AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೇಆಫ್ ಗುಂಗಲ್ಲಿದ್ದ ಎಚ್​ಆರ್ ಮ್ಯಾನೇಜರ್ ಖುದ್ದು ಕೆಲಸ ಕಳೆದುಕೊಂಡಾಗ… ಸಂಕಟದಿಂದ ಹೊರಬರಲು ಈಕೆ ಮಾಡಿದ್ದಿದು…

Past story of Power Coaching and Consulting CEO Chikara Kennedy: ಮೆಟಾದ ಮಾಜಿ ಎಚ್​ಆರ್ ಮ್ಯಾನೇಜರ್, ಹಾಗೂ ತನ್ನದೇ ಕಂಪನಿಯ ಸಿಇಒ ಆಗಿರುವ ಅಮೆರಿಕದ ಚಿಕಾರಾ ಕೆನಡಿ ಎನ್ನುವ ಮಹಿಳೆಯ ಕಥೆ... 2023ರಲ್ಲಿ ಮೆಟಾ ಲೇಆಫ್ ನಿರ್ಧರಿಸಿದಾಗ, ಅದು ಹೇಗಿರಬೇಕು ಎನ್ನುವ ಪ್ರಕ್ರಿಯೆ ರೂಪಿಸಲು ಸಹಾಯವಾಗಿದ್ದರು ಕೆನಡಿ. ಕೊನೆಗೆ ಆಕೆಯ ಕೆಲಸವೇ ಹೋಯಿತು. ಈಕೆ ಇಂಡೋನೇಷ್ಯಾದ ಬಾಲಿಗೆ ಒಬ್ಬಳೇ ಟ್ರಿಪ್​ಗೆ ಹೋದಾಗ ತನ್ನ ಅಂತರ್ಯದ ಶಕ್ತಿ ಏನೆಂಬುದು ಗೊತ್ತಾಯಿತಂತೆ...

ಲೇಆಫ್ ಗುಂಗಲ್ಲಿದ್ದ ಎಚ್​ಆರ್ ಮ್ಯಾನೇಜರ್ ಖುದ್ದು ಕೆಲಸ ಕಳೆದುಕೊಂಡಾಗ... ಸಂಕಟದಿಂದ ಹೊರಬರಲು ಈಕೆ ಮಾಡಿದ್ದಿದು...
ಚಿಕಾರಾ ಕೆನೆಡಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 19, 2025 | 5:39 PM

Share

ನವದೆಹಲಿ, ಮೇ 19: ಹದಿನೈದು ವರ್ಷದಿಂದ ಎಚ್​​ಆರ್ ಆಗಿ ಕೆಲಸ ಮಾಡುತ್ತಿದ್ದ, ಮತ್ತು ಮೆಟಾದಲ್ಲಿ ಐದು ವರ್ಷದಿಂದ ಎಚ್​​​ಆರ್ ಕೆಲಸ ಮಾಡುತ್ತಿದ್ದ ಮತ್ತು 2023ರ ಮಹಾ ಲೇ ಆಫ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಚಿಕಾರ ಕೆನೆಡಿ (Chikara Kennedy) ತಾನೇ ಖುದ್ದಾಗಿ ಲೇ ಆಫ್​​ಗೆ ಬಲಿಪಶುವಾದ ಕಥೆ ಇದು. ಎಂಥವರಿಗಾದರೂ ಮಾನಸಿಕವಾಗಿ ಜರ್ಝರಿತಗೊಳಿಸಬಹುದಾದ ಈ ಲೇ ಆಫ್ ಕ್ರಮದ ಪರಿಣಾಮ ಈಕೆಯ ಜೀವನಕ್ಕೆ ಹೊಸ ತಿರುವು ಸಿಕ್ಕಿತ್ತು. ಈಗ ಈಕೆ ತನ್ನದೇ ಹೊಸ ಜೀವನ ಆರಂಭಿಸಿದ್ದಾಳೆ. ತಾನೇ ಸಿಇಒ ಆಗಿ ಬೆಳೆದಿದ್ದಾಳೆ. ಇದು ಸಂಕಷ್ಟ ಸಂದರ್ಭದಲ್ಲಿ ಹೇಗೆ ಹೊಸ ದಾರಿ ಹುಡುಕಬಹುದು ಎಂದು ತೋರಿಸುವ ಕಥೆ…

