ಈಡೇರಲೇ ಇಲ್ಲ ಮುತ್ತಪ್ಪ ರೈ ಬಯೋಪಿಕ್ ಆಸೆ: ಆ ದಿನಗಳನ್ನು ವಿವರಿಸಿದ ರವಿ ಶ್ರೀವತ್ಸ

Updated By: ಮದನ್​ ಕುಮಾರ್​

Updated on: Apr 19, 2025 | 10:08 PM

ಖ್ಯಾತ ನಿರ್ದೇಶಕ ರವಿ ಶ್ರೀವತ್ಸ ಅವರು ಭೂಗತ ಲೋಕದ ಕಹಾನಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಫೇಮಸ್ ಆದರು. ಮುತ್ತಪ್ಪ ರೈ ಬದುಕಿನ ಕುರಿತು ಸಿನಿಮಾ ಮಾಡಬೇಕು ಎಂದು ರವಿ ಶ್ರೀವತ್ಸ ಬಯಸಿದ್ದರು. ಆದರೆ ಆ ಸಿನಿಮಾದ ಆಸೆ ಈಡೇರಲೇ ಇಲ್ಲ. ಆ ಕುರಿತು ಈಗ ರವಿ ಶ್ರೀವತ್ಸ ಮತ್ತೆ ಮಾತನಾಡಿದ್ದಾರೆ.

ನಿರ್ದೇಶಕ ರವಿ ಶ್ರೀವತ್ಸ ಅವರು ಭೂಗತ ಲೋಕದ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಫೇಮಸ್ ಆದರು. ಮುತ್ತಪ್ಪ ರೈ (Muthappa Rai) ಜೀವನದ ಕುರಿತು ಸಿನಿಮಾ ಮಾಡಬೇಕು ಎಂದು ರವಿ ಶ್ರೀವತ್ಸ ಅವರು ಬಯಸಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಆ ಕುರಿತು ಈಗ ಅವರು ಮತ್ತೆ ಮಾತನಾಡಿದ್ದಾರೆ. ಮುತ್ತಪ್ಪ ರೈ ಬಯೋಪಿಕ್ (Muthappa Rai Biopic) ಮಾಡಲು ಅನೇಕ ವಿಘ್ನಗಳು ಎದುರಾದವು. ಆಗ ಏನೆಲ್ಲ ನಡೆಯಿತು ಎಂಬುದನ್ನು ರವಿ ಶ್ರೀವತ್ಸ (Ravi Srivathsa) ಅವರು ವಿವರಿಸಿದ್ದಾರೆ. ‘ಮೂರೂವರೆ ಗಂಟೆಯ ಗಟ್ಟಿ ಕಥೆ ಸಿದ್ಧ ಮಾಡಿದ್ದೆವು. ಈಗ ಆಗಿದ್ದರೆ 2 ಪಾರ್ಟ್ ಸಿನಿಮಾ ಆಗುತ್ತಿತ್ತು’ ಎಂದಿದ್ದಾರೆ ರವಿ ಶ್ರೀವತ್ಸ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.