ನನ್ನ ಪತಿಯ ಸಾವಿಗೆ ನ್ಯಾಯ ಸಿಗಲೇಬೇಕು ಮತ್ತು ಅಸಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಕವಿತಾ, ಚಂದ್ರಶೇಖರ್ ಪತ್ನಿ

|

Updated on: May 28, 2024 | 6:41 PM

ತಾನು ಮತ್ತು ಇಬ್ಬರು ಮಕ್ಕಳು ಅನಾಥರಾಗಿದ್ದೇವೆ, ತಿಂಗಳಿಗೆ ₹ 12,000 ವೇತನ ಪಡೆಯುವ ತಾನು ಇನ್ನು ಮುಂದೆ ಮಕ್ಕಳನ್ನು ಹೇಗೆ ಓದಿಸಲಿ, ಮಾವ ಕಟ್ಟಿಸಿದ ಮನೆ ಬಿಟ್ಟರೆ ತಮಗೆ ಬೇರೆ ಗತಿಯಿಲ್ಲ ಎಂದು ಅವರು ಹೇಳುತ್ತಾರೆ. ಅಸಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ತನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಕವಿತಾ ರೋದಿಸುತ್ತಾ ಹೇಳುತ್ತಾರೆ.

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Board) ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ (Chandrashekhar) ಅವರು ಆತ್ಮಹತ್ಯೆಯ ಮೂಲಕ ಸಾವನ್ನಪ್ಪಿರುವುದು ರಾಜ್ಯದಲ್ಲಿ ದೊಡ್ಡಮಟ್ಟದ ಚರ್ಚೆಯಾಗುತ್ತಿದೆ. ತಮ್ಮ ಡೆತ್ ನೋಟ್ ನಲ್ಲಿ ಅವರು ಸಚಿವರೊಬ್ಬರ ಹೆಸರು ಉಲ್ಲೇಖಿಸಿದ್ದಾರೆ. ಮೃತ ಚಂದ್ರಶೇಖರ್ ಅವರ ಪತ್ನಿ ಕವಿತಾ (Kavita) ಅವರಿಗೆ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂದು ಮನೆಯಲ್ಲಿ ಟಿವಿ9  ಪ್ರತಿನಿಧಿಯೊಂದಿಗೆ ಮಾತಾಡಿದ ಅವರು ತಮ್ಮ ಪತಿ ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಯಾಗಿದ್ದರು. ಮೇಲಿವನವರು ತಮ್ಮ ಬಚಾವ್ ಮಾಡಿಕೊಳ್ಳಲು ಪತಿಯನ್ನು ಬಲಿಪಶು ಮಾಡಿದ್ದಾರೆ. ತಮ್ಮ ಮೇಲಿನ ಒತ್ತಡ ತಾಳಲಾಗದೆ ಅವರು ಸಾವಿಗೆ ಶರಣಾಗಿದ್ದಾರೆಂದರೆ ಅವರು ಅನುಭವಿಸಿರುವ ಮಾನಸಿಕ ನೋವು ಯಾತನೆ ಎಷ್ಟು ಭಯಂಕರವಾಗಿತ್ತು ಅಂತ ಸಂಬಂಧಪಟ್ಟವರು ಯೋಚಿಸಬೇಕು ಎಂದು ಕವಿತಾ ಹೇಳುತ್ತಾರೆ. ತಾನು ಮತ್ತು ಇಬ್ಬರು ಮಕ್ಕಳು ಅನಾಥರಾಗಿದ್ದೇವೆ, ತಿಂಗಳಿಗೆ ₹ 12,000 ವೇತನ ಪಡೆಯುವ ತಾನು ಇನ್ನು ಮುಂದೆ ಮಕ್ಕಳನ್ನು ಹೇಗೆ ಓದಿಸಲಿ, ಮಾವ ಕಟ್ಟಿಸಿದ ಮನೆ ಬಿಟ್ಟರೆ ತಮಗೆ ಬೇರೆ ಗತಿಯಿಲ್ಲ ಎಂದು ಅವರು ಹೇಳುತ್ತಾರೆ. ಅಸಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ತನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಕವಿತಾ ರೋದಿಸುತ್ತಾ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಆಗಿದೆ: ಒಪ್ಪಿಕೊಂಡ ಸಚಿವ ನಾಗೇಂದ್ರ  

Follow us on