ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮೊದಲ ವಾರ್ಷಿಕ ನಾಳೆ; ಅನೇಕ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ನರೇಂದ್ರ ಮೋದಿ
NEP 2020: ಎನ್‌ಇಪಿ 2020 ರ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ಪೈಕಿ ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವಾಸ್ತುಶಿಲ್ಪ (NDEAR) ಮತ್ತು ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆಗೆ(NETF) ಜುಲೈ 29 ರಂದು ವಾರ್ಷಿಕೋತ್ಸವದ ಸಮಾರಂಭದಲ್ಲಿ ಚಾಲನೆ ಸಿಗಲಿದೆ.

ದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಮೊದಲ ವಾರ್ಷಿಕೋತ್ಸವ ಪ್ರಯುಕ್ತ ಗುರುವಾರದಂದು ಪ್ರಧಾನಿ ನರೇಂದ್ರ ಮೋದಿ ಅನೇಕ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿಯಲ್ಲಿ ಒಂದು ವರ್ಷದ ಸುಧಾರಣೆಗಳು ಪೂರ್ಣಗೊಂಡಿರುವುದರ ಪ್ರಯುಕ್ತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ನೀತಿ ನಿರೂಪಕರು ಎಂಬ ವಿಷಯದ ಬಗ್ಗೆ ದೇಶದಾದ್ಯಂತವಿರುವ ವಿದ್ಯಾರ್ಥಿಗಳು, ಶಿಕ್ಷಕರನ್ನುದ್ದೇಶಿಸಿ ಜುಲೈ 29, 2021 ರಂದು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮಾತನಾಡಲಿದ್ದಾರೆ. ಎನ್‌ಇಪಿ 2020 ರ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ಪೈಕಿ ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವಾಸ್ತುಶಿಲ್ಪ (NDEAR) ಮತ್ತು ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆಗೆ(NETF) ಜುಲೈ 29 ರಂದು ವಾರ್ಷಿಕೋತ್ಸವದ ಸಮಾರಂಭದಲ್ಲಿ ಚಾಲನೆ ಸಿಗಲಿದೆ.
ಪ್ರಧಾನ ಮಂತ್ರಿ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಗೆ ಚಾಲನೆ ನೀಡಲಿದ್ದು ಅದು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಬಹು ಪ್ರವೇಶ ಮತ್ತು ನಿರ್ಗಮನ ಆಯ್ಕೆಗಳನ್ನು ಒದಗಿಸುತ್ತದೆ. ಪ್ರಾದೇಶಿಕ ಭಾಷೆಗಳಲ್ಲಿ 1 ನೇ ವರ್ಷದ ಎಂಜಿನಿಯರಿಂಗ್ ಕಾರ್ಯಕ್ರಮಗಳು ಮತ್ತು ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣಕ್ಕಾಗಿ ಮಾರ್ಗಸೂಚಿಗಳನ್ನು ಇದು ನೀಡುತ್ತದೆ.
ಸಿಬಿಎಸ್ಇ ಶಾಲೆಗಳಲ್ಲಿ 3, 5 ಮತ್ತು 8 ನೇ ತರಗತಿಗಳಿಗೆ ಸಾಮರ್ಥ್ಯ ಆಧಾರಿತ ಮೌಲ್ಯಮಾಪನ ಚೌಕಟ್ಟಿನ ಸಫಲ್ SAFAL (Structured Assessment For Analyzing Learning Levels) ಕಲಿಕೆಯ ಮಟ್ಟವನ್ನು ವಿಶ್ಲೇಷಿಸಲು ರಚನಾತ್ಮಕ ಮೌಲ್ಯಮಾಪನ) ಜೊತೆಗೆ ಗ್ರೇಡ್ 1 ವಿದ್ಯಾರ್ಥಿಗಳಿಗೆ ಮೂರು ತಿಂಗಳ ಆಟದ ಆಧಾರಿತ ಶಾಲಾ ತಯಾರಿ ಮಾಡ್ಯೂಲ್ ವಿದ್ಯಾ ಪ್ರವೀಶ್ ನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ಕೃತಕ ಬುದ್ಧಿಮತ್ತೆಗೆ (Artificial Intelligence) ಮೀಸಲಾಗಿರುವ ವೆಬ್‌ಸೈಟ್ ಅನ್ನು ಈ ಕಾರ್ಯಕ್ರಮದಲ್ಲಿ ಪ್ರಾರಂಭಿಸಲಾಗುವುದು
ಸರ್ಕಾರವು ಭಾರತೀಯ ಸಂಕೇತ ಭಾಷೆಯನ್ನು ದ್ವಿತೀಯ ಹಂತದಲ್ಲಿ ಒಂದು ವಿಷಯವಾಗಿ ಪರಿಚಯಿಸುತ್ತದೆ. ಇದು 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದ್ದು, 1986 ರ ಮೂವತ್ತನಾಲ್ಕು ವರ್ಷದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಪಿಇ) ಅನ್ನು ಬದಲಾಯಿಸಿದೆ.
ಎನ್ಇಪಿ 2020 ಅನ್ನು ಸುಸ್ಥಿರ ಅಭಿವೃದ್ಧಿಯ 2030 ರ ಕಾರ್ಯಸೂಚಿಗೆ ಜೋಡಿಸಲಾಗಿದೆ ಮತ್ತು ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಹೆಚ್ಚು ಸಮಗ್ರ, ಹೊಂದಿಕೊಳ್ಳುವ, ಬಹುಶಿಸ್ತೀಯವಾಗಿ, 21 ನೇ ಶತಮಾನದ ಅಗತ್ಯಗಳಿಗೆ ಸರಿಹೊಂದುವಂತೆ ಮತ್ತು ಹೊರತರುವ ಗುರಿಯನ್ನು ಹೊಂದಿರುವ ಮೂಲಕ ಭಾರತವನ್ನು ಜ್ಞಾನದಿಂದ ಕೂಡಿದ ಸಮಾಜ ಮತ್ತು ಜಾಗತಿಕ ಜ್ಞಾನದ ಮಹಾಶಕ್ತಿಯಾಗಿ ಪರಿವರ್ತಿಸುವ ಗುರಿ ಹೊಂದಿದೆ.
ಇದನ್ನೂ ಓದಿ: ಯಡಿಯೂರಪ್ಪನವರ ಕೆಲಸ, ಕೊಡುಗೆ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದ ಪ್ರಧಾನಿ ಮೋದಿ: ನೂತನ ಸಿಎಂಗೆ ಅಭಿನಂದನೆ ಇದನ್ನೂ ಓದಿ: Maharashtra Rains: ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹದ ಅಬ್ಬರ; ಸಾವಿನ ಸಂಖ್ಯೆ 209ಕ್ಕೆ ಏರಿಕೆ, 8 ಜನರು ನಾಪತ್ತೆ
(First anniversary of NEP 2020 Prime Minister Narendra Modi to launch multiple key initiatives on 29th July 2021)
Published On - 2:33 pm, Wed, 28 July 21