AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆಯೇ ದಿವಾಳಿ ಸಂಹಿತೆಯ ಮಸೂದೆ-2021 ಅಂಗೀಕಾರ

IBC (Amendment) Bill: ಮಸೂದೆಯನ್ನು ಪ್ರಾಯೋಗಿಕವಾಗಿ ನಡೆಸಿದ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ರಾವ್ ಇಂದರ್ಜಿತ್ ಸಿಂಗ್ ಅವರು ಮಸೂದೆಯನ್ನು ಪರಿಗಣಿಸುವಂತೆ ಸದನಕ್ಕೆ ಮನವಿ ಮಾಡಿದರು. ನಂತರ, ಸದನವು ಚರ್ಚೆಯಿಲ್ಲದೆ ಮಸೂದೆಯನ್ನು ಅಂಗೀಕರಿಸಿತು.

ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆಯೇ ದಿವಾಳಿ ಸಂಹಿತೆಯ ಮಸೂದೆ-2021 ಅಂಗೀಕಾರ
ಲೋಕಸಭೆ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 28, 2021 | 4:13 PM

Share

ದೆಹಲಿ: ವಿಪಕ್ಷ ಸದಸ್ಯರ ಘೋಷಣೆಗಳ ನಡುವೆ ಲೋಕಸಭೆಯು ಬುಧವಾರ ದಿವಾಳಿ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2021 ಅನ್ನು ಚರ್ಚೆಯಿಲ್ಲದೆ ಅಂಗೀಕರಿಸಿತು. ಮಧ್ಯಾಹ್ನ 2.30 ಕ್ಕೆ ಸದನ ಮತ್ತೆ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರಾದ ಬಿಜೆಡಿ ಸದಸ್ಯ ಭತೃುಹರಿ ಮಹತಾಬ್ ಅವರು ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಘೋಷಿಸಿದರು. ಸದನದಲ್ಲಿ ಮಸೂದೆಯನ್ನು ನಿರಾಕರಿಸಬೇಕೆಂದು ಕೋರಿ ಶಾಸನಬದ್ಧ ನಿರ್ಣಯಕ್ಕಾಗಿ ನೋಟಿಸ್ ನೀಡಿದ 20 ಪ್ರತಿಪಕ್ಷ ಸದಸ್ಯರ ಹೆಸರನ್ನು ಮಹತಾಬ್ ಕರೆದರು. ಆದರೆ, ಪ್ರತಿಪಕ್ಷದ ಸದಸ್ಯರು ಸದನದ ಅಂಗಳದಲ್ಲಿದ್ದ ಕಾರಣ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಮಸೂದೆಯನ್ನು ಪ್ರಾಯೋಗಿಕವಾಗಿ ನಡೆಸಿದ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ರಾವ್ ಇಂದರ್ಜಿತ್ ಸಿಂಗ್ ಅವರು ಮಸೂದೆಯನ್ನು ಪರಿಗಣಿಸುವಂತೆ ಸದನಕ್ಕೆ ಮನವಿ ಮಾಡಿದರು. ನಂತರ, ಸದನವು ಚರ್ಚೆಯಿಲ್ಲದೆ ಮಸೂದೆಯನ್ನು ಅಂಗೀಕರಿಸಿತು.

ಮಸೂದೆ ಅಂಗೀಕಾರವಾದ ಕೂಡಲೇ ಮಹತಾಬ್ ಸದನವನ್ನು ಮಧ್ಯಾಹ್ನ 3.00 ರವರೆಗೆ ಮುಂದೂಡಿದರು. ಹಿಂದಿನ ದಿನ, ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಆರಂಭವಾದ ಕೂಡಲೇ , ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಲಾರಂಭಿಸಿದರು. ಅವರು ಸದನದ ಅಂಗಳಕ್ಕೆ ಇಳಿದು ಬಂದು ಘೋಷಣೆ ಮುಂದುವರಿಸಿದರು. ಸದನವು ಕೇವಲ 10 ನಿಮಿಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ಕಾರಣ ಕೇವಲ ನಾಲ್ಕು ಸದಸ್ಯರು ಮಾತ್ರ ತಮ್ಮ ಸಮಸ್ಯೆಗಳನ್ನು ಎತ್ತಬಹುದಿತ್ತು. ಸಭಾಧ್ಯಕ್ಷರಾಗಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗ್ರವಾಲ್ ಅವರು ಪ್ರತಿಪಕ್ಷ ಸದಸ್ಯರನ್ನು ತಮ್ಮ ಸ್ಥಾನಗಳಿಗೆ ಹಿಂತಿರುಗುವಂತೆ ಕೇಳಿಕೊಂಡರು. ಆದರೆ, ಪ್ರತಿಪಕ್ಷದ ಸದಸ್ಯರು ಘೋಷಣೆ ಮುಂದುವರಿಸಿದ್ದು, ಅಗ್ರವಾಲ್ ಅವರನ್ನು ಸದನವನ್ನು ಮಧ್ಯಾಹ್ನ 2: 30 ರವರೆಗೆ ಮುಂದೂಡಬೇಕಾಯಿತು.

ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಯಲ್ಲಿ ದಿವಾಳಿ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ ಮಸೂದೆ) 2021 ಅನ್ನು ಸೋಮವಾರ ಮಂಡಿಸಿದ್ದರು. ಏಪ್ರಿಲ್ ನಲ್ಲಿ ಘೋಷಿಸಲಾದ ಐಬಿಸಿ ತಿದ್ದುಪಡಿ ಆರ್ಡಿನೆನ್ಸ್ 2021 ಅನ್ನು ಬದಲಿಸಲು ಮಸೂದೆ ಸಜ್ಜಾಗಿದ., ಇದು ಪೂರ್ವ-ಪ್ಯಾಕ್ ಗಳನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ದಿವಾಳಿತನ ಪರಿಹಾರದ ಕಾರ್ಯವಿಧಾನವಾಗಿ 1 ಕೋಟಿ ರೂ ನೀಡುತ್ತದೆ.

ಇದನ್ನೂ ಓದಿ: ಕಾಂಗ್ರೆಸ್ ನೇತೃತ್ವದಲ್ಲಿ 14 ಪ್ರತಿಪಕ್ಷಗಳ ಸಭೆ, ಕೇಂದ್ರದ ವಿರುದ್ಧ ಕಾರ್ಯತಂತ್ರ; ಕೆಲವೇ ಹೊತ್ತಲ್ಲಿ ಜಂಟಿ ಸುದ್ದಿಗೋಷ್ಠಿ