‘ಶರ್ಟ್​ನ 3 ಬಟ್ ಓಪನ್ ಮಾಡೋದು ನಾನೊಬ್ನೆ’; ಸ್ಟೈಲ್ ಕಾಪಿ ಮಾಡಲು ಬಂದವರಿಗೆ ರವಿಚಂದ್ರನ್ ಎಚ್ಚರಿಕೆ

Updated on: Mar 03, 2025 | 8:03 AM

ರವಿಚಂದ್ರನ್ ಹಾಗೂ ಡ್ರೋನ್ ಪ್ರತಾಪ್ ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ಮುಖಾಮುಖಿ ಆಗಿದ್ದಾರೆ. ಅವರನ್ನು ನೋಡಿ ಫ್ಯಾನ್ಸ್ ಖುಷಿ ಆಗಿದ್ದಾರೆ. ‘ಶರ್ಟ್​ನ 3 ಗುಂಡಿ ಓಪನ್ ಮಾಡೋದು ನಾನೊಬ್ನೆ’ ಎಂದು ರವಿಚಂದ್ರನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ರವಿಚಂದ್ರನ್ ಅವರು ಹಲವು ಸಂದರ್ಭದಲ್ಲಿ ಶರ್ಟ್​ನ ಮೂರು ಬಟನ್ ತೆಗೆದುಕೊಂಡು ಇರುತ್ತಾರೆ. ಈ ಸ್ಟೈಲ್​ನ ಕಾಪಿ ಮಾಡುವಂತೆ ಪ್ರತಾಪ್​ಗೆ ಒತ್ತಾಯ ಬಂತು. ಆದರೆ, ಇದನ್ನು ಮಾಡಬಾರದು ಎಂಬರ್ಥದಲ್ಲಿ ರವಿಚಂದ್ರನ್ ಮಾತನಾಡಿದ್ದಾರೆ. ‘ಕರ್ನಾಟಕದಲ್ಲಿ ಶರ್ಟ್​ನ ಮೂರು ಬಟನ್ ತೆಗೆದು ಕಾಣಿಸಿಕೊಳ್ಳೋದು ನಾನೊಬ್ಬನೆ’ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More