New Year 2025: ಪಬ್​ನಲ್ಲಿ ಕುಡಿದು ಹೊರಬಂದ ಆರ್​ಸಿಬಿ ಅಭಿಮಾನಿಯೊಬ್ಬ ಈ ಸಲ ಕಪ್ ನಮ್ದೇ ಅಂದ!

ಅರುಣ್​ ಕುಮಾರ್​ ಬೆಳ್ಳಿ

Updated on: Jan 01, 2025 | 12:46 PM

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪ್ರತಿಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಮೈದಾನಕ್ಕಳಿಯುವ ಅರ್ ಸಿಬಿ ತಂಡ ಕಳೆದ 17ಸೀಸನ್​ಗಳಲ್ಲಿ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಈ ಸಲ ಕಪ್ ನಮ್ದೇ ಅಂತ ಆರ್ ಸಿ ಬಿ ಅಭಿಮಾನಿಗಳು ಪ್ರತಿಸಲ ಹೇಳುತ್ತಾರೆ, ಆದರೆ ಪ್ರಶಸ್ತಿ ಮಾತ್ರ ಮರೀಚಿಕೆಯಾಗಿ ಉಳಿದುಬಿಟ್ಟಿದೆ. ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ಈ ಸಲ ಕಪ್ ನಮ್ದೇ ಅಂತ ಹೇಳಿದ .

ಬೆಂಗಳೂರು: ಕಳೆದ ರಾತ್ರಿ ಕೋರಮಂಗದಲ್ಲಿರುವ ಪಬ್ ಒಂದರಲ್ಲಿ ಕುಡಿದು ಹೊಸವರ್ಷ ಶುರುವಾದ ಬಳಿಕ ಅಲ್ಲಿಂದ ಹೊರಬಿದ್ದ ಯುವಕ-ಯುವತಿಯರ ಹಾವಭಾವಗಳು ನೋಡುಗರಲ್ಲಿ ನಗೆ ಹುಟ್ಟಿಸಿದ್ದು ಸುಳ್ಳಲ್ಲ. ನ್ಯೂ ಈಯರ್ ಪಾರ್ಟಿ ಅಂದಮೇಲೆ ಕುಡಿತದ ಮೇಲೆ ಯಾವ ನಿರ್ಬಂಧ? ಆಫ್ ಕೋರ್ಸ್ ಇವರಲ್ಲಿ ಹೆಚ್ಚಿನವರು ಹೊರರಾಜ್ಯದವರು, ಆದರೆ ಎಲ್ಲರೂ ಅಲ್ಲ. ಒಬ್ಬ ಯುವಕ ಮತ್ತು ಇನ್ನೊಂದು ಯುವಕರ ಗುಂಪು ಐಪಿಎಲ್ ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಘೋಷಣೆ ಕೂಗುತ್ತಾ ತಾವು ಕನ್ನಡಿಗರೆನ್ನುವುದನ್ನು ಪ್ರೂವ್ ಮಾಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   New Year 2025: ವರ್ಷದ ಮೊದಲ ದಿನ ಈ ರೀತಿ ಪ್ರಾರಂಭಿಸಿ; ನೀಮ್ ಕರೋಲಿ ಬಾಬಾ ಅವರ ಸಲಹೆ ಇಲ್ಲಿದೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.