AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sovereign Gold Bond: ಸವರನ್ ಗೋಲ್ಡ್ ಬಾಂಡ್ ಸಬ್​ಸ್ಕ್ರಿಪ್ಷನ್ ಇಂದಿನಿಂದ ಶುರು; ಇಲ್ಲಿದೆ ದರ ಇತರ ವಿವರ

2021-22ನೇ ಹಣಕಾಸು ವರ್ಷದಲ್ಲಿ ಸವರನ್ ಗೋಲ್ಡ್ ಬಾಂಡ್ ಆರನೇ ಕಂತಿನ ಸಬ್​ಸ್ಕ್ರಿಪ್ಷನ್ ಆಗಸ್ಟ್ 30ರಿಂದ ಆರಂಭವಾಗಿದೆ. ದರ ಮತ್ತಿತರ ವಿವರ ಇಲ್ಲಿದೆ.

TV9 Web
| Edited By: |

Updated on: Aug 30, 2021 | 8:24 PM

Share
ಸವರನ್ ಗೋಲ್ಡ್ ಬಾಂಡ್ (Sovereign Gold Bond) ಸ್ಕೀಮ್ ಆಗಸ್ಟ್ 30, 2021ರಿಂದ ಐದು ದಿನಗಳವರೆಗೆ ಸಬ್​ಸ್ಕ್ರಿಪ್ಷನ್​ಗಾಗಿ ಮುಕ್ತವಾಗಿ ಇರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಘೋಷಿಸಿದೆ. ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2021-2022, ಸರಣಿ 6ರ ವಿತರಣಾ ಬೆಲೆಯನ್ನು ಪ್ರತಿ ಗ್ರಾಂ ಚಿನ್ನಕ್ಕೆ 4,732 ರೂಪಾಯಿಯಂತೆ ಭಾರತ ಸರ್ಕಾರದ ಪರವಾಗಿ ಆರ್‌ಬಿಐ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಭಾರತದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿ, "ಚಿನ್ನದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದೀರಾ? ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು 6 ಚಿನ್ನದಂಥ ಕಾರಣಗಳು ಇಲ್ಲಿವೆ. ಎಸ್‌ಬಿಐ ಗ್ರಾಹಕರು ಈ ಬಾಂಡ್‌ಗಳಲ್ಲಿ http://onlinesbi.comನ ಇ-ಸೇವೆಗಳ ಅಡಿಯಲ್ಲಿ ಹೂಡಿಕೆ ಮಾಡಬಹುದು".

1 / 8
ಸಾಂದರ್ಭಿಕ ಚಿತ್ರ

Gold price today on 2021 September 7 check silver price in Bangalore Delhi Mumbai and major city

2 / 8
ಚಿನ್ನದ ಬಾಂಡ್‌ಗಳನ್ನು ಖರೀದಿಸುವುದು ಎಲ್ಲಿ?

ಬಾಂಡ್‌ಗಳನ್ನು ಬ್ಯಾಂಕ್​ಗಳ ಮೂಲಕ (ಸಣ್ಣ ಹಣಕಾಸು ಬ್ಯಾಂಕ್​ಗಳು ಮತ್ತು ಪಾವತಿ ಬ್ಯಾಂಕ್​ಗಳನ್ನು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ಅಂಚೆ ಕಚೇರಿಗಳು ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಬಿಎಸ್‌ಇ ಮೂಲಕ ಮಾರಾಟ ಮಾಡಲಾಗುತ್ತದೆ.

3 / 8
ರಿಯಾಯಿತಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಡಿಜಿಟಲ್ ಮೋಡ್ ಮೂಲಕ ಅರ್ಜಿಗೆ ಪಾವತಿ ಮಾಡಿದಾಗ ಸರ್ಕಾರ ಮುಖಬೆಲೆಗಿಂತ ಪ್ರತಿ ಗ್ರಾಮ್​ಗೆ 50 ರೂಪಾಯಿಗಳ ರಿಯಾಯಿತಿ ನೀಡಲಾಗುತ್ತದೆ. ಆರ್‌ಬಿಐ ಹೇಳಿರುವಂತೆ, "ಅಂತಹ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್‌ನ ವಿತರಣಾ ಬೆಲೆ ಪ್ರತಿ ಗ್ರಾಮ್ ಚಿನ್ನಕ್ಕೆ 4,682 ರೂಪಾಯಿ."

