AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆತ್​ನೋಟ್​ ಬರೆದಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಆತ್ಮಹತ್ಯೆ; ಮೂವರು ಅಧಿಕಾರಿಗಳ ಮೇಲೆ ಎಫ್​ಐಆರ್​

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಿಗೆಟ್ಟಿದ್ದು, ಈ ನಡುವೆ ಬೆಂಗಳೂರಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು ಡೆತ್​ನೋಟ್ ಬರೆದಿಟ್ಟು ಶಿವಮೊಗ್ಗದಲ್ಲಿ ನೇಣಿಗೆ ಶರಣಾಗಿದ್ದಾರೆ. ‘ನಿಗಮದಲ್ಲಿ ಕೋಟ್ಯಾಂತರ ಅವ್ಯವಹಾರ ನಡೆದಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನಲೆ ಮೂವರು ಅಧಿಕಾರಿಗಳ ವಿರುದ್ದ ಎಫ್​ಐಆರ್​ ದಾಖಲಾಗಿದೆ.

ಡೆತ್​ನೋಟ್​ ಬರೆದಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಆತ್ಮಹತ್ಯೆ; ಮೂವರು ಅಧಿಕಾರಿಗಳ ಮೇಲೆ ಎಫ್​ಐಆರ್​
ಡೆತ್​ನೋಟ್​ ಬರೆದಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಆತ್ಮಹತ್ಯೆ
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 28, 2024 | 4:44 PM

Share

ಶಿವಮೊಗ್ಗ, ಮೇ.28: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ಅಧೀಕ್ಷಕ ಚಂದ್ರಶೇಖರ್‌(52) ಎಂಬುವವರು ಶಿವಮೊಗ್ಗದ (Shivamogga) ವಿನೋಬ ನಗರದ ಕೆಂಚಪ್ಪ ಲೇಔಟ್​ನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಅಧಿಕಾರಿಗಳಾದ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್ ಅಧಿಕಾರಿ ಸುಚಿಸ್ಥನಾ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಒತ್ತಡ ಹಾಕಿ ನನ್ನ ಪತಿ ಜೀವ ತೆಗೆದಿದ್ದಾರೆ-ಚಂದ್ರಶೇಖರ್ ಪತ್ನಿ

ಇನ್ನು ಘಟನೆ ಕುರಿತು ಮಾತನಾಡಿದ ಮೃತ ಚಂದ್ರಶೇಖರ್​ ಪತ್ನಿ ಕವಿತಾ, ‘ ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ, ಲೂಟಿಯನ್ನೂ ಮಾಡಿಲ್ಲ. ಒತ್ತಡ ಹಾಕಿ ನನ್ನ ಪತಿ ಜೀವ ತೆಗೆದಿದ್ದಾರೆ. ಡೆತ್​ನೋಟ್​ನಲ್ಲಿ ಅವರು ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನನ್ನ ಪತಿ ನಿಯತ್ತಿನ ನಾಯಿ ರೀತಿ ಸರ್ಕಾರದ ಕೆಲಸ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ತಾರೆ ಅಂದರೆ ಎಷ್ಟು ಒತ್ತಡ ಇತ್ತು ಊಹೆ ಮಾಡಿ.

ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಅವ್ಯವಹಾರ: ಡೆತ್​ನೋಟ್​ ಬರೆದಿಟ್ಟು ಅಧೀಕ್ಷಕ ಆತ್ಮಹತ್ಯೆ

ನನಗೆ ನ್ಯಾಯ ಬೇಕು

ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಗಮನಕ್ಕೆ ಬರದೆ ಏನು ನಡೆದಿಲ್ಲ. ನಿರ್ದೇಶಕರ ಸಹಿ ನಕಲು ಆಗಲು ಸಾಧ್ಯವಿಲ್ಲ. ನನಗೆ ಸರ್ಕಾರದ ಮೇಲೆ ವಿಶ್ವಾಸವಿದೆ, ಪತಿ ಸಾವಿಗೆ ನ್ಯಾಯ ಸಿಗಬೇಕು. ‘ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಜನರು ನೂರೆಂಟು ರೀತಿ ಮಾತನಾಡುತ್ತಾರೆ. ಅದು ನನಗೆ ಬೇಡ, ನನ್ನ ಗಂಡನ ಮೇಲೆ ಯಾವುದೇ ತಪ್ಪಿಲ್ಲ ಎನ್ನುವುದು ನನಗೆ ಬೇಕು. ಅವರು ಅಧಿಕಾರಿ ಆಗಿ ಎಲ್ಲ ಓದಿದ್ದಾರೆ. ಅಂತಹ ವ್ಯಕ್ತಿ ಮೇಲೆ ಒತ್ತಡ ಹಾಕಿದ್ದಾರೆ.  ನಿರ್ದೇಶಕರ ಸಹಿ ಫೋರ್ಜರಿ ಆಗಲು ಸಾಧ್ಯವಿಲ್ಲ. ನನ್ನ ಪತಿ ಸುಳ್ಳು ಮತ್ತು ಮೋಸ ಮಾಡುವ ಮನುಷ್ಯ ಅಲ್ಲ. ನಾನು ಪತಿ ಜೊತೆ 22 ವರ್ಷ ಸಂಸಾರ ಮಾಡಿರುವೆ. ನಾನು ಎಲ್ಲಿ ಬಂದು ಆದ್ರೂ ಹೇಳುತ್ತೇನೆ. ನನಗೆ ಸರ್ಕಾರದ ಮೇಲೆ ವಿಶ್ವಾಸ ಇದೆ. ಪತಿ ಸಾವಿಗೆ ನ್ಯಾಯ ಸಿಗಬೇಕು ಎಂದು ಕೇಳುತ್ತೇನೆ ಎಂದರು.

