AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರರ ವಿರುದ್ಧ ಪ್ರಯೋಗಿಸಬೇಕಾದ ಅಸ್ತ್ರವನ್ನು ಪ್ರಧಾನಿ ಮೋದಿ ನಮ್ಮ ವಿರುದ್ಧ ಪ್ರಯೋಗ ಮಾಡುತ್ತಿದ್ದಾರೆ: ರಾಹುಲ್​ ಗಾಂಧಿ

ಈಗ ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದೆ. ಸದನದಲ್ಲಿ ಪೆಗಾಸಸ್​ ಬಗ್ಗೆ ಚರ್ಚೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಆದರೆ ದೇಶದ ಯುವಕರು ಎಚ್ಚೆತ್ತುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಉಗ್ರರ ವಿರುದ್ಧ ಪ್ರಯೋಗಿಸಬೇಕಾದ ಅಸ್ತ್ರವನ್ನು ಪ್ರಧಾನಿ ಮೋದಿ ನಮ್ಮ ವಿರುದ್ಧ ಪ್ರಯೋಗ ಮಾಡುತ್ತಿದ್ದಾರೆ: ರಾಹುಲ್​ ಗಾಂಧಿ
ಸಭೆಯ ಬಳಿಕ ಒಂದಾಗಿ ಸುದ್ದಿಗೋಷ್ಠಿ ನಡೆಸಿದ ಪ್ರತಿಪಕ್ಷಗಳು
TV9 Web
| Edited By: |

Updated on: Jul 28, 2021 | 3:50 PM

Share

ಪೆಗಾಸಸ್​ ಸ್ಪೈವೇರ್ (Pegasus Spyware)​ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಪ್ರತಿಪಕ್ಷಗಳು (Opposition Leader) ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ. ಇಂದು ಒಟ್ಟು 14 ಪ್ರತಿಪಕ್ಷಗಳು ಕಾಂಗ್ರೆಸ್​ (Congress) ನೇತೃತ್ವದಲ್ಲಿ ಸಭೆ ನಡೆಸಿದ್ದು, ಪೆಗಾಸಸ್​ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಏನೆಲ್ಲ ಕಾರ್ಯತಂತ್ರ ರೂಪಿಸಬೇಕು ಎಂಬುದನ್ನೂ ಚರ್ಚಿಸಿವೆ. ಅದಾದ ಬಳಿಕ ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ(Rahul Gandhi), ಭಾರತದಲ್ಲಿ ಪೆಗಾಸಸ್​ ಸ್ಪೈವೇರ್​ ಮೂಲಕ ಗಣ್ಯರ ಮೇಲೆ ಕಣ್ಣಿಡಲಾಗಿದೆಯೇ? ಈ ವಿವಾದದ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಪ್ರಧಾನಿ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಹಾಗೇ, ಸಂಸತ್ತಿನಲ್ಲಿ ಪ್ರತಿಪಕ್ಷಗಳು ಪೆಗಾಸಸ್ ಸ್ನೂಪಿಂಗ್​ ವಿವಾದದ ಬಗ್ಗೆ ಚರ್ಚಿಸುವುದನ್ನು ನಿರ್ಬಂಧ ವಿಧಿಸಿದ್ದೇಕೆ ಎಂಬುದಕ್ಕೂ ವಿವರಣೆ ಕೊಡಿ ಎಂದು ಕೇಳಿದ್ದಾರೆ.

ಸಂಸತ್ತಿನಲ್ಲಿ ನಾವು ಪೆಗಾಸಸ್​ ಸ್ಪೈವೇರ್ ಬಗ್ಗೆ ಮಾತನಾಡಲು ಪ್ರಯತ್ನಿಸಿದರೆ ನಮ್ಮ ದನಿಯನ್ನು ಹತ್ತಿಕ್ಕಲಾಗುತ್ತಿದೆ. ಕೇಂದ್ರ ಸರ್ಕಾರ ಪೆಗಾಸಸ್​​ನ್ನು ಖರೀದಿಸಿದೆಯೇ ಎಂಬುದು ನಮಗೆ ಗೊತ್ತಾಗಬೇಕು..ಹೌದು ಅಥವಾ ಇಲ್ಲ ಎಂದು ಉತ್ತರಿಸಲು ಏನು ಸಮಸ್ಯೆ? ಪೆಗಾಸಸ್​ ಸ್ಪೈವೇರ್​ ಕಣ್ಣಿಟ್ಟಿರುವವರಲ್ಲಿ ಪ್ರತಿಪಕ್ಷದ ನಾಯಕರಲ್ಲದೆ, ಕೇಂದ್ರ ಸರ್ಕಾರದ ಕ್ಯಾಬಿನೆಟ್​ನಲ್ಲಿರುವ ಸಚಿವರೂ ಸೇರಿದ್ದಾರೆ. ಅಂದರೆ ಸರ್ಕಾರ ತಮ್ಮದೇ ಜನರ ಮೇಲೆ ಕೂಡ ಇದನ್ನು ಬಳಸಿದೆಯೇ ಎಂದು ರಾಹುಲ್​ ಗಾಂಧಿ ಕೇಳಿದ್ದಾರೆ.

