ಮುಂಬೈ ಇಂಡಿಯನ್ಸ್​​ಗೆ ಸರಿಸಾಟಿಯಾಗಿ ನಿಂತ ಸ್ಮೃತಿ ಮಂಧಾನ

Updated on: Feb 06, 2026 | 11:56 AM

ಮುಂಬೈ ಇಂಡಿಯನ್ಸ್ ತಂಡದ ಜೊತೆ ಸರಿಸಾಟಿಯಾಗಿ ನಿಂತಿದೆ ಆರ್​​ಸಿಬಿ ತಂಡ. 2026ನೇ ಸಾಲಿನಲ್ಲಿ ಕಪ್ ಎತ್ತುವ ಮೂಲಕ ಸ್ಮೃತಿ ತಂಡ ಹೊಸ ದಾಖಲೆಯನ್ನೇ ಬರೆದಿದೆ. ಮುಂಬೈ ಇಂಡಿಯನ್ಸ್ ಈ ಮೊದಲು ಎರಡು ಬಾರಿ ಕಪ್ ಹೊಂದಿದ ತಂಡವಾಗಿತ್ತು. ಅದಕ್ಕೆ ಸರಿಯಾಗಿ ನಿಂತಿದೆ.ಇದು ನಿಜಕ್ಕೂ ಖುಷಿಯ ಕ್ಷಣ.

2023ರಲ್ಲಿ ಆರಂಭವಾದ ವುಮನ್ ಪ್ರೀಮಿಯರ್ ಲೀಗ್ ಈಗಾಗಲೇ ನಾಲ್ಕು ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಮೊದಲ ಆವೃತ್ತಿಯಲ್ಲಿ ಇಂಡಿಯನ್ಸ್ ಚಾಂಪಿಯನ್ಸ್ ಆಯಿತು. ಎರಡನೇ ಆವೃತ್ತಿಯಲ್ಲಿ ಆರ್​​​ಸಿಬಿ ಗೆದ್ದಿತ್ತು. ಮೂರನೇ ಆವೃತ್ತಿಯಲ್ಲಿ ಮುಂಬೈ ಗೆದ್ದಿತ್ತು. ಈಗ ನಾಲ್ಕನೇ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ತಂಡ ಗೆಲುವು ಕಂಡಿದೆ. ಎರಡು ಬಾರಿ ಕಪ್ ಗೆದ್ದು ಮುಂಬೈಗೆ ಸರಿಸಾಟಿಯಾಗಿ ಸ್ಮೃತಿ ನಿಂತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 06, 2026 11:32 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More