ಮೂರು ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು

ಇನ್ನು ಪತಿ ಡೆತ್​ ನೋಟ್​ನಲ್ಲಿ ಮೂರು ಹೆಸರು ಉಲ್ಲೇಖ ಮಾಡಿದ್ದಾರೆ. ಆ ಮೂರು ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ‘ನಾನು ಎರಡು ಮಕ್ಕಳು ಇಟ್ಟುಕೊಂಡು ಕಷ್ಟ ಪಡುತ್ತಿದ್ದೇವೆ. ನನ್ನ ಪತಿ ಸಂಬಳ ಬಿಟ್ಟರೆ ಬೇರೆ ಏನು ಇರಲಿಲ್ಲ. ‘ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ನನ್ನ ಈ ಪತಿ ಕುರಿತು ಯಾವುದೇ ಸಂಗತಿ ನನ್ನ ಬಳಿ ಹಂಚಿಕೊಂಡಿಲ್ಲ. ತನಿಖೆ ಆಗಿ ನನ್ನ ಗಂಡನ ಸಾವಿಗೆ ಸಿಗಬೇಕು ಎಂದು ಮೃತರ ಪತ್ನಿ ಕವಿತಾ ಅವರು ಟಿವಿ9 ಮೂಲಕ ಕೈಮುಗಿದು ಗಂಡನ ಸಾವಿಗೆ ನ್ಯಾಯ ಕೇಳಿದ್ದಾರೆ.

ಪ್ರಕರಣ ಕುರಿತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಿಷ್ಟು

ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಕುರಿತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ಡೆತ್​ನೋಟ್​ನಲ್ಲಿ ಆಶ್ಚರ್ಯಕರವಾದ ಸಂಗತಿ ಬರೆದಿಟ್ಟಿದ್ದಾರೆ. ದಲಿತರಿಗೆ ಮೀಸಲಿಟ್ಟಿದ್ದ ಹಣ ಅನಧಿಕೃತವಾಗಿ ಬಳಕೆಯಾಗಿದೆ. 87 ಕೋಟಿ ರೂಪಾಯಿ ಅನಧಿಕೃತವಾಗಿ ಟ್ರಾನ್ಸ್ ಫರ್ ಆಗಿದೆ. ಇದರಲ್ಲಿ ಯಾರ್ಯಾರ ಕೈವಾಡ ಇದೆ ಎಂದು ಕೂಡ ಬರೆದಿದ್ದಾರೆ. ರಾಜ್ಯದಲ್ಲಿ ದಲಿತರಿಗೆ, ಬಡವರಿಗೆ ಮೀಸಲಿಟ್ಟ ಹಣ ಹೊಡೆದು ತಿನ್ನುವ ಕೆಲಸ ನಡೆಯುತ್ತಿದೆ. ಭ್ರಷ್ಟಾಚಾರ ನಡೆದಿದೆ. ಈ ಪ್ರಕರಣ ತನಿಖೆ ನಡೆಸಬೇಕು. ತಪ್ಪಿತಸ್ಥರ‌ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಸನ್ಮಾನಿಸಿದ ಪ್ರಧಾನಿ ಮೋದಿ
ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಸನ್ಮಾನಿಸಿದ ಪ್ರಧಾನಿ ಮೋದಿ
ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಟೋದಲ್ಲಿ 120 ಮೀಟರ್ ಎಳೆದೊಯ್ದ ಚಾಲಕ
ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಟೋದಲ್ಲಿ 120 ಮೀಟರ್ ಎಳೆದೊಯ್ದ ಚಾಲಕ
Carlos Alcaraz: ಹೊಸ ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
Carlos Alcaraz: ಹೊಸ ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಇನ್ಮುಂದೆ ಕಾಲುಂಗರ ಹಾಕಿಕೊಳ್ಳಲಿದ್ದಾರೆ ರಜತ್; ಕಾರಣ ಏನು?
ಇನ್ಮುಂದೆ ಕಾಲುಂಗರ ಹಾಕಿಕೊಳ್ಳಲಿದ್ದಾರೆ ರಜತ್; ಕಾರಣ ಏನು?
ಶಾಲಾ ನಾಟಕ, ಬುರ್ಖಾ ಧರಿಸಿದವರನ್ನು ಉಗ್ರರೆಂದು ಬಿಂಬಿಸಿದ ಮಕ್ಕಳು
ಶಾಲಾ ನಾಟಕ, ