Adani group shares: ಅದಾನಿ ಸಮೂಹ ಕಂಪೆನಿಗಳ ಬಂಡವಾಳ 4 ದಿನದಲ್ಲಿ ರೂ. 2 ಲಕ್ಷ ಕೋಟಿ ಖಲಾಸ್; ಇದರಲ್ಲಿನ ರಹಸ್ಯ ಏನು?

ಅದಾನಿ ಕಂಪೆನಿಯ ಷೇರುಗಳು ನಾಲ್ಕು ದಿನದಲ್ಲಿ 2 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಕಂಪೆನಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನಷ್ಟ ಕಾಣಲು ಕಾರಣ ಏನು ಎಂಬುದರ ವಿವರ ಇಲ್ಲಿದೆ.

Adani group shares: ಅದಾನಿ ಸಮೂಹ ಕಂಪೆನಿಗಳ ಬಂಡವಾಳ 4 ದಿನದಲ್ಲಿ ರೂ. 2 ಲಕ್ಷ ಕೋಟಿ ಖಲಾಸ್; ಇದರಲ್ಲಿನ ರಹಸ್ಯ ಏನು?
ಸಾಂದರ್ಭಿಕ ಚಿತ್ರ

ಭಾರತದ ಶತಕೋಟ್ಯಧಿಪತಿ ಗೌತಮ್ ಅದಾನಿ ನಿಯಂತ್ರಣದ ಕಂಪೆನಿಗಳ ಷೇರುಗಳು ಸೋಮವಾರದಿಂದ ಗುರುವಾರದ ಮಧ್ಯ ದಾಖಲೆಯ ನಷ್ಟವನ್ನು ಕಂಡಿದೆ. ಆರು ಕಂಪೆನಿಗಳಿಂದ ಸೇರಿ 2 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಮಾರಿಷಿಯಸ್ ಮೂಲದ ಫಂಡ್​ಗಳು ಅದಾನಿ ಸಮೂಹದ ಕಂಪೆನಿಗಳಲ್ಲಿ ಟಾಪ್ ವಿದೇಶೀ ಹೂಡಿಕೆದಾರ ಆಗಿವೆ. ಅವುಗಳ ಖಾತೆಯನ್ನು ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರೀಸ್ ಲಿಮಿಟೆಡ್​ (ಎನ್​ಎಸ್​ಡಿಎಲ್​)ನಿಂದ ನಿರ್ಬಂಧಗೊಳಿಸಲಾಗಿದೆ ಎಂದು ಪ್ರಮುಖ ಪತ್ರಿಕೆ ಎಕನಾಮಿಕ್ ಟೈಮ್ಸ್ ವರದಿ ಮಾಡಿತ್ತು. ಮೇ 31ಕ್ಕೆ ಈ ಮೂರು ಫಂಡ್​ಗಳಿಂದ ಹೊಂದಿರುವ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಎನ್​ಎಸ್​ಡಿಎಲ್​ ವೆಬ್​ಸೈಟ್​ನಲ್ಲಿ ತೋರಿಸಲಾಗಿದೆ. ಖಾತೆ ಸ್ಥಗಿತಗೊಂಡ ನಿರ್ದಿಷ್ಟ ದಿನಾಂಕ ಗೊತ್ತಿಲ್ಲ. ಆದರೆ ಶುಕ್ರವಾರದಂದು ಖಾತೆ ಸ್ಥಗಿತಗೊಂಡಿತ್ತು.

ನಿರಾಕರಣೆ ಹಾಗೂ ವೈವಿಧ್ಯ
ಅದಾನಿ ಸಮೂಹದ ಕಂಪೆನಿಗಳು ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಹೇಳಿಕೆ ನೀಡಿದ್ದು, ಮಾಧ್ಯಮಗಳ ವರದಿಗಳನ್ನು ನಿರಾಕರಿಸಿವೆ. ಎಕನಾಮಿಕ್ ಟೈಮ್ಸ್​ ವರದಿಯು “ದುರುದ್ದೇಶಪೂರಿತ ತಪ್ಪು” ಎಂದು ಕಂಪೆನಿ ಹೇಳಿದೆ. ಅದಾನಿ ಸಮೂಹದ ಕಂಪೆನಿಗಳು ವಿಮಾನ ನಿಲ್ದಾಣ, ಬಂದರು, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ, ಕಲ್ಲಿದ್ದಲು ಮತ್ತು ಅನಿಲ ವ್ಯವಹಾರದ ತನಕ ವಿವಿಧ ಉದ್ಯಮಗಳನ್ನು ಮಾಡುತ್ತವೆ. ಇವುಗಳಲ್ಲಿ ಫಂಡ್​ಗಳಿಂದ ಷೇರುಗಳನ್ನು ಹೊಂದಿರುವ ಖಾತೆಗಳನ್ನು ನಿರ್ಬಂಧ ಆಗಿಲ್ಲ. ಎನ್​ಎಸ್​ಡಿಎಲ್ ಮತ್ತು ಭಾರತದ ಸೆಕ್ಯೂರಿಟೀಸ್ ನಿಯಂತ್ರಕ ಸೆಬಿಯು ಮಾಧ್ಯಮಗಳಿಂದ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ಎನ್​ಎಸ್​ಡಿಎಲ್​ನ ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಗಳು ಮಾತನಾಡಿ, ಈ ಫಂಡ್​ಗಳು ಹಲವು ಖಾತೆಗಳು ಹೊಂದಿವೆ. ಅದಾನಿ ಷೇರುಗಳನ್ನು ಬೇರೆ ಖಾತೆಗಳಲ್ಲಿ ಇರಿಸಿಕೊಂಡಿದ್ದು, ಅದು ಸ್ಥಗಿತಗೊಂಡಿಲ್ಲ. ಇನ್ನು ಖಾತೆ ಸ್ಥಗಿತಗೊಳ್ಳುವುದು “ಹೊಸದಲ್ಲ” ಎಂದಿದ್ದಾರೆ. ಅದಾನಿ ಕಂಪೆನಿಗಳ ಷೇರಿನ ಬೆಲೆ ಕುಸಿತ ಮುಂದುವರಿದಿತ್ತು.

