AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trump: ರೆಮಿಟೆನ್ಸ್ ಟ್ಯಾಕ್ಸ್ ಹೇರಲು ಹೊರಟ ಟ್ರಂಪ್ ಸರ್ಕಾರ; ಭಾರತಕ್ಕೆ ಭಾರೀ ಹೊಡೆತ; ಪಾಕಿಸ್ತಾನಕ್ಕೆ ಮತ್ತೂ ಸಂಕಟ

India may lose big income if Trump taxes remittances: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಶೇ. 5ರಷ್ಟು ರೆಮಿಟೆನ್ಸ್ ಟ್ಯಾಕ್ಸ್ ಹಾಕಲು ಯೋಜಿಸಿದೆ. ಇದೇನಾದರೂ ಜಾರಿಯಾದಲ್ಲಿ ಭಾರತಕ್ಕೆ ರೆಮಿಟೆನ್ಸ್ ರೂಪದಲ್ಲಿ ಬರುತ್ತಿದ್ದ ಬಿಲಿಯನ್​​ಗಟ್ಟಲೆ ಆದಾಯ ಕೈತಪ್ಪಬಹುದು. ಬೇರೆ ಬೇರೆ ದೇಶಗಳಲ್ಲಿರುವ ಭಾರತೀಯರು ಭಾರತಕ್ಕೆ ಕಳುಹಿಸಿಕೊಡುವ ಹಣ ಒಂದು ವರ್ಷದಲ್ಲಿ 120 ಬಿಲಿಯನ್ ಡಾಲರ್ ಇದೆ. ಅಮೆರಿಕವೊಂದರಿಂದಲೇ 32 ಬಿಲಿಯನ್ ಡಾಲರ್ ರೆಮಿಟೆನ್ಸ್ ಬರುತ್ತದೆ. ಈ ಹಣಕ್ಕೆ ಟ್ರಂಪ್ ಟ್ಯಾಕ್ಸ್ ಹಾಕುತ್ತಿದ್ದಾರೆ.

Trump: ರೆಮಿಟೆನ್ಸ್ ಟ್ಯಾಕ್ಸ್ ಹೇರಲು ಹೊರಟ ಟ್ರಂಪ್ ಸರ್ಕಾರ; ಭಾರತಕ್ಕೆ ಭಾರೀ ಹೊಡೆತ; ಪಾಕಿಸ್ತಾನಕ್ಕೆ ಮತ್ತೂ ಸಂಕಟ
ರೆಮಿಟೆನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 21, 2025 | 11:40 AM

Share

ನವದೆಹಲಿ, ಮೇ 21: ಭಾರತದ ವಿರುದ್ಧ ಪ್ರತಿಸುಂಕ ಹೇರಿ ನಿದ್ದೆಗೆಡಿಸಿದ್ದ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಈಗ ಮತ್ತೊಂದು ದೊಡ್ಡ ಕ್ರಮಕ್ಕೆ ಮುಂದಾಗಿದೆ. ವರದಿಗಳ ಪ್ರಕಾರ, ಅಮೆರಿಕ ಸರ್ಕಾರ ರೆಮಿಟೆನ್ಸ್ ಟ್ಯಾಕ್ಸ್ (Tax on Remittances) ಹೇರಿಕೆ ಮಾಡಲು ಯೋಜಿಸಿದೆಯಂತೆ. ವಲಸೆಗಳಿಗೆ (immigration) ಕಡಿವಾಣ ಹಾಕುವ ಕ್ರಮಗಳ ಜೊತೆಗೆ ಈಗ ರೆಮಿಟೆನ್ಸ್​​ಗೆ ತೆರಿಗೆಯನ್ನೂ ಹಾಕಿದರೆ ಭಾರತಕ್ಕೆ ಡಬಲ್ ಹೊಡೆತ ಬೀಳುವ ಸಾಧ್ಯತೆ ಇದೆ. ಅಮೆರಿಕಕ್ಕೆ ಹೋಗಿ ಕೆಲಸ ಮಾಡುತ್ತಾ ಅಲ್ಲಿಂದ ಭಾರತಕ್ಕೆ ಹಣ ಕಳುಹಿಸುತ್ತಿರುವ ಭಾರತೀಯರ ಸಂಖ್ಯೆ ಬಹಳ ಇದೆ. ಈ ರೀತಿ ರೆಮಿಟೆನ್ಸ್​​ನಿಂದ ಭಾರತಕ್ಕೆ ಹೇರಳ ಆದಾಯ ಸಿಗುತ್ತದೆ. ಈ ಆದಾಯಕ್ಕೆ ಟ್ರಂಪ್ ಕಲ್ಲೆಸೆಯಲು ಹೊರಟಿದ್ದಾರೆ. ಪಾಕಿಸ್ತಾನದಂತಹ (Pakistan) ದೇಶಗಳಿಗೆ ಇನ್ನೂ ದೊಡ್ಡ ಹೊಡೆತ ಬೀಳುವ ನಿರೀಕ್ಷೆ ಇದೆ.