4 / 8
ಕಾಲಾವಧಿ

ಬಾಂಡ್‌ನ ಅವಧಿಯು 8 ವರ್ಷಗಳಿಗೆ ಇರುತ್ತದೆ. 5ನೇ ವರ್ಷದ ನಂತರ ನಿರ್ಗಮನದ ಆಯ್ಕೆಯೊಂದಿಗೆ ಮುಂದಿನ ಬಡ್ಡಿ ಪಾವತಿ ದಿನಾಂಕಗಳಲ್ಲಿ ಬಳಸಬಹುದು.

5 / 8
ಗೋಲ್ಡ್ ಬಾಂಡ್‌ಗಳಲ್ಲಿ ಯಾರು ಹೂಡಿಕೆ ಮಾಡಬಹುದು?

ಭಾರತದಲ್ಲಿ ವಾಸಿಸುವ ಯಾವುದೇ ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳು ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ. ಈ ಬಾಂಡ್‌ಗಳನ್ನು 1 ಗ್ರಾಂ ಮೂಲ ಘಟಕದೊಂದಿಗೆ ಚಿನ್ನದ ಗ್ರಾಂ (ಗಳ) ಗುಣಕಗಳಲ್ಲಿ ಗುರುತಿಸಲಾಗುತ್ತದೆ.

6 / 8
ಸವರನ್ ಗೋಲ್ಡ್ ಬಾಂಡ್ ಬೆಲೆ ಹೇಗೆ ನಿರ್ಧಾರ ಆಗುತ್ತದೆ?

ಬಾಂಡ್‌ನ ಬೆಲೆಯನ್ನು ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಲಾಗುವುದು. ಸಬ್​ಸ್ಕ್ರಿಪ್ಷನ್ ಅವಧಿಯ ಹಿಂದಿನ ವಾರದ ಕೊನೆಯ ಮೂರು ವರ್ಕಿಂಗ್ ಡೇಸ್​ನಲ್ಲಿ ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ ಪ್ರಕಟಿಸಿದ 999 ಶುದ್ಧತೆಯ ಚಿನ್ನದ ಮುಕ್ತಾಯದ ಬೆಲೆಯ ಸರಳ ಸರಾಸರಿ ದರ ಆಧರಿಸಿ ಬೆಲೆ ನಿಗದಿ ಮಾಡಲಾಗುತ್ತದೆ.

7 / 8
ಕನಿಷ್ಠ ಮತ್ತು ಗರಿಷ್ಠ ಹೂಡಿಕೆ

ಕನಿಷ್ಠ ಹೂಡಿಕೆ 1 ಗ್ರಾಂ ಚಿನ್ನ. ಚಂದಾದಾರಿಕೆಯ ಗರಿಷ್ಠ ಮಿತಿಯು ವಯಕ್ತಿಕ ಹೂಡಿಕೆದಾರರಿಗೆ 4 ಕೇಜಿ, ಹಿಂದೂ ಅವಿಭಜಿತ ಕುಟುಂಬಗಳಿಗೆ 4 ಕೇಜಿ, ಮತ್ತು ಟ್ರಸ್ಟ್‌ಗಳು ಹಾಗೂ ಅದೇ ರೀತಿಯ ಸಂಸ್ಥೆಗಳಿಗೆ ಒಂದು ಹಣಕಾಸು ವರ್ಷದಲ್ಲಿ (ಏಪ್ರಿಲ್-ಮಾರ್ಚ್) ಗರಿಷ್ಠ 20 ಕೇಜಿ.

8 / 8
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!