಲ: ಸ್ಮಾರ್ಟ್​​ಫೋನ್​ಗಿಂಥ ಪೂರ್ಣ ಭಿನ್ನವಾದ ಸಾಧನ ತಯಾರಿಸುತ್ತಿರುವ ಓಪನ್​​ಎಐ

ಕಳೆದ ಏಪ್ರಿಲ್​​ನಲ್ಲಿ ಕೆಲಸ ಕಳೆದುಕೊಂಡ ಶಾನ್ ಕೇ ಹೊಸ ಕೆಲಸಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ವರ್ಚುವಲ್ ರಿಯಾಲಿಟಿ, ಎಐ, ವೆಬ್ ಡೆವಲಪ್ಮೆಂಟ್ ಇತ್ಯಾದಿ ಕೌಶಲ್ಯಗಳಲ್ಲಿ ಪಳಗಿದರೂ ಕೇಗೆ ಕೆಲಸ ಸಿಗುತ್ತಿಲ್ಲ. ಜನರೇಟಿವ್ ಎಐ ಟೆಕ್ನಾಲಜಿಯು ಜಾಬ್ ಮಾರ್ಕೆಟ್ ಅನ್ನು ಅಲುಗಾಡಿಸಿದೆ ಎನ್ನುತ್ತಾರೆ ಅವರು.

ಎಚ್​​ಆರ್ ಅಲ್ಲ, ಯಂತ್ರಗಳು ಮನುಷ್ಯರನ್ನು ಇಂಟರ್​​ವ್ಯೂ ಮಾಡುತ್ತಿವೆ…

ಶಾನ್ ಕೇ ಅವರು ಕೆಲಸಕ್ಕಾಗಿ 800 ಕಡೆ ಅರ್ಜಿಗಳನ್ನು ಹಾಕಿದ್ದಾರೆ. ಇದರಲ್ಲಿ ಸಂದರ್ಶನಕ್ಕೆ ಕರೆಯಾಗಿದ್ದು 10 ಮಾತ್ರ. ಈ ಹತ್ತರಲ್ಲೂ ಹೆಚ್ಚಿನ ಇಂಟರ್​​ವ್ಯೂಗಳು ವ್ಯಕ್ತಿಗಳೊಂದಿಗೆ ಇರಲಿಲ್ಲ ಎನ್ನುವುದು ವಿಶೇಷ. ಯಂತ್ರಗಳು ಮನುಷ್ಯರನ್ನು ಸಂದರ್ಶಿಸುತ್ತಿರುವ ಪರಿಸ್ಥಿತಿ ಬಂತು.

‘ನಾನು ಎಐ ವಿರೋಧಿಯಲ್ಲ. ಆದರೆ, ಎಲ್ಲದಕ್ಕೂ ಎಐ ಬಳಸುವುದನ್ನು ವಿರೋಧಿಸುತ್ತೇನೆ. ಎಐನ ಶಕ್ತಿ ಬಗ್ಗೆ ನನಗೆ ನಂಬಿಕೆ ಇದೆ. ಆದರೆ, ಅದನ್ನು ತಪ್ಪಾಗಿ ಬಳಕೆ ಮಾಡಲಾಗುತ್ತಿದೆ. ಪ್ರತಿಭಾನ್ವಿತ ವ್ಯಕ್ತಿಗೆ ಎಐ ಶಕ್ತಿಯಾಗಬೇಕೇ ಹೊರತು, ವ್ಯಕ್ತಿಯ ಸ್ಥಾನಕ್ಕೆ ಎಐ ಅನ್ನು ಕೂರಿಸಬಾರದು’ ಎಂದು ಶಾನ್ ಕೇ ಹೇಳುತ್ತಾರೆ.

ಇದನ್ನೂ ಓದಿ: ರೆಮಿಟೆನ್ಸ್ ಟ್ಯಾಕ್ಸ್ ಹೇರಲು ಹೊರಟ ಟ್ರಂಪ್ ಸರ್ಕಾರ; ಭಾರತಕ್ಕೆ ಭಾರೀ ಹೊಡೆತ; ಪಾಕಿಸ್ತಾನಕ್ಕೆ ಮತ್ತೂ ಸಂಕಟ

ಇವತ್ತು ಉದ್ಯೋಗ ಮಾರುಕಟ್ಟೆಯಲ್ಲಿ ನೇಮಕಾತಿ ಎಲ್ಲವೂ ಆಟೊಮೇಟೆಡ್ ಆಗಿವೆ. ಮನುಷ್ಯ ಮನುಷ್ಯರ ಮಧ್ಯೆ ಸಂವಹನ ಇಲ್ಲವಾಗಿದೆ. ಕೆಲಸಕ್ಕೆ ಸಲ್ಲಿಸಿದ ಅರ್ಜಿಗಳನ್ನು ಎಚ್​​ಆರ್​​ಗಳು ನೋಡುವ ಮೊದಲೇ ಯಂತ್ರಗಳೇ ಫಿಲ್ಟರ್ ಮಾಡುತ್ತಿವೆಯಂತೆ.

ಶಾನ್ ಕೇ ಅವರು ಸದ್ಯ ಇಬೇ ಪ್ಲಾಟ್​​ಫಾರ್ಮ್​​ಗಳಲ್ಲಿ ಸೇಲ್ಸ್ ಕೆಲಸ ಮಾಡುತ್ತಿದ್ದಾರೆ. ಸಮಯ ಸಿಕ್ಕಾಗೆಲ್ಲಾ ಫೂಡ್ ಡೆಲಿವರಿ ಕೆಲಸ ಮಾಡುತ್ತಾರೆ. ಕಾರ್ ಡ್ರೈವರ್ ಕೆಲಸ ಮಾಡಲೂ ಅಣಿಯಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:11 pm, Wed, 21 May 25

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