ರೆಮಿಟೆನ್ಸ್ ಎಂದರೇನು? ಟ್ರಂಪ್ ಏನು ಕ್ರಮ ಕೈಗೊಳ್ಳುತ್ತಾರೆ?

ರೆಮಿಟೆನ್ಸ್ ಎಂಬುದು ಒಂದು ವಿಧದ ಹಣ ವರ್ಗಾವಣೆ. ಸಾಮಾನ್ಯವಾಗಿ ಒಂದು ದೇಶದ ಜನರು ಬೇರೆ ದೇಶಕ್ಕೆ ಕೆಲಸಕ್ಕೆ ಹೋಗಿ ತಮ್ಮ ಸಂಪಾದನೆಯ ಹಣವನ್ನು ತವರು ನಾಡಿಗೆ ಕಳುಹಿಸಿಕೊಡುವುದಕ್ಕೆ ರೆಮಿಟೆನ್ಸ್ ಎನ್ನುವುದು. ಈಗ ಈ ರೆಮಿಟೆನ್ಸ್ ಹಣಕ್ಕೆ ಟ್ರಂಪ್ ಸರ್ಕಾರ ಶೇ. 5ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಮಾಡಿದೆ. ಇದು ಭಾರತ ಮೊದಲಾದ ದೇಶಗಳ ಆದಾಯಕ್ಕೆ ಕುತ್ತು ತರುವ ಆಲೋಚನೆ.

ರೆಮಿಟೆನ್ಸ್​​ನಿಂದ ಭಾರತಕ್ಕೆ ಎಷ್ಟು ಆದಾಯ ಇದೆ…?

ವಿಶ್ವಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಸಮುದಾಯದವರು ಹರಡಿದ್ದಾರೆ. ಅಮೆರಿಕ, ಗಲ್ಫ್ ಭಾಗಗಳಲ್ಲಿ ಅತಿಹೆಚ್ಚು ಭಾರತೀಯರಿದ್ದಾರೆ. ಬ್ರಿಟನ್, ಆಸ್ಟ್ರೇಲಿಯಾ ಇತ್ಯಾದಿ ಕಡೆಯೂ ಸಾಕಷ್ಟು ಭಾರತೀಯರಿದ್ದಾರೆ. ಇಲ್ಲಿ ಕೆಲಸಕ್ಕೆ ಹೋಗಿ ತಾತ್ಕಾಲಿಕವಾಗಿ ನೆಲಸುವವರೆಲ್ಲರೂ ತಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಭಾರತದಲ್ಲಿರುವ ತಮ್ಮ ಕುಟುಂಬಕ್ಕೆ ತಪ್ಪದೇ ಕಳುಹಿಸಿಕೊಡುತ್ತಾರೆ. ಬೇರೆ ದೇಶಗಳಲ್ಲಿ ಪೌರತ್ವ ಪಡೆದು ನೆಲಸಿರುವ ಅನಿವಾಸಿ ಭಾರತೀಯರೂ ಕೂಡ ತವರಿಗೆ ಹಣ ಕಳುಹಿಸಿಕೊಡಬಹುದು. ಬ್ಲೂಮ್​ಬರ್ಗ್ ವರದಿ ಪ್ರಕಾರ, ಈ ರೀತಿಯಾಗಿ ಭಾರತಕ್ಕೆ ಒಂದು ವರ್ಷದಲ್ಲಿ 120 ಬಿಲಿಯನ್ ಡಾಲರ್​​ನಷ್ಟು ಮೊತ್ತದ ಹಣ ವರ್ಗಾವಣೆ ಆಗುತ್ತದಂತೆ. ಆರ್​​ಬಿಐ ನಡೆಸಿದ ಸಮೀಕ್ಷೆಯಲ್ಲಿ 2023-24ರಲ್ಲಿ ಭಾರತಕ್ಕೆ ರೆಮಿಟೆನ್ಸ್ ರೂಪದಲ್ಲಿ ಬಂದ ಹಣ 118.7 ಬಿಲಿಯನ್ ಡಾಲರ್.