ಚಿಕಾರ ಕೆನೆಡಿ 2018ರಿಂದ ಮೆಟಾ ಕಂಪನಿಯಲ್ಲಿ ಎಚ್​​ಆರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. 2023ರಲ್ಲಿ ಕಂಪನಿಯು 10,000 ಮಂದಿಯನ್ನು ಲೇ ಆಫ್ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಂಡಿತು. ಉದ್ಯೋಗಿಗಳಿಗೆ ಘಾಸಿಯಾಗದ ರೀತಿಯಲ್ಲಿ ಲೇ ಆಫ್ ಹೇಗೆ ಮಾಡುವುದು ಎನ್ನುವ ಪ್ರಕ್ರಿಯೆಯನ್ನು ರೂಪಿಸಲು ನೆರವಾಗುವುದು ಅವರ ಕೆಲಸವಾಗಿತ್ತು. ಉದ್ಯೋಗಿಗಳ ಆತ್ಮಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಲೇ ಆಫ್ ಆಗಬೇಕು ಎಂಬುದು ಆಕೆಯ ನಿಲುವು. ನೋಡ ನೋಡುತ್ತಿದ್ದಂತೆಯೇ, ಆ ಲೇ ಆಫ್ ಭೂತಕ್ಕೆ ಖುದ್ದು ಚಿಕಾರ ಕೆನೆಡಿಯೇ ಬಲಿಯಾಗಿದ್ದಳು.

ಇದನ್ನೂ ಓದಿ: ಒಲಾ ಕೃತ್ರಿಮ್ ಉದ್ಯೋಗಿ ಆತ್ಮಹತ್ಯೆ; ಮ್ಯಾನೇಜರ್ ಕಾಟ, ಕೆಲಸದ ಒತ್ತಡಕ್ಕೆ ಬಲಿಯಾದನಾ ಯುವ ಎಂಜಿನಿಯರ್

ಇದನ್ನೂ ಓದಿ
Image
ಒಲಾ ಕೃತ್ರಿಮ್ ಉದ್ಯೋಗಿ ಆತ್ಮಹತ್ಯೆ; ಏನು ಕಾರಣ?
Image
ಬಾಂಗ್ಲಾ ಗಾರ್ಮೆಂಟ್ಸ್ ಸರಕುಗಳಿಗೆ ಭಾರತದ ನಿರ್ಬಂಧ
Image
ಅಮೆರಿಕದಲ್ಲಿರುವ ಚೀನೀ ಉತ್ಪನ್ನಗಳಲ್ಲಿ ರಹಸ್ಯ ಸಾಧನಗಳು?
Image
ಅಮೆರಿಕದ ಕೋರ್ಟ್​​ಗಳಲ್ಲಿ ಕೇಸ್ ನಡೆಸಲೂ ದುಡ್ಡಿಲ್ಲದ ಬೈಜುಸ್

ಲೇ ಆಫ್ ಆದ ಉದ್ಯೋಗಿಗಳ ಬಗ್ಗೆ ಯಾವಾಗಲೂ ಕಾಳಜಿ ವಹಿಸುತ್ತಿದ್ದ ಚಿಕಾರಾಳಿಗೆ ತಾನೇ ಆ ಪರಿಸ್ಥಿತಿಗೆ ಸಿಲುಕಿದ್ದಳು. ಒಂದೆಡೆ, ಕೌಟುಂಬಿಕ ಸಮಸ್ಯೆ, ಮತ್ತೊಂದೆಡೆ ಉದ್ಯೋಗನಷ್ಟ. ಎಲ್ಲಾ ಕಂಪನಿಗಳೂ ಲೇ ಆಫ್ ಭರಾಟೆಯಲ್ಲಿದ್ದಾಗ ಮತ್ತೊಂದು ಕೆಲಸ ಎಲ್ಲಿ ಹುಡುಕುವುದು? ಚಿಕಾರ ಕೆನಡಿಗೆ ಯೋಜನೆ ಹತ್ತಿತ್ತು. ಆಕೆಯ ಮುಂದಿದ್ದುದು ಮುಂದೇನು ಮಾಡಬೇಕು ಎನ್ನುವ ಪ್ರಶ್ನೆ?

