1971ರಲ್ಲಿ ಮಾಡಿದ ಆ ತಪ್ಪು… ದೊಡ್ಡದಾಗುತ್ತಿದೆ ಪ್ರತಿ ಬಿಕ್ಕಟ್ಟು… ಹಣದ ಹಿಂದೆ ಹೋದರೆ ಮೂರ್ಖರಾಗುತ್ತೀರಿ: ರಾಬರ್ಟ್ ಕಿಯೋಸಾಕಿ
Robert Kiyosaki reiterates upcoming of big global financial crisis: 25 ವರ್ಷದ ಹಿಂದೆ ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದಲ್ಲಿ ರಾಬರ್ಟ್ ಕಿಯೋಸಾಕಿ ಅವರು ಅತಿದೊಡ್ಡ ಜಾಗತಿಕ ಹಣಕಾಸು ಕುಸಿತ ಸಂಭವಿಸುತ್ತದೆ ಎಂದು ಬರೆದಿದ್ದರು. ಆ ಸಮಯ ಈಗ ಸಮೀಪಿಸಿದೆ ಎಂದಿದ್ದಾರೆ ಅವರು. ವಿದ್ಯಾರ್ಥಿ ಸಾಲವು ಜಾಗತಿಕ ಹಣಕಾಸು ಬಿಕ್ಕಟ್ಟಿಗೆ ಎಡೆ ಮಾಡಿಕೊಡುತ್ತದೆ ಎಂದು ಕಿಯೋಸಾಕಿ ಎಚ್ಚರಿಸಿದ್ದಾರೆ. ಜನರು ಚಿನ್ನ, ಬೆಳ್ಳಿ, ಬಿಟ್ಕಾಯಿನ್ನಂತಹ ನೈಜ ಆಸ್ತಿಯನ್ನು ಕೂಡಿಡಬೇಕು ಎಂದು ಕರೆನೀಡಿದ್ದಾರೆ.

ನವದೆಹಲಿ, ಮೇ 19: ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕ ಬರೆದ ರಾಬರ್ಟ್ ಕಿಯಾಸಕಿ (Robert Kiyosaki) ಹೆಸರು ಕೇಳಿರಬಹುದು. ಜಾಗತಿಕವಾಗಿ, ಅದರಲ್ಲೂ ಅಮೆರಿಕದಲ್ಲಿ ಅತಿದೊಡ್ಡ ಹಣಕಾಸು ಗಂಡಂತಾರ ಬರಲಿದೆ ಎಂದು ಅವರು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಈಗಲೂ ಕೂಡ ಅದನ್ನೇ ಪುನರುಚ್ಚರಿಸಿದ್ದು, ಸದ್ಯದಲ್ಲೇ ಜಾಗತಿಕ ಹಣಕಾಸು ಬಿಕ್ಕಟ್ಟು (global financial crisis) ವಕ್ಕರಿಸುವುದು ನಿಶ್ಚಿತ ಎಂದಿದ್ದಾರೆ. ಅಷ್ಟೇ ಅಲ್ಲ, ಈ ಬಿಕ್ಕಟ್ಟಿನಿಂದ ಪಾರು ಮಾಡಲು ಯಾರೂ ಬರೋದಿಲ್ಲ, ಜನರೇ ತಮ್ಮನ್ನು ತಾವು ಪಾರು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಎಲ್ಟಿಸಿಎಂ ಹೆಡ್ಜ್ ಫಂಡ್ ಕುಸಿಯಿತು. 1998ರಲ್ಲಿ ಅಮೆರಿಕದ ಷೇರುಪೇಟೆಯು ಬಂದು ಕಾಪಾಡಿತು. ನಂತರ ಷೇರುಪೇಟೆಯನ್ನು ಸೆಂಟ್ರಲ್ ಬ್ಯಾಂಕುಗಳು ಸೇರಿ ಕಾಪಾಡಿದವು. ಆದರೆ, ಈ ಸೆಂಟ್ರಲ್ ಬ್ಯಾಂಕುಗಳನ್ನು ಕಾಪಾಡಲು ಯಾರು ಬರುತ್ತಾರೆ? ಎಂದು ರಾಬರ್ಟ್ ಕಿಯೋಸಾಕಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಲೇಆಫ್ ಗುಂಗಲ್ಲಿದ್ದ ಎಚ್ಆರ್ ಮ್ಯಾನೇಜರ್ ಖುದ್ದು ಕೆಲಸ ಕಳೆದುಕೊಂಡಾಗ… ಸಂಕಟದಿಂದ ಹೊರಬರಲು ಈಕೆ ಮಾಡಿದ್ದಿದು…
