DCW vs RCBW, WPL 2024: ಆರ್ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ರಣರೋಚಕ ಫೈನಲ್ ಪಂದ್ಯ ಯಾವಾಗ?, ಎಲ್ಲಿ?: ಇಲ್ಲಿದೆ ಮಾಹಿತಿ
Delhi Capitals Women vs Royal Challengers Bangalore Women, Final: ಮಹಿಳಾ ಪ್ರೀಮಿಯರ್ ಲೀಗ್ ಕಳೆದ ಋತುವಿನಲ್ಲಿ ಪ್ಲೇಆಫ್‌ಗಳನ್ನು ಕಳೆದುಕೊಂಡಿದ್ದ ಸ್ಮೃತಿ ಮಂಧಾನ ಸಾರಥ್ಯದ ಆರ್ಸಿಬಿ, ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿ ಅಗ್ರ-3ರಲ್ಲಿ ಸ್ಥಾನ ಗಳಿಸಿ ಫೈನಲ್‌ಗೆ ಪ್ರವೇಶಿಸಿದೆ. ಇದೀಗ ಫೈನಲ್ ಪಂದ್ಯ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ ನೋಡೋಣ.
ಮಹಿಳಾ ಪ್ರೀಮಿಯರ್ ಲೀಗ್ 2024 ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈ ಬಾರಿಯ ಡಬ್ಲ್ಯೂಪಿಎಲ್ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (DCW vs RCBW) ತಂಡಗಳು ಮುಖಾಮುಖಿ ಆಗಲಿದೆ. ಶುಕ್ರವಾರ, ಮಾರ್ಚ್ 15 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 5 ರನ್‌ಗಳಿಂದ ಸೋಲಿಸಿ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿತು. ಕಳೆದ ಋತುವಿನಲ್ಲಿ ಪ್ಲೇಆಫ್‌ಗಳನ್ನು ಕಳೆದುಕೊಂಡಿದ್ದ ಸ್ಮೃತಿ ಮಂಧಾನ ಸಾರಥ್ಯದ ಆರ್ಸಿಬಿ, ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿ ಅಗ್ರ-3ರಲ್ಲಿ ಸ್ಥಾನ ಗಳಿಸಿ ಫೈನಲ್‌ಗೆ ಪ್ರವೇಶಿಸಿದೆ. ಇದೀಗ ಫೈನಲ್ ಪಂದ್ಯ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ ನೋಡೋಣ.
ಡೆಲ್ಲಿ ಕ್ಯಾಪಿಟಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಬ್ಲ್ಯೂಪಿಎಲ್ 2024 ಫೈನಲ್ ಪಂದ್ಯ ಯಾವಾಗ?
ಮಾರ್ಚ್ 17 ರಂದು ಡೆಲ್ಲಿ ಕ್ಯಾಪಿಟಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಬ್ಲ್ಯೂಪಿಎಲ್ 2024 ಫೈನಲ್ ಪಂದ್ಯ ನಡೆಯಲಿದೆ.
ಡೆಲ್ಲಿ ಕ್ಯಾಪಿಟಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಬ್ಲ್ಯೂಪಿಎಲ್ 2024 ಫೈನಲ್ ಪಂದ್ಯ ಎಲ್ಲಿ ಆಡಲಾಗುತ್ತದೆ?
ಡೆಲ್ಲಿ ಕ್ಯಾಪಿಟಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಬ್ಲ್ಯೂಪಿಎಲ್ 2024 ಫೈನಲ್ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
ಮುಂಬೈ ಮಣಿಸಿ ಮೊದಲ ಬಾರಿಗೆ ಫೈನಲ್ಗೇರಿದ ಆರ್ಸಿಬಿ..!
ಡೆಲ್ಲಿ ಕ್ಯಾಪಿಟಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಬ್ಲ್ಯೂಪಿಎಲ್ 2024 ಫೈನಲ್ ಪಂದ್ಯ ಎಲ್ಲಿ ವೀಕ್ಷಿಸಬಹುದು?
ಡೆಲ್ಲಿ ಕ್ಯಾಪಿಟಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಬ್ಲ್ಯೂಪಿಎಲ್ 2024 ಫೈನಲ್ ಪಂದ್ಯದ ಲೈವ್ ಸ್ಟ್ರೀಮ್ JioCinema ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿಯೂ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಬಹುದು.
ಡೆಲ್ಲಿ ಕ್ಯಾಪಿಟಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಬ್ಲ್ಯೂಪಿಎಲ್ 2024 ಫೈನಲ್ ಪಂದ್ಯ ಎಷ್ಟು ಗಂಟೆಗೆ ಆರಂಭ?
ಡೆಲ್ಲಿ ಕ್ಯಾಪಿಟಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಬ್ಲ್ಯೂಪಿಎಲ್ 2024 ಫೈನಲ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7:30ಕ್ಕೆ ಆರಂಭವಾಗಲಿದೆ.
ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಕೈಜಾರುವ ಭೀತಿಯಲ್ಲಿ ಪಾಕ್ ಮಂಡಳಿ
ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಎಲಿಸ್ ಕ್ಯಾಪ್ಸೆ, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ, ಶಿಖಾ ಪಾಂಡೆ, ಮಿನ್ನು ಮಣಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಮೊಲಿನೆಕ್ಸ್, ಎಲಿಸ್ ಪೆರ್ರಿ, ಸೋಫಿ ಡಿವೈನ್, ರಿಚಾ ಘೋಷ್ (ವಿಕೆಟ್ ಕೀಪರ್), ಜಾರ್ಜಿಯಾ ವೇರ್ಹ್ಯಾಮ್, ದಿಶಾ ಕಾಸ್ಟ್, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ಶ್ರದ್ಧಾ ಪೋಖರ್ಕರ್, ರೇಣುಕಾ ಸಿಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