AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI vs Human: ದುಡ್ಡು ಉಳಿಸೋಕೆ ಎಐ ಇಟ್ಟು ಕೈಸುಟ್ಟುಕೊಂಡ ಕಂಪನಿ; ಈಗ ಮತ್ತೆ ಮನುಷ್ಯರೇ ಗತಿ

Klarna group restarts human recruitment after AI service backfired: ಬ್ಯುಸಿನೆಸ್ ಸಂಸ್ಥೆಗಳು ಎಐ ಅಳವಡಿಕೆಯ ವೇಗ ಹೆಚ್ಚಿಸುತ್ತಿದ್ದು ಎಷ್ಟೋ ಕಡೆ ಇದೇ ಕಾರಣಕ್ಕೆ ಲೇ ಆಫ್ ಮಾಡುತ್ತಿವೆ. ಸ್ವೀಡನ್​​​ನ ಫಿನ್​ಟೆಕ್ ಕಂಪನಿ ಕ್ಲಾರ್ನಾ ಕೂಡ ತನ್ನ ಕಸ್ಟಮರ್ ಸಪೋರ್ಟ್​​​ಗೆ ಮನುಷ್ಯರೇ ಬೇಡ ಎಂದು ತೀರ್ಮಾನಿಸಿತ್ತು. ಎಲ್ಲವನ್ನೂ ಎಐನಿಂದ ಮಾಡಿಸಿದ ಬಳಿಕ, ಸರ್ವಿಸ್ ಎಷ್ಟು ಕಳಪೆ ಎಂಬುದು ಕ್ಲಾರ್ನಾಗೆ ಗೊತ್ತಾಗಿದೆ. ಈಗ ಮತ್ತೆ ಹೊಸ ನೇಮಕಾತಿ ಶುರು ಹಚ್ಚಿಕೊಂಡಿದೆ.

AI vs Human: ದುಡ್ಡು ಉಳಿಸೋಕೆ ಎಐ ಇಟ್ಟು ಕೈಸುಟ್ಟುಕೊಂಡ ಕಂಪನಿ; ಈಗ ಮತ್ತೆ ಮನುಷ್ಯರೇ ಗತಿ
ಎಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 20, 2025 | 11:56 AM

Share

ನವದೆಹಲಿ, ಮೇ 20: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ (AI technology) ಬೆಳೆಯುತ್ತಿರುವಂತೆಯೇ ಬ್ಯುಸಿನೆಸ್ ಸಂಸ್ಥೆಗಳು ವೆಚ್ಚ ಉಳಿಸಲು ಎಐ ಬಳಕೆ ಹೆಚ್ಚಿಸುತ್ತಿವೆ. ಕೆಲ ಕಂಪನಿಗಳು ಅವಶ್ಯಕತೆಗಿಂತ ಹೆಚ್ಚಾಗಿಯೇ ಎಐ ಆಶ್ರಯಿಸುತ್ತಿವೆ. ಸ್ವೀಡನ್​​ನ ಕಂಪನಿಯೊಂದು ತನ್ನ ಒಂದು ವಿಭಾಗಕ್ಕೆ ಮನುಷ್ಯರೇ ಬೇಡ, ಯಂತ್ರದ ಕೈಯಲ್ಲೇ ಎಲ್ಲಾ ಮಾಡಿಸ್ತೀನಿ ಎಂದು ಹೇಳಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತು. ಆದರೆ, ಇದೀಗ ಆ ನಿರ್ಧಾರವು ಕಂಪನಿಗೆ ತಿರುಗುಬಾಣ ನೀಡಿದೆ. ಅಯ್ಯೋ ಬೇಡಪ್ಪ ಯಾಂತ್ರಿಕ ಸೇವೆ, ಮನುಷ್ಯರೇ ಸರಿ ಎಂದು ಹೇಳುತ್ತಿದೆ. ಇದು ಸ್ವೀಡನ್​​ನ ಕ್ಲಾರ್ನಾ ಗ್ರೂಪ್​ನ (Klarna Group) ಕಥೆ.

