ಚಾಮರಾಜನಗರ: ಬಾಳೆಹಣ್ಣಿಗಾಗಿ ನಡುರಸ್ತೆಯಲ್ಲಿಯೇ ಲಾರಿ ತಡೆದ ‘ಬನಾನಾ ಬೇಬಿ’!
ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, 'ಬನಾನಾ ಬೇಬಿ' ಎಂದು ಕರೆಯಲ್ಪಡುವ ಆನೆ ಮತ್ತೆ ಸಕ್ರಿಯವಾಗಿದೆ. ಕಳೆದ ಮೂರು ತಿಂಗಳಿಂದ ಸೈಲೆಂಟ್ ಆಗಿದ್ದ ಈ ಆನೆ, ಇದೀಗ ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುತ್ತಿದೆ. ಬಾಳೆಹಣ್ಣು ಹೊತ್ತು ಸಾಗುವ ವಾಹನಗಳೇ ಈ ಆನೆಯ ಮುಖ್ಯ ಗುರಿಯಾಗಿದ್ದು, ನಡುರಸ್ತೆಯಲ್ಲೇ ವಾಹನಗಳನ್ನು ತಡೆದು ನಿಲ್ಲಿಸುತ್ತಿದೆ. ಇದರಿಂದಾಗಿ ಪುಣಜನೂರಿನಿಂದ ತಮಿಳುನಾಡಿನ ಅಸನೂರು ರಸ್ತೆ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಈ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ.
ಚಾಮರಾಜನಗರ, ಡಿಸೆಂಬರ್ 28: ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ‘ಬನಾನಾ ಬೇಬಿ’ ಎಂದು ಕರೆಯಲ್ಪಡುವ ಆನೆ ಮತ್ತೆ ಸಕ್ರಿಯವಾಗಿದೆ. ಕಳೆದ ಮೂರು ತಿಂಗಳಿಂದ ಸೈಲೆಂಟ್ ಆಗಿದ್ದ ಈ ಆನೆ, ಇದೀಗ ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುತ್ತಿದೆ. ಬಾಳೆಹಣ್ಣು ಹೊತ್ತು ಸಾಗುವ ವಾಹನಗಳೇ ಈ ಆನೆಯ ಮುಖ್ಯ ಗುರಿಯಾಗಿದ್ದು, ನಡುರಸ್ತೆಯಲ್ಲೇ ವಾಹನಗಳನ್ನು ತಡೆದು ನಿಲ್ಲಿಸುತ್ತಿದೆ. ಇದರಿಂದಾಗಿ ಪುಣಜನೂರಿನಿಂದ ತಮಿಳುನಾಡಿನ ಅಸನೂರು ರಸ್ತೆ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಈ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಈ ಮಧ್ಯೆ, ಕಡೂರು ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

