ಹೊರಗೆ ಗಿಲ್ಲಿ ಫ್ಯಾನ್ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಫ್ಯಾನ್ ಬೇಸ್ ಎಷ್ಟು ದೊಡ್ಡದಾಗಿದೆ ಎಂಬ ಕುತೂಹಲ ಸ್ಪರ್ಧಿಗಳಿಗೆ ಇರುತ್ತದೆ. ಈಗ ಹೊರಗೆ ಗಿಲ್ಲಿ ಅಭಿಮಾನಿ ಬಳಗ ನೋಡಿ ಬಿಗ್ ಬಾಸ್ ನಿಂದ ಹೊರ ಬರೋರಿಗೆ ಶಾಕ್ ಆಗಿದೆ. ಗಿಲ್ಲಿ ಅಭಿಮಾನಿ ಬಳಗ ಇಷ್ಟು ದೊಡ್ಡದಿದೆ ಎಂಬ ಕಲ್ಪನೆ ಅವರಿಗೆ ಇರಲಿಲ್ಲ.
ರಾಶಿಕಾ ಶೆಟ್ಟಿ ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅವರು ಈಗ ಟಿವಿ9 ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಗಿಲ್ಲಿ ಫ್ಯಾನ್ಸ್ ಇಷ್ಟು ಹಿರಿದಾಗಿದೆ ಎಂಬ ವಿಷಯ ಗೊತ್ತಿರಲಿಲ್ಲ ಎಂದಿದ್ದಾರೆ ಅವರು. ಪ್ರತಿ ವ್ಯಕ್ತಿ ಕೂಡ ಇದನ್ನೇ ಹೇಳುತ್ತಿದ್ದಾರೆ. ಅಭಿಮಾನಿ ಬಳಗ ನೋಡಿ ಸ್ವತಃ ಗಿಲ್ಲಿಗೆ ಅಚ್ಚರಿ ಆಗಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
