MI vs RCB, WPL 2024: ಫೈನಲ್​ಗೇರಿದ ಖುಷಿಯಲ್ಲಿ ಆರ್​ಸಿಬಿ ಆಟಗಾರ್ತಿಯರು ಏನೆಲ್ಲ ಮಾಡಿದ್ರು ನೋಡಿ

|

Updated on: Mar 16, 2024 | 8:02 AM

Royal Challengers Bangalore Women: ಕೊನೆಯ 3 ಎಸೆತಗಳಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ 8 ರನ್‌ಗಳ ಅಗತ್ಯವಿತ್ತು. ಇದನ್ನು ಕಾಪಾಡುವಲ್ಲಿ ಯಶಸ್ವಿಯಾದ ಆರ್​ಸಿಬಿಯ ಆಶಾ ಶೋಭನಾ ಗೆದ್ದ ತಕ್ಷಣ, 'ನಾನಿದ್ದೇನೆ' ಎಂದು ಸೂಚಿಸುತ್ತಾ ಗೆಲುವನ್ನು ಸಂಭ್ರಮಿಸಿದರು. ಅತ್ತ ಸ್ಮೃತಿ ಮಂಧಾನ ಓಡಿ ಬಂದು ಎಲಿಸ್ಸಾ ಪೆರ್ರಿ ಅವರನ್ನು ಅಪ್ಪಿಕೊಂಡರು.

ಮಹಿಳಾ ಪ್ರೀಮಿಯರ್ ಲೀಗ್‌ 2024ರ (WPL 2024) ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್​ಸಿಬಿ ಬೇಗನೆ ಪ್ರಮುಖ ವಿಕೆಟ್ ಕಳೆದುಕೊಂಡಿತಾದರೂ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 135 ರನ್ ಗಳಿಸಿತು. ಮುಂಬೈ ಇಂಡಿಯನ್ಸ್‌ಗೆ ಈ ಸವಾಲು ಸುಲಭವಾಗಿತ್ತು. ಆದರೆ ಕೊನೆಯ ಮೂರು ಓವರ್‌ಗಳಲ್ಲಿ ಪಂದ್ಯ ಆರ್​ಸಿಬಿ ಪರ ವಾಲಿತು. ಕೊನೆಯ ಓವರ್‌ನಲ್ಲಿ ಮುಂಬೈ ತಂಡದ ಗುರಿ 12 ರನ್ ಆಗಿತ್ತು. ಈ ಋತುವಿನಲ್ಲಿ ಪದಾರ್ಪಣೆ ಮಾಡಿದ ಆಶಾ ಶೋಭನಾ ಅವರನ್ನು ಸ್ಮೃತಿ ಬೌಲಿಂಗ್​ಗೆ ತಂದರು. ಆಶಾ ಮಹಿಳಾ ಪ್ರೀಮಿಯರ್ ಲೀಗ್‌ಗೆ ಹೊಸಬರು, ಆದರೆ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಕೊನೆಯ 3 ಎಸೆತಗಳಲ್ಲಿ 8 ರನ್‌ಗಳ ಗುರಿಯಿತ್ತು. ಇದನ್ನು ಕಾಪಾಡುವಲ್ಲಿ ಯಶಸ್ವಿಯಾದ ಆಶಾ ಶೋಭನಾ ಗೆದ್ದ ತಕ್ಷಣ, ‘ನಾನಿದ್ದೇನೆ’ ಎಂದು ಸೂಚಿಸುತ್ತಾ ಗೆಲುವನ್ನು ಸಂಭ್ರಮಿಸಿದರು. ಅತ್ತ ಸ್ಮೃತಿ ಮಂಧಾನ ಓಡಿ ಬಂದು ಎಲಿಸ್ಸಾ ಪೆರ್ರಿ ಅವರನ್ನು ಅಪ್ಪಿಕೊಂಡರು. ಆರ್​ಸಿಬಿ ಡಗೌಟ್​ನಲ್ಲಂತು ಸಂಭ್ರಮ ಮನೆ ಮಾಡಿತು. ಆಟಗಾರ್ತಿಯರು ಕುಣಿದು ಕುಪ್ಪಳಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