Gowri Shankara: ರವಿಚಂದ್ರನ್ ಚಿತ್ರದಲ್ಲಿ ದುಬಾರಿ ಶ್ವಾನ ನಟನೆ; 10 ಲಕ್ಷ ರೂಪಾಯಿ ಸಂಭಾವನೆ
‘ಗೌರಿ ಶಂಕರ’ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ. ರವಿಚಂದ್ರನ್ ಮತ್ತು ಅಪೂರ್ವಾ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಒಂದು ಶ್ವಾನ ಕೂಡ ಮುಖ್ಯ ಪಾತ್ರ ಮಾಡುತ್ತಿದೆ.
‘ಕ್ರೇಜಿ ಸ್ಟಾರ್’ ರವಿಚಂದ್ರನ್ (Ravichandran) ಅವರು ‘ಗೌರಿ ಶಂಕರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಕುಂಚ ಕಲಾವಿದನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅಚ್ಚರಿ ಏನೆಂದರೆ ಈ ಸಿನಿಮಾದಲ್ಲಿ ದುಬಾರಿ ಬೆಲೆಯ ಶ್ವಾನ (Costliest Dog) ಕೂಡ ನಟಿಸುತ್ತಿದೆ. ವಿಶೇಷ ತಳಿಯ ಈ ನಾಯಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ‘ಗೌರಿ ಶಂಕರ’ (Gowri Shankara Movie) ಚಿತ್ರದ ಕಥೆ ಡಿಫರೆಂಟ್ ಆಗಿದ್ದು, ತುಂಬ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಆಗುತ್ತಿದೆ. ರವಿಚಂದ್ರನ್ ಜೊತೆ ನಟಿ ಅಪೂರ್ವಾ ಅವರು ಅಭಿನಯಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Feb 01, 2023 03:50 PM