ಕ್ಲಾರ್ನಾ ಒಂದು ಫಿನ್​ಟೆಕ್ ಕಂಪನಿ. ಪೇಮೆಂಟ್ ಸೇವೆ ನೀಡುತ್ತದೆ. ತನ್ನ ಕಸ್ಟಮರ್ ಸಪೋರ್ಟ್ ವಿಭಾಗಕ್ಕೆ ಎಐ ಅನ್ನು ಪೂರ್ಣವಾಗಿ ಬಳಸಲು ನಿರ್ಧರಿಸಿತು. ಉದ್ಯೋಗಿಗಳಿಗೆ ಆಗುವ ಸಂಬಳದ ವೆಚ್ಚವನ್ನು ಉಳಿಸಲು ಕ್ಲಾರ್ನಾ ಈ ನಿರ್ಧಾರ ಮಾಡಿತ್ತು. ಆದರೆ, ಏನೋ ಪಡೆಯಲು ಹೋಗಿ ಇನ್ನೇನೋ ಕಳೆದುಕೊಂಡಂತೆ ಆಗಿದೆ ಕಂಪನಿ ಕಥೆ. ‘ವೆಚ್ಚ ಉಳಿತಾಯವೇ ನಮ್ಮ ಕಣ್ಮುಂದೆ ಇತ್ತು. ಆದರೆ, ಅಂತಿಮವಾಗಿ ಸಿಕ್ಕಿದ್ದು ಕಳಪೆ ಗುಣಮಟ್ಟದ ಸೇವೆ’ ಎಂಬುದನ್ನು ಕ್ಲಾರ್ನಾ ಗ್ರೂಪ್ ಸಂಸ್ಥೆಯ ಸಿಇಒ ಸೆಬಾಸ್ಟಿಯನ್ ಸೇಮಿಯಾಟೋವಸ್ಕಿ ಹೇಳುತ್ತಾರೆ.

ಇದನ್ನೂ ಓದಿ: 1971ರಲ್ಲಿ ಮಾಡಿದ ಆ ತಪ್ಪು… ದೊಡ್ಡದಾಗುತ್ತಿದೆ ಪ್ರತಿ ಬಿಕ್ಕಟ್ಟು… ಹಣದ ಹಿಂದೆ ಹೋದರೆ ಮೂರ್ಖರಾಗುತ್ತೀರಿ: ರಾಬರ್ಟ್ ಕಿಯೋಸಾಕಿ

ಇದನ್ನೂ ಓದಿ
Image
ವಿದ್ಯಾರ್ಥಿ ಸಾಲದ ಹೊರೆಯಿಂದ ಜಾಗತಿಕ ಹಣಕಾಸು ಕುಸಿತ?
Image
ಕೆಲಸ ಕಳೆಯುವ ಎಚ್​ಆರ್ ಮ್ಯಾನೇಜರೇ ಕೆಲಸ ಕಳೆದುಕೊಂಡಾಗ...
Image
ಒಲಾ ಕೃತ್ರಿಮ್ ಉದ್ಯೋಗಿ ಆತ್ಮಹತ್ಯೆ; ಏನು ಕಾರಣ?
Image
ಅಮೆರಿಕದ ಕೋರ್ಟ್​​ಗಳಲ್ಲಿ ಕೇಸ್ ನಡೆಸಲೂ ದುಡ್ಡಿಲ್ಲದ ಬೈಜುಸ್

