AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra Rains: ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹದ ಅಬ್ಬರ; ಸಾವಿನ ಸಂಖ್ಯೆ 209ಕ್ಕೆ ಏರಿಕೆ, 8 ಜನರು ನಾಪತ್ತೆ

Maharashtra Floods: ಜೂ.1ರಿಂದ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿ ಅವಘಡದಿಂದ ಮೃತಪಟ್ಟವರು 296 ಮಂದಿ. ವಿಪರೀತ ಮಳೆಯಿಂದಾಗಿ ರಕ್ಷಣಾ ಕಾರ್ಯಾಚಾರಣೆಗೂ ತೊಂದರೆಯಾಗುತ್ತಿದೆ. ಈ ಪ್ರವಾಹದಿಂದ ಈಗಾಗಲೇ ಸುಮಾರು 58,722 ವಿವಿಧ ಸಾಕುಪ್ರಾಣಿಗಳು ಸಾವನ್ನಪ್ಪಿವೆ.

Maharashtra Rains: ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹದ ಅಬ್ಬರ; ಸಾವಿನ ಸಂಖ್ಯೆ 209ಕ್ಕೆ ಏರಿಕೆ, 8 ಜನರು ನಾಪತ್ತೆ
ಮಹಾರಾಷ್ಟ್ರದಲ್ಲಿ ನೀರು ತುಂಬಿರುವ ದೃಶ್ಯ
TV9 Web
| Edited By: |

Updated on: Jul 28, 2021 | 10:24 AM

Share

ಮಹಾರಾಷ್ಟ್ರ(Maharashtra Rains) ದಲ್ಲಿ ಮಳೆ ಸಂಬಂಧಿ ಅವಘಡಗಳಿಗೆ ಮೃತಪಟ್ಟವರ ಸಂಖ್ಯೆ 209ಕ್ಕೆ ಏರಿಕೆಯಾಗಿದೆ. ಅದರಲ್ಲೂ ಮಳೆಯಿಂದ ಅತ್ಯಂತ ಹೆಚ್ಚು ಸಂಕಷ್ಟಕ್ಕೀಡಾಗಿರುವ ರಾಯಘಡ್​​ ಜಿಲ್ಲೆಯೊಂದರಲ್ಲೇ 90ಕ್ಕೂ ಹೆಚ್ಚು ಸಾವಾಗಿದೆ. ಇಲ್ಲಿ ಇನ್ನೂ 8 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಮಹಾರಾಷ್ಟ್ರದ ಬಹುತೇಕ ಭಾಗಗಳಲ್ಲಿ ವಿಪರೀತ ಮಳೆ ಬೀಳುತ್ತಿದ್ದು, ಇದರಿಂದಾಗಿ ಪ್ರವಾಹ ಮತ್ತು ಭೂಕುಸಿತ(Landslide) ಉಂಟಾಗಿದೆ. ಅದರಲ್ಲೂ ಕೊಂಕಣ ಕರಾವಳಿ (Coastal Konkan) ಮತ್ತು ಪಶ್ಚಿಮ ಮಹಾರಾಷ್ಟ್ರ(Western Maharashtra) ಪ್ರದೇಶಗಳು ತತ್ತರಿಸಿ ಹೋಗಿವೆ.

ಈಗ ಸಾವನ್ನಪ್ಪಿದ 209 ಜನರಲ್ಲಿ ಅತ್ಯಂತ ಹೆಚ್ಚು ಅಂದರೆ 95 ಮಂದಿ ರಾಯಗಡ್​​ದವರೇ ಆಗಿದ್ದಾರೆ. ಉಳಿದಂತೆ ಸತಾರಾದಲ್ಲಿ 45, ರತ್ನಗಿರಿಯಲ್ಲಿ 35, ಥಾಣೆಯಲ್ಲಿ 14, ಕೊಲ್ಲಾಪುರದಲ್ಲಿ 7, ಮುಂಬೈ ಉಪನಗರದಲ್ಲಿ 4, ಪುಣೆಯಲ್ಲಿ ಮೂವರು ಮತ್ತು ಸಿಂಧುದುರ್ಗ್​, ವಾರ್ಧಾ ಹಾಗೂ ಅಕೋಲಾ ಜಿಲ್ಲೆಗಳಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ವಿಭಾಗ ಮಾಹಿತಿ ಬಿಡುಗಡೆ ಮಾಡಿದೆ.

ಜೂ.1ರಿಂದ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿ ಅವಘಡದಿಂದ ಮೃತಪಟ್ಟವರು 296 ಮಂದಿ. ವಿಪರೀತ ಮಳೆಯಿಂದಾಗಿ ರಕ್ಷಣಾ ಕಾರ್ಯಾಚಾರಣೆಗೂ ತೊಂದರೆಯಾಗುತ್ತಿದೆ. ಈ ಪ್ರವಾಹದಿಂದ ಈಗಾಗಲೇ ಸುಮಾರು 58,722 ವಿವಿಧ ಸಾಕುಪ್ರಾಣಿಗಳು ಸಾವನ್ನಪ್ಪಿವೆ. ಪಶ್ಚಿಮ ಘಟ್ಟಗಳ ಭಾಗವೇ ಆಗಿರುವ ಸಹ್ಯಾದ್ರಿ ಗುಡ್ಡಗಳ ಮೇಲೆ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದ ಸತಾರಾ, ಸಾಂಘ್ಲಿ, ಕೊಲ್ಲಾಪುರ ಜಿಲ್ಲೆಗಳಲ್ಲಿ ಹರಿಯುವ ನದಿಗಳ ಮಟ್ಟ ಏರಿ, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನದಿ ಪಾತ್ರದ ಜನರನ್ನೆಲ್ಲ ಸ್ಥಳಾಂತರ ಮಾಡುವ ಕೆಲಸವೂ ಭರದಿಂದ ಸಾಗುತ್ತಿದೆ. ಇಲ್ಲಿಯವರೆಗೆ 4,34,185 ಜನರನ್ನು ಬೇರೆಡೆಗೆ ಕರೆದುಕೊಂಡು ಹೋಗಲಾಗಿದ್ದು, ಅದರಲ್ಲಿ ಸಾಂಘ್ಲಿಯಿಂದ 2,11,808 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಸಾಂಘ್ಲಿಯಲ್ಲಿ ಹೆಚ್ಚಾಗಿ ಮಳೆ ಬಾರದಿದ್ದರೂ ಸತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಅಣೆಕಟ್ಟಿನಿಂದ ಹೊರಬರುತ್ತಿರುವ ಹೆಚ್ಚಿನ ಪ್ರಮಾಣದ ನೀರಿನಿಂದ ಸಮಸ್ಯೆಯಾಗಿದೆ. ಒಟ್ಟು 308 ತಾತ್ಕಾಲಿಕ ಆಶ್ರಯ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ನದಿಪಾತ್ರಗಳ ಜನರನ್ನೆಲ್ಲ ಇಲ್ಲಿ ಕರೆದುಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಮುಖ್ಯಮಂತ್ರಿಯಾದ ಬಳಿಕ ಮಾಡುವ ಮೊಟ್ಟ ಮೊದಲ ಕೆಲಸ ಇದು – ಬಸವರಾಜ ಬೊಮ್ಮಾಯಿ

Death tolls rises to 209 in Maharashtra due to Rain related incidents