ಪೆಗಾಸಸ್​ ಎಂಬುದು ರಾಷ್ಟ್ರೀಯತೆಗೆ ಸಂಬಂಧಪಟ್ಟ ವಿಚಾರ. ಈ ಆಯುಧವನ್ನು ಪ್ರಜಾಪ್ರಭುತ್ವದ ವಿರುದ್ಧ ಬಳಸಲಾಗಿದ್ದು, ನಮಗಿದು ದೇಶದ್ರೋಹದಂತೆ ಕಾಣಿಸುತ್ತಿದೆ. ನನ್ನ ಕಣ್ಣಲ್ಲಿ ಇದು ಖಾಸಗಿ ವಿಚಾರವಲ್ಲ..ರಾಷ್ಟ್ರ-ವಿರೋಧಿ ಕಾರ್ಯಚಟುವಟಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪೆಗಾಸಸ್​ ಸ್ಪೈವೇರ್​ನಂಥ ಟೆಕ್ನಾಲಜಿಯನ್ನು ಉಗ್ರರ ವಿರುದ್ಧ ಬಳಸಬೇಕು. ಆದರೆ ಪ್ರಧಾನಿ ಮೋದಿ ಮತ್ತು ಅಮಿತ್​ ಶಾ ಪ್ರಜಾಪ್ರಭುತ್ವದ ವಿರುದ್ಧ ಬಳಕೆ ಮಾಡಬೇಕು. ಅದು ಪ್ರಜಾಪ್ರಭುತ್ವದ ಅಂತರಾತ್ಮಕ್ಕೆ ಹೊಡೆತ ಕೊಟ್ಟಂತೆ ಎಂದೂ ವಾಗ್ದಾಳಿ ನಡೆಸಿದ್ದಾರೆ.

ಸದನದಲ್ಲಿ ಚರ್ಚೆಗೆ ಇಲ್ಲ ಅವಕಾಶ ಈಗ ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದೆ. ಸದನದಲ್ಲಿ ಪೆಗಾಸಸ್​ ಬಗ್ಗೆ ಚರ್ಚೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಆದರೆ ದೇಶದ ಯುವಕರು ಎಚ್ಚೆತ್ತುಕೊಳ್ಳಬೇಕು. ನರೇಂದ್ರ ಮೋದಿಯವರು ನಿಮ್ಮ ಫೋನುಗಳ ವಿರುದ್ಧವೇ ಶಸ್ತ್ರ ಅಳವಡಿಸಿದ್ದಾರೆ. ನನ್ನನ್ನೂ ಸೇರಿ ಅನೇಕ ರಾಜಕೀಯ ಗಣ್ಯರು, ಹೋರಾಟಗಾರರ ಮೇಲೆ ಕಣ್ಣಿಡಲಾಗಿದೆ. ಇಷ್ಟೆಲ್ಲ ಆದರೂ ನಾವು ಮಾತನಾಡಬಾರದಂತೆ ಎಂದು ಹೇಳಿದ್ದಾರೆ. ಇಂದು ಒಟ್ಟು 14 ಪ್ರತಿಪಕ್ಷಗಳು ಸೇರಿ ಸಭೆ ನಡೆಸಿದ್ದವು. ಈ ಸಭೆಯಲ್ಲಿ ಅಧೀರ್ ರಂಜನ್ ಚೌಧರಿ, ಜೈರಾಮ್​ ರಮೇಶ್​, ಮಲ್ಲಿಕಾರ್ಜುನ ಖರ್ಗೆ, ಡಿಎಂಕೆಯ ಟಿ.ಆರ್​.ಬಾಬು, ತಿರುಚಿ ಸಿವಾ, ಎನ್​ಸಿಪಿ ಸುಪ್ರಿಯಾ ಸುಲೆ, ಪ್ರಫುಲ್​ ಪಟೇಲ್​, ಶಿವಸೇನೆಯ ಸಂಜಯ್​ ರಾವತ್​ ಸೇರಿ ಇನ್ನೂ ಹಲವು ಪ್ರಮುಖ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ದಾಂಧಲೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ: ಕೇರಳದ ಸಚಿವರ ವಿರುದ್ಧ ಗುಡುಗಿದ ಸುಪ್ರೀಂಕೋರ್ಟ್

Prime Minister Narendra Modi has put a weapon in our phones said Congress Leader Rahul Gandhi

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