ಮೂರು ಫಂಡ್​ಗಳು
ಮೂರು ವಿದೇಶೀ ಫಂಡ್​ಗಳು- ಅಲ್ಬುಲಾ ಇನ್ವೆಸ್ಟ್​ಮೆಂಟ್ ಫಂಡ್, ಕ್ರೆಸ್ಟ್​ ಫಂಡ್ ಮತ್ತು ಎಪಿಎಂಎಸ್​ ಇನ್ವೆಸ್ಟ್​ಮೆಂಟ್​ ಫಂಡ್​- ಎಲ್ಲವೂ ಒಂದೇ ವಿಳಾಸದಲ್ಲಿ ಇವೆ, ಎಂದು ಮಾರಿಷಿಯಸ್ ಹಣಕಾಸು ನಿಯಂತ್ರಕ ಸಂಸ್ಥೆ ತಿಳಿಸಿದೆ. ಈ ಫಂಡ್​ಗಳು ಜೂನ್ 11ಕ್ಕೆ ಅನ್ವಯ ಆಗುವಂತೆ ಅದಾನಿ ಸಮೂಹದ ಕಂಪೆನಿಗಳಲ್ಲಿ ಕ್ಯುಮುಲೇಟಿವ್ ಆಗಿ ಶೇ 2.7ರಷ್ಟು ಷೇರುಗಳನ್ನು ಹೊಂದಿವೆ. ಈ ಲೆಕ್ಕಾಚಾರವು ಅದಾನಿ ಅಧಿಕಾರಿಗಳು ಎನ್​ಎಸ್​ಡಿಎಸ್​ಗೆ ಕಳುಹಿಸಿದ ಇಮೇಲ್​ನಿಂದ ಮಾಡಲಾಗಿದೆ. ಇದನ್ನು ರಾಯಿಟರ್ಸ್ ಸುದ್ದಿಸಂಸ್ಥೆಯಿಂದ ಪರಿಶೀಲಿಸಲಾಗಿದೆ. ಷೇರ್ ಹೋಲ್ಡಿಂಗ್ಸ್ ಬಗ್ಗೆ ಕೇಳಿರುವ ಪ್ರಶ್ನೆಗೆ ಅದಾನಿ ಸಮೂಹದ ವಕ್ತಾರರು ಪ್ರತಿಕ್ರಿಯಿಸಿಲ್ಲ.

ಮಾರಿಷಿಯಸ್ ಮೂಲದ ಎರಡು ಇತರ ಫಂಡ್​ಗಳು- ಎಲ್​ಟಿಎಸ್​ ಇನ್ವೆಸ್ಟ್​ಮೆಂಟ್ ಫಂಡ್ ಮತ್ತು ಏಷ್ಯಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಷನ್ ಕೂಡ ಅದೇ ವಿಳಾಸದಲ್ಲಿ ನೋಂದಣಿ ಆಗಿವೆ. ರಾಯಿಟರ್ಸ್​ನಿಂದ ಈ ಐದು ಫಂಡ್​ಗಳ ವೆಬ್​ಸೈಟ್​ಗಳನ್ನು ಹುಡುಕಲು ಪ್ರಯತ್ನಿಸಿದೆ. ಮಾರಿಷಿಯಸ್​ ನಿಯಂತ್ರಕರಿಂದ ನೀಡಿದ ನಂಬರ್​ಗಳಿಗೆ ಕರೆ ಮಾಡಿದಾಗ ಅದಕ್ಕೆ ಕೂಡ ಉತ್ತರ ಸಿಕ್ಕಿಲ್ಲ. ಈ ಐದು ಫಂಡ್​ಗಳು ತಮ್ಮ ಒಟ್ಟು ಬಂಡವಾಳದಲ್ಲಿ ಶೇ 94.4ರಿಂದ ಶೇ 97.9ರಷ್ಟನ್ನು ಅದಾನಿ ಕಂಪೆನಿಗಳ ಷೇರಿನಲ್ಲಿ ಹೂಡಿಕೆ ಮಾಡಿವೆ ಎಂದು ದತ್ತಾಂಶಗಳು ತೋರಿಸುತ್ತಿವೆ. ಆದರೆ ಇದು ಸರಿಯಾಗಿದೆಯಾ ಎಂಬ ಬಗ್ಗೆ ಸುದ್ದಿ ಸಂಸ್ಥೆಯಿಂದ ಖಾತ್ರಿ ಮಾಡಿಕೊಂಡಿಲ್ಲ.