ಬಾಲಿ ಟ್ರಿಪ್​ಗೆ ಹೊರಟಾಗ ಸಿಕ್ಕಿತ್ತು ಕೆನೆಡಿಗೆ ಉತ್ತರ…

ಚಿಕಾರಾ ಕೆನೆಡಿ ಕೆಲಸ ಕಳೆದುಕೊಂಡಾಗ ಎಲ್ಲವೂ ಗೊಂದಲದ ಗೂಡಾಗಿತ್ತು. ಅವರಿವರ ಸಲಹೆ ಕೇಳಿ ಗೊಂದಲ ಹೆಚ್ಚಿಸಿಕೊಳ್ಳುವ ಬದಲು ಮನದ ಮಾತು ಕೇಳಲು ಬಯಸುತ್ತಾಳೆ. ಕೊನೆಗೆ, ಬಾಲಿಗೆ ಟ್ರಿಪ್ ಹೋಗಿ ಏಕಾಂತದಲ್ಲಿ ಇರುವುದೆಂದು ನಿರ್ಧರಿಸಿ ಒಬ್ಬಳೇ ಹೊರಟುಬಿಡುತ್ತಾಳೆ. ವಾಷಿಂಗ್ಟನ್ ಡಿಸಿಯಿಂದ ಬಾಲಿಗೆ ಪ್ರಯಾಣ ಮಾಡುತ್ತಾಳೆ.

ಇದನ್ನೂ ಓದಿ: ಬಾಂಗ್ಲಾದೇಶದ ಅತಿದೊಡ್ಡ ಬ್ಯುಸಿನೆಸ್​​ಗೆ ಭಾರತದಿಂದ ಆಘಾತ; ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕು ಬಾಂಗ್ಲಾ ಬಟ್ಟೆಗಳು

ಮೊಬೈಲ್, ಲ್ಯಾಪ್​ಟಾಪ್ ಬಂದ್ ಮಾಡುತ್ತಾಳೆ. ಅಪರಿಚಿತರ ಜೊತೆ ಸಂಪರ್ಕದಲ್ಲಿರುತ್ತಾಳೆ. ಧ್ಯಾನ ಇತ್ಯಾದಿಯಲ್ಲಿ ನಿರತಲಾಗುತ್ತಾಳೆ. ಇದು ಆಕೆಗೆ ತನ್ನ ಒಳಮನಸ್ಸು ಅರಿಯಲು ಸಯಾಯವಾಗುತ್ತದೆ. ತನ್ನ ಗುರಿಗಳೇನು, ತನ್ನ ಶಕ್ತಿಗಳೇನು? ಖುಷಿ ನೀಡುವ ಕೆಲಸಗಳೇನು? ಇವೆಲ್ಲ ಪ್ರಶ್ನೆಗಳಿಗೆ ಈಕೆ ಬಾಲಿಯಲ್ಲಿ ಉತ್ತರ ಕಂಡುಕೊಳ್ಳುತ್ತಾಳೆ.

ಇದರ ಪರಿಣಾಮವಾಗಿ ಪವರ್ ಕೋಚಿಂಗ್ ಅಂಡ್ ಕನ್ಸಲ್ಟಿಂಗ್ ಎನ್ನುವ ಕಂಪನಿ ಕಟ್ಟುತ್ತಾಳೆ. ಇದು ಮಹಿಳೆಯರಿಗೆಂದು ಇರುವ ವೆಲ್ನೆಸ್ ರಿಟ್ರೀಟ್ ಕಂಪನಿ. ಇದೊಂದು ರೀತಿಯಲ್ಲಿ ಲೈಫ್ ಕೋಚ್ ಸೇವೆಯಂತೆ. ಜೀವನೋತ್ಸಾಹ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಚಿಕಾರಾ ಕೆನೆಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