ಮಂತ್ರಾಲಯಕ್ಕೂ ತಟ್ಟಿದ ಭಾಷಾ ವಿವಾದದ ಕಿಚ್ಚು, ಇದು ಕಿಡಿಗೇಡಿಗಳ ಕೃತ್ಯವೆಂದ ಭಕ್ತರು
ಆಂಧ್ರ ಗಡಿಯ ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಫಲಕವೊಂದರ ವಿಚಾರದಲ್ಲಿ ಭಾಷಾ ವಿವಾದದ ಕಿಡಿ ಹೊತ್ತಿದ್ದು, ಮಠದ ಮುಖ್ಯ ದ್ವಾರದಲ್ಲಿ ಕನ್ನಡದಲ್ಲಿ ಬರೆಯಲಾಗಿರುವ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಎಂಬ ಶ್ಲೋಕದ ಫಲಕಕ್ಕೆ ತೆಲುಗು ಭಾಷಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಂತ್ರಾಲಯವು ಆಂಧ್ರದ ಕರ್ನೂಲು ಜಿಲ್ಲೆಗೆ ಸೇರಿದ್ದು, ಇಲ್ಲಿ ತೆಲುಗು ಭಾಷೆಯಲ್ಲಿ ಫಲಕ ಇರಬೇಕೆಂದು ಬರೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಂಧ್ರಪ್ರದೇಶ ಸಿಎಂ ಮತ್ತು ಉಪಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ರಾಯಚೂರು, ಡಿಸೆಂಬರ್ 28: ಆಂಧ್ರ ಗಡಿಯ ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಫಲಕವೊಂದರ ವಿಚಾರದಲ್ಲಿ ಭಾಷಾ ವಿವಾದದ ಕಿಡಿ ಹೊತ್ತಿದ್ದು, ಮಠದ ಮುಖ್ಯ ದ್ವಾರದಲ್ಲಿ ಕನ್ನಡದಲ್ಲಿ ಬರೆಯಲಾಗಿರುವ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಎಂಬ ಶ್ಲೋಕದ ಫಲಕಕ್ಕೆ ತೆಲುಗು ಭಾಷಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಂತ್ರಾಲಯವು ಆಂಧ್ರದ ಕರ್ನೂಲು ಜಿಲ್ಲೆಗೆ ಸೇರಿದ್ದು, ಇಲ್ಲಿ ತೆಲುಗು ಭಾಷೆಯಲ್ಲಿ ಫಲಕ ಇರಬೇಕೆಂದು ಬರೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಂಧ್ರಪ್ರದೇಶ ಸಿಎಂ ಮತ್ತು ಉಪಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಇದೀಗ ಈ ಕುರಿತು ಸ್ಪಷ್ಟನೆ ನೀಡಿರುವ ರಾಯರ ಭಕ್ತರು, ರಾಯರ ಕಾರ್ಯವ್ಯಾಪ್ತಿ ಕನ್ನಡದಲ್ಲೇ ಹೆಚ್ಚಿದೆ.ಎಲ್ಲಾ ಭಾಷೆಗೆ ಅವರ ಕೊಡುಗೆಯಿದೆ. ಎಲ್ಲಾ ಭಾಷೆಯಲ್ಲಿಯೂ ಅವರ ಭಕ್ತರಿದ್ದಾರೆ. 50 ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಶ್ಲೋಕ ಕನ್ನಡದಲ್ಲಿಯೇ ಇತ್ತು. 1981ರ ಭಾಗ್ಯವಂತ ಸಿನಿಮಾದ ದೃಶ್ಯಾವಳಿಗಳಲ್ಲಿ ಇದಕ್ಕೆ ಸಾಕ್ಷಿಯಿದೆ. ಅಂದು ಇಲ್ಲದ ಸಮಸ್ಯೆ ಇಂದು ಭುಗಿಲೆದ್ದಿರುವುದು ಕಿಡಿಗೇಡಿಗಳ ಹುನ್ನಾರವೆಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.