ಕಾಂಗ್ರೆಸ್ ನೇತೃತ್ವದಲ್ಲಿ 14 ಪ್ರತಿಪಕ್ಷಗಳ ಸಭೆ, ಕೇಂದ್ರದ ವಿರುದ್ಧ ಕಾರ್ಯತಂತ್ರ; ಕೆಲವೇ ಹೊತ್ತಲ್ಲಿ ಜಂಟಿ ಸುದ್ದಿಗೋಷ್ಠಿ
ಇಸ್ರೇಲ್ನ ಪೆಗಾಸಸ್ ಸ್ಲೈವೇರ್ ಮೂಲಕ ಭಾರತ ಅನೇಕ ಗಣ್ಯರ ಫೋನ್ ಹ್ಯಾಕ್ ಮಾಡಲಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತಿರುಗಿಬಿದ್ದಿವೆ. ಮುಂಗಾರು ಅಧಿವೇಶನದಲ್ಲಿ ಇದೇ ದೊಡ್ಡ ವಿಚಾರವಾಗಿ, ಸದನಗಳು ಮುಂದೂಡಲ್ಪಡುತ್ತಿವೆ.
ದೆಹಲಿ: ಇಂದು ಒಟ್ಟು 14 ಪ್ರತಿಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಸಭೆ ನಡೆಸಿವೆ. ಸದ್ಯ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ತೊಡಕಾಗಿರುವ, ಪ್ರತಿಪಕ್ಷಗಳ ಪ್ರತಿಭಟನೆಗೆ ಕಾರಣವಾಗಿರುವ ಪೆಗಾಸಸ್ ಫೋನ್ ಹ್ಯಾಕ್ ಹಗರಣದ ಬಗ್ಗೆ ಚರ್ಚಿಸಲು ಮತ್ತು ಇದೇ ವಿಚಾರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಕಾರ್ಯತಂತ್ರ ರೂಪಿಸಲು 14 ಪಕ್ಷಗಳೂ ಸಭೆ ನಡೆಸಿದ್ದವು ಎಂದು ಹೇಳಲಾಗಿದೆ. ಸಭೆಯ ಫೋಟೋವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿಕೊಂಡಿದ್ದು, ಎಲ್ಲ ಪ್ರತಿಪಕ್ಷಗಳ ನಾಯಕರೊಟ್ಟಿಗೆ ಒಂದು ವಿನಮ್ರವಾದ ಸಭೆ ನಡೆಯಿತು. ಇದರಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಲ್ಲೂ ಅದ್ಭುತವಾದ ಅನುಭವ ಇದೆ. ಬುದ್ಧಿವಂತಿಕೆ..ಒಳನೋಟಗಳಿವೆ ಎಂದು ಹೇಳಿದ್ದಾರೆ.
ಇಸ್ರೇಲ್ನ ಪೆಗಾಸಸ್ ಸ್ಲೈವೇರ್ ಮೂಲಕ ಭಾರತ ಅನೇಕ ಗಣ್ಯರ ಫೋನ್ ಹ್ಯಾಕ್ ಮಾಡಲಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತಿರುಗಿಬಿದ್ದಿವೆ. ಮುಂಗಾರು ಅಧಿವೇಶನದಲ್ಲಿ ಇದೇ ದೊಡ್ಡ ವಿಚಾರವಾಗಿ, ಸದನಗಳು ಮುಂದೂಡಲ್ಪಡುತ್ತಿವೆ. ಪೆಗಾಸಸ್ ಸಂಬಂಧಪಟ್ಟಂತೆ ಸರ್ಕಾರದ ವಿರುದ್ಧ ಕಾರ್ಯತಂತ್ರ ಹೆಣೆಯಲು ಶಿವಸೇನೆ, ಸಿಪಿಐ, ಸಿಪಿಎಂ, ರಾಷ್ಟ್ರೀಯ ಜನತಾ ದಳ, ಆಪ್, ಡಿಎಂಕೆ, ಎನ್ಸಿಪಿ, ಸಮಾಜವಾದಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಮುಸ್ಲಿಂ ಲೀಗ್ ಸೇರಿ 14 ಪ್ರತಿಪಕ್ಷಗಳು ಒಗ್ಗಟ್ಟಾಗಿವೆ. ಇಂದು ನಡೆದ ಸಭೆಯ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ್ ಖರ್ಗೆ ವಹಿಸಿದ್ದರು. ಇದೀಗ ಪ್ರತಿಪಕ್ಷಗಳು ಚರ್ಚೆ ನಡೆಸಿದ್ದು, ಇಂದು ಮಧ್ಯಾಹ್ನ ಈ 14 ಪಕ್ಷಗಳ ನಾಯಕರೂ ಒಟ್ಟಾಗಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
Sitting with the entire opposition is extremely humbling. Amazing experience, wisdom and insight in everyone present.#United pic.twitter.com/w74YRuC3Ju
— Rahul Gandhi (@RahulGandhi) July 28, 2021
ಇದನ್ನೂ ಓದಿ: Vikrant Rona First Look: ವಿಕ್ರಾಂತ್ ರೋಣಾದಲ್ಲಿ ಜಿಆರ್ ಆಗಿ ಧೂಳೆಬ್ಬಿಸಲಿದ್ದಾರೆ ಜಾಕ್ವೆಲಿನ್!
14 opposition parties led by the Congress met in Delhi today and discuss about Pegasus Row