ಇದನ್ನೂ ಓದಿ
Image
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
Image
ಮನುಷ್ಯರು ಬೇಡ, ಎಐ ಸಾಕು ಎನ್ನುತ್ತಿದ್ದ ಕಂಪನಿಗೆ ಈಗ ಜ್ಞಾನೋದಯ
Image
ವಿದ್ಯಾರ್ಥಿ ಸಾಲದ ಹೊರೆಯಿಂದ ಜಾಗತಿಕ ಹಣಕಾಸು ಕುಸಿತ?
Image
ಕೆಲಸ ಕಳೆಯುವ ಎಚ್​ಆರ್ ಮ್ಯಾನೇಜರೇ ಕೆಲಸ ಕಳೆದುಕೊಂಡಾಗ...

ಇದನ್ನೂ ಓದಿ: ಭಾರತೀಯ ಮನೆಗಳಲ್ಲಿದೆ ಜಗತ್ತಿನ ಅತಿಹೆಚ್ಚು ಚಿನ್ನ; ಅವಿಷ್ಟೂ ಸೇರಿಸಿದರೆ ಇವತ್ತಿನ ಮೌಲ್ಯ ಅದೆಷ್ಟು ಅಗಾಧ ಗೊತ್ತಾ?

ಪ್ರಪಂಚದಲ್ಲಿ ಯಾವ ದೇಶವೂ ಕೂಡ ಭಾರತದಷ್ಟು ರೆಮಿಟೆನ್ಸ್ ಆದಾಯ ಗಳಿಸುವುದಿಲ್ಲ ಎನ್ನಲಾಗುತ್ತಿದೆ. ಈ 120 ಬಿಲಿಯನ್ ಡಾಲರ್ ಹಣವು ಭಾರತ ಸರ್ಕಾರವು ಇನ್​​ಫ್ರಾಸ್ಟ್ರಕ್ಚರ್ ಯೋಜನೆಗಳಿಗೆ ಒಂದು ವರ್ಷದಲ್ಲಿ ಮಾಡುವ ವೆಚ್ಚಕ್ಕೆ ಸಮವಾಗಿದೆ ಎಂಬುದು ಗಮನಾರ್ಹ.

ಈ 120 ಬಿಲಿಯನ್ ಡಾಲರ್ ರೆಮಿಟೆನ್ಸ್ ಆದಾಯದಲ್ಲಿ ಅಮೆರಿಕದ ಪಾಲು ಶೇ. 28ರಷ್ಟಿದೆ. ಅಮೆರಿಕದಲ್ಲಿರುವ ಭಾರತೀಯರು ತಮ್ಮ ತವರಿಗೆ ಕಳುಹಿಸುವ ಹಣ ಒಂದು ವರ್ಷದಲ್ಲಿ ಬರೋಬ್ಬರಿ 32 ಬಿಲಿಯನ್ ಡಾಲರ್.

2023-24ರಲ್ಲಿ ಭಾರತದ ರೆಮಿಟೆನ್ಸ್ ಆದಾಯಕ್ಕೆ ಯಾವ್ಯಾವ ದೇಶಗಳ ಕೊಡುಗೆ ಎಷ್ಟು?

2023-24ರಲ್ಲಿ ಭಾರತಕ್ಕೆ ಬಂದ ಒಟ್ಟಾರೆ ರೆಮಿಟೆನ್ಸ್: 118.7 ಬಿಲಿಯನ್ ಡಾಲರ್

  • ಅಮೆರಿಕ: ಶೇ. 27.7
  • ಯುಎಇ: ಶೇ. 19.2
  • ಬ್ರಿಟನ್: ಶೇ. 10.8
  • ಸೌದಿ ಅರೇಬಿಯಾ: ಶೇ. 6.7
  • ಸಿಂಗಾಪುರ್: ಶೇ. 6.6
  • ಕುವೇತ್: ಶೇ. 3.9
  • ಕತಾರ್: ಶೇ. 4.1
  • ಕೆನಡಾ: ಶೇ. 3.8
  • ಓಮನ್: ಶೇ. 2.5
  • ಆಸ್ಟ್ರೇಲಿಯಾ: ಶೇ. 2.3