ವಿದ್ಯಾರ್ಥಿ ಸಾಲದಿಂದ ಹೊಸ ಬಿಕ್ಕಟ್ಟು
ಅಮೆರಿಕದಲ್ಲಿ 1.6 ಟ್ರಿಲಿಯನ್ ಡಾಲರ್ ಮೊತ್ತದ ವಿದ್ಯಾರ್ಥಿ ಸಾಲ ಇದೆ. ಇದು ಮುಂದಿನ ಹಣಕಾಸು ಬಿಕ್ಕಟ್ಟು ಸೃಷ್ಟಿಗೆ ಎಡೆ ಮಾಡಿಕೊಡುತ್ತದೆ ಎಂದೂ ರಿಚ್ ಡ್ಯಾಡ್ ಪೂರ್ ಡ್ಯಾಡ್ ಲೇಖಕರು ಎಚ್ಚರಿಸಿದ್ದಾರೆ.
ಜನರು ಹಣದ ಹಿಂದೆ ಹೋಗಬಾರದು…
ಹಣಕಾಸು ಬಿಕ್ಕಟ್ಟು ಉದ್ಭವಿಸಿದಾಗ ಜನರು ಕರೆನ್ಸಿ ಹಣ ಕೂಡಿಟ್ಟು ತಮ್ಮನ್ನು ರಕ್ಷಿಸಿಕೊಳ್ಳಲು ಆಗೋದಿಲ್ಲ. ಜನರು ನಿಜವಾದ ಚಿನ್ನ, ಬೆಳ್ಳಿ, ಬಿಟ್ಕಾಯಿನ್ಗಳನ್ನು ಖರೀದಿಸಿ ಉಳಿಸಿಕೊಳ್ಳಬೇಕು. ಆದರೆ, ಹಾಗಂತ ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್ ಇತ್ಯಾದಿಯಲ್ಲಿ ಹೂಡಿಕೆ ಮಾಡುವುದಲ್ಲ ಎಂದು ರಾಬರ್ಟ್ ಕಿಯೋಸಾಕಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಅಮೆರಿಕಕ್ಕೆ ಕ್ರೆಡಿಟ್ ರೇಟಿಂಗ್ AAAನಿಂದ AA1ಗೆ ಇಳಿಸಿದ ಮೂಡೀಸ್; ಭಾರತಕ್ಕೆಷ್ಟಿದೆ ರೇಟಿಂಗ್? ಏನಿದರ ಅರ್ಥ?
1971ರಲ್ಲಿ ಮಾಡಿದ ಆ ತಪ್ಪು…
ಪ್ರಸಕ್ತ ಜಾಗತಿಕ ಹಣಕಾಸು ಬಿಕ್ಕಟ್ಟುಗಳಿಗೆ 1971ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ಡಿಕ್ಸನ್ ಮಾಡಿದ ತಪ್ಪು ಕಾರಣ ಎಂದು ರಾಬರ್ಟ್ ಕಿಯೋಸಾಕಿ ಹೇಳಿದ್ದಾರೆ.
1971ರಲ್ಲಿ ಅಮೆರಿಕದ ಡಾಲರ್ ಕರೆನ್ಸಿಯನ್ನು ಗೋಲ್ಡ್ ಸ್ಟ್ಯಾಂಡರ್ಡ್ನಿಂದ ಹೊರತರುವ ನಿರ್ಧಾರವನ್ನು ರಿಚರ್ಡ್ ಡಿಕ್ಸನ್ ಮಾಡಿದ್ದರು. ಆಗಿನಿಂದ ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಪ್ರತೀ ಬಾರಿ ದೊಡ್ಡದಾಗುತ್ತಲೇ ಬಂದಿದೆ ಎಂಬುದು ಕಿಯೋಸಾಕಿ ಅವರ ವಾದ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