ಎಐ ಅಳವಡಿಕೆಯತ್ತ ಗಮನ ಕೊಡುತ್ತಿದ್ದ ಕ್ಲಾರ್ನಾ ಕಂಪನಿಯು ಕಸ್ಟಮರ್ ಸಪೋರ್ಟ್ ವಿಭಾಗಕ್ಕೆ ಕಳೆದ ಒಂದು ವರ್ಷದಿಂದ ಯಾವ ನೇಮಕಾತಿಯನ್ನೂ ಮಾಡಲಿಲ್ಲವಂತೆ. ಈಗ ಕಂಪನಿಗೆ ಮನುಷ್ಯರ ಬೆಲೆ ಅರಿವಾಗಿದೆ. ‘ಮನುಷ್ಯರ ಗುಣಮಟ್ಟದ ಮೇಲೆ ನಂಬಿಕೆ ಇಡುವುದು ಎಷ್ಟು ಮುಖ್ಯ ಎಂಬುದು ಗೊತ್ತಾಯಿತು’ ಎಂದು ಹೇಳುತ್ತಾರೆ ಸಿಇಒ.

ಕಸ್ಟಮರ್ ಸಪೋರ್ಟ್ ಕೆಲಸಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕೊಡಲು ನಿರ್ಧರಿಸಿದೆ ಕ್ಲಾರ್ನಾ. ವಿದ್ಯಾರ್ಥಿಗಳೋ ಅಥವಾ ಗ್ರಾಮೀಣ ಭಾಗದ ಜನರೋ ಈ ಕೆಲಸ ಮಾಡಬಹುದು. ಗ್ರಾಹಕರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲು ಎಐ ಚ್ಯಾಟ್​​ಬೋಟ್ ಬದಲು ಮನುಷ್ಯರ ಜೊತೆ ಮಾತನಾಡುವ ಅವಕಾಶ ಕೊಡುವುದು ಬಹಳ ಮುಖ್ಯ ಎಂಬ ಸತ್ಯವನ್ನು ಕಂಪನಿ ಕಂಡುಕೊಂಡಿದೆ.

ಇದನ್ನೂ ಓದಿ: ಒಲಾ ಕೃತ್ರಿಮ್ ಉದ್ಯೋಗಿ ಆತ್ಮಹತ್ಯೆ; ಮ್ಯಾನೇಜರ್ ಕಾಟ, ಕೆಲಸದ ಒತ್ತಡಕ್ಕೆ ಬಲಿಯಾದನಾ ಯುವ ಎಂಜಿನಿಯರ್

ಸದ್ಯ ಕ್ಲಾರ್ನಾ ಗ್ರೂಪ್​​ನಲ್ಲಿ 3,000 ಮಂದಿ ಉದ್ಯೋಗಿಗಳಿದ್ದಾರೆ. ಎಐ ತಂತ್ರಜ್ಞಾನ ಅಳವಡಿಕೆಗೆ ಅದು ಸ್ಯಾಮ್ ಆಲ್ಟ್​​​ಮ್ಯಾನ್ ಅವರ ಓಪನ್ ಎಐನ ನೆರವು ಪಡೆಯುತ್ತಿದೆ. 700 ಮನುಷ್ಯರು ಮಾಡುವ ಕೆಲಸವನ್ನು ಎಐ ಮಾಡುತ್ತಿದೆ ಎಂದು ಕಳೆದ ವರ್ಷ ಕ್ಲಾರ್ನಾ ಹೇಳಿತ್ತು. 700 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತು. ಅದಾದ ಬಳಿಕ ಹೊಸ ನೇಮಕಾತಿಯನ್ನೇ ನಿಲ್ಲಿಸಿತು. ಈಗ ನೇಮಕಾತಿ ಮಾಡಿಕೊಳ್ಳುತ್ತಿದೆಯಾದರೂ ಎಐ ಅಳವಡಿಕೆ ಕಾರ್ಯವನ್ನು ನಿಲ್ಲಿಸಿಲ್ಲ. ಮುಂಬರುವ ದಿನಗಳಲ್ಲಿ ಮನುಷ್ಯರ ಕೆಲಸಗಳಿಗೆ ಎಐ ಕುತ್ತು ತರುವ ಸಾಧ್ಯತೆ ಇಲ್ಲದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