ಇಲ್ಲಿ ಕೊಲ್ಲಿ ಮತ್ತು ಅರಬ್ ನಾಡಿನಿಂದ ಭಾರತಕ್ಕೆ ಒಟ್ಟಾರೆ ಶೇ. 38ರಷ್ಟು ರೆಮಿಟೆನ್ಸ್ ಹರಿದುಬರುತ್ತದೆ. ಕಳೆದ ಏಳೆಂಟು ವರ್ಷಗಳ ಟ್ರೆಂಡ್ ಗಮನಿಸಿದರೆ ಗಲ್ಫ್ ದೇಶಗಳಿಂದ ಭಾರತಕ್ಕೆ ಬರುತ್ತಿರುವ ರೆಮಿಟೆನ್ಸ್ ಕಡಿಮೆ ಆಗುತ್ತಿದೆ. ಅಮೆರಿಕ, ಬ್ರಿಟನ್, ಸಿಂಗಾಪುರ ಮೊದಲಾದ ದೇಶಗಳಿಂದ ರೆಮಿಟೆನ್ಸ್ ಹೆಚ್ಚಾಗಿದೆ.

ಇದನ್ನೂ ಓದಿ: 1971ರಲ್ಲಿ ಮಾಡಿದ ಆ ತಪ್ಪು… ದೊಡ್ಡದಾಗುತ್ತಿದೆ ಪ್ರತಿ ಬಿಕ್ಕಟ್ಟು… ಹಣದ ಹಿಂದೆ ಹೋದರೆ ಮೂರ್ಖರಾಗುತ್ತೀರಿ: ರಾಬರ್ಟ್ ಕಿಯೋಸಾಕಿ

ಟ್ರಂಪ್ ಕ್ರಮದಿಂದ ರೆಮಿಟೆನ್ಸ್ ಮೇಲೆ ಏನು ಪರಿಣಾಮ?

ಡೊನಾಲ್ಡ್ ಟ್ರಂಪ್ ಅವರು ವಲಸಿಗರನ್ನು ನಿರ್ಬಂಧಿಸುತ್ತಿರುವುದು ಒಂದೆಡೆಯಾದರೆ, ಈಗ ವಲಸಿಗರು ತಮ್ಮ ದೇಶಗಳಿಗೆ ಕಳುಹಿಸಿಕೊಡುವ ಹಣಕ್ಕೂ ನಿರ್ಬಂಧ ಹಾಕುತ್ತಿದ್ದಾರೆ. ಅಮೆರಿಕಕ್ಕೆ ಹೋಗುವ ಭಾರತೀಯರ ಸಂಖ್ಯೆ ಇಳಿಮುಖವಾಗುತ್ತದೆ. ಇದರಿಂದ ರೆಮಿಟೆನ್ಸ್ ಆದಾಯ ಕಡಿಮೆ ಆಗುತ್ತದೆ. ಈಗ ರೆಮಿಟೆನ್ಸ್ ಹಣಕ್ಕೆ ಶೇ. 5ರಷ್ಟು ಟ್ಯಾಕ್ಸ್ ಹಾಕಿದರೆ, ಹಣ ಕಳುಹಿಸುವುದು ಕಡಿಮೆ ಆಗಬಹುದು.

ಪಾಕಿಸ್ತಾನದಂತಹ ದೇಶಗಳಿಗೆ ಇನ್ನೂ ಹೆಚ್ಚು ಸಂಕಟ

ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿರುವ ಪಾಕಿಸ್ತಾನಕ್ಕೆ ಇರುವ ಪ್ರಮುಖ ಆದಾಯಗಳಲ್ಲಿ ರೆಮಿಟೆನ್ಸ್ ಒಂದು. ಪಾಕಿಸ್ತಾನಕ್ಕೆ ಬರುವ ರೆಮಿಟೆನ್ಸ್, ಅದರ ಜಿಡಿಪಿಯ ಶೇ. 10 ಭಾಗದಷ್ಟಾಗುತ್ತದೆ. ಮೊದಲೇ ಸಾಲಗಳ ಶೂಲಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಹೊಸ ಸಂಕಷ್ಟ ಎದುರಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:39 am, Wed, 21 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