ಬಾಂಬ್​ಗಳನ್ನು ಕಟ್ಟಿಕೊಂಡು ಯುದ್ಧಕ್ಕೆ ಹೋಗುತ್ತೇನೆ ಅಂತ ಮತ್ತೊಮ್ಮೆ ಹೇಳಿದ ಜಮೀರ್ ಅಹ್ಮದ್

ಅರುಣ್​ ಕುಮಾರ್​ ಬೆಳ್ಳಿ

Updated on: May 10, 2025 | 5:11 PM

ನಮ್ಮ ರಾಜಕಾರಣಿಗಳು ತಮ್ಮಲ್ಲಿ ದೇಶಭಕ್ತಿಗೆ ಕೊರೆತೆಯಿಲ್ಲ ಅನ್ನೋದನ್ನು ಪ್ರೂವ್ ಮಾಡಲು ಅತಿಶಯೋಕ್ತಿಗಳನ್ನು ಬಳಸುವುದು ನಿಲ್ಲಿಸಬೇಕು. ದೇಶದ ಸೈನಿಕರಲ್ಲಿ ಬಲ ತುಂಬಲು ಶುಕ್ರವಾರದ ಸಾಮೂಹಿಕ ನಮಾಜ್​ನಲ್ಲಿ ದೇವರನ್ನು ಕೇಳಿಕೊಳ್ಳಲಾಗಿದೆ ಎಂದು ಜಮೀರ್ ಹೇಳುತ್ತಾರೆ, ಭಾರತೀಯರೆಲ್ಲ ಪ್ರಾರ್ಥನೆಗಳನ್ನು ಮಾಡಿದರೆ ಸಾಕು, ನಮ್ಮ ಯೋಧರ ಚೇತನ ಇಮ್ಮಡಿಗೊಳ್ಳುತ್ತದೆ.

ಕಲಬುರಗಿ, ಮೇ 10: ನಗರಲ್ಲಿಂದು ಮಾಧ್ಯಮಗಳ ಜೊತೆ ಮಾತಾಡಿದ ಬಿಜೆಡ್ ಜಮೀರ್ ಅಹ್ಮದ್ ಖಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅನುಮತಿ ನೀಡಿದರೆ ತಾನು ಈಗಲೂ ಸೂಸೈಡ್ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೋಗಲು ಸಿದ್ಧ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ತಾನು ತಯಾರು ಎಂದು ಮತ್ತೊಮ್ಮೆ ಹೇಳಿದರು. ನಾಗರಿಕರನ್ನು ಯುದ್ಧಕ್ಕೆ ಕಳಿಸಲ್ಲ ಎಂಬ ಅಂಶ ಪ್ರಾಯಶಃ ಸಚಿವರಿಗೆ ಗೊತ್ತಿದ್ದಂತಿಲ್ಲ. ಪಾಕಿಸ್ತಾನಕ್ಕೆ ಯಾವುದೇ ಸಾಮರ್ಥ್ಯ ಇಲ್ಲ, ಅದೊಂದು ಖಾಲಿ ಡಬ್ಬ ಮತ್ತು ಠುಸ್ ಪಟಾಕಿ ಎಂಬ ಉಪಮೆಗಳನ್ನು ಬಳಸುವ ಜಮೀರ್ ಅಹ್ಮದ್ ಭಾರತ ಮನಸ್ಸು ಮಾಡಿದರೆ ಕೇವಲ ಎರಡು ದಿನಗಳಲ್ಲಿ ಪಾಕಿಸ್ತಾನ ನಿರ್ನಾಮವಾಗುತ್ತದೆ ಎನ್ನುತ್ತಾರೆ.

ಇದನ್ನೂ ಓದಿ:  Operation Sindoor: “ಮೋದಿ ಹೆಸರು ಹೇಳಲೂ ಹೆದರುವ ಹೇಡಿ”: ತನ್ನದೇ ದೇಶದ ಪ್ರಧಾನಿ ಬಗ್ಗೆ ಪಾಕ್​ ಸಂಸದ ವ್ಯಂಗ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.