ಅದಾನಿಯ ಆರು ಕಂಪೆನಿ ಸ್ಟಾಕ್ ಪೈಕಿ ನಾಲ್ಕು ಸಾರ್ವಜನಿಕ ಹೋಲ್ಡಿಂಗ್ ಬಳಿ ಶೇ 25ರಷ್ಟು ಇದೆ. ಭಾರತೀಯ ಎಕ್ಸ್​​ಚೇಂಜ್​ಗಳಲ್ಲಿ ಲಿಸ್ಟೆಡ್​ ಕಂಪೆನಿಗಳಿಗೆ ಕಡ್ಡಾಯ ಮಾಡಿರುವ ಕನಿಷ್ಠ ಪ್ರಮಾಣವೇ ಇದು. ಭಾರತೀಯ ಸ್ಟಾಕ್ ಎಕ್ಸ್​ಚೇಂಜ್ ದತ್ತಾಂಶದ ಪ್ರಕಾರ, ಅದಾನಿ ಸಮೂಹಕ್ಕೆ ಸೇರಿದ ಕಂಪೆನಿಗಳ ಪೈಕಿ ಬಹುತೇಕ ಪ್ರಮಾಣದ ಷೇರುಗಳನ್ನು ಅದಾನಿ ನಿಯಂತ್ರಿಸುವ ಟ್ರಸ್ಟ್​ಗಳು ಹೊಂದಿವೆ. ಫಾರಿನ್ ಪೋರ್ಟ್​ಫೋಲಿಯೋ ಇನ್ವೆಸ್ಟರ್ಸ್ (ಎಫ್​ಪಿಐ) ಎರಡನೇ ಅತಿ ದೊಡ್ಡ ಪ್ರಮಾಣದ ಷೇರುದಾರರು. ದೇಶೀಯ ಹೂಡಿಕೆದಾರರು ಶೇಕಡಾ 5ರಷ್ಟು ಷೇರಿನ ಪಾಲು ಹೊಂದಿದ್ದಾರೆ.

ಪರಿಣಾಮ ಏನು?
ಅದಾನಿ ಸಮೂಹದ ಷೇರುಗಳು ಈ ವಾರದ ಮೊದಲ ದಿನದಲ್ಲಿ ಶೇ 7.7ರಿಂದ ಶೇ 23ರ ತನಕ ಅದಾನಿ ಸಮೂಹದ ಸ್ಟಾಕ್​ಗಳು ಇಳಿಕೆ ಕಂಡಿದೆ. ಒಂದು ವಾರಕ್ಕೆ ಮುಂಚಿನ ಮೂರು ತಿಂಗಳಲ್ಲಿ ಕಂಡಿದ್ದ ಷೇರುಗಳ ಗಳಿಕೆ ನಾಲ್ಕು ದಿನದಲ್ಲಿ ಕೊಚ್ಚಿ ಹೋಗಿದೆ. ಕಂಪೆನಿಗಳ ಷೇರುಗಳಲ್ಲಿ ಬೆಲೆ ಇಳಿಕೆಯಿಂದ ಕ್ಯುಮ್ಯುಲೇಟಿವ್ ಮಾರುಕಟ್ಟೆ ಬಂಡವಾಳ ಶೇ 16ಕ್ಕಿಂತ ಹೆಚ್ಚು ಕುಸಿದಿದೆ. ಕಂಪೆನಿ ನೀಡಿದ ಸ್ಪಷ್ಟನೆಯ ಗುಣಮಟ್ಟದ ಬಗ್ಗೆ ಮಾರುಕಟ್ಟೆಗೆ ಸಂತೃಪ್ತಿ ಇಲ್ಲ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿ: Gautam Adani: ನಿಮಿಷಕ್ಕೆ 15 ಕೋಟಿ ರೂ.ನಂತೆ ಕಿಡಿಗೆ ತಾಗಿದ ಕರ್ಪೂರ ಆಯಿತು ಗೌತಮ್ ಅದಾನಿಯ 66,600 ಕೋಟಿ ಆಸ್ತಿ

ಇದನ್ನೂ ಓದಿ: Adani group: ಎಫ್​ಪಿಐ ಫಂಡ್​ ಹೂಡಿಕೆದಾರರ ಖಾತೆಗೆ ನಿರ್ಬಂಧ ವಿಧಿಸಿರುವ ವರದಿ ನಿರಾಕರಿಸಿದ ಅದಾನಿ ಸಮೂಹ

(Adani group shares slump Rs 2 lakh crore in 4 days. Here is the mystery behind huge loss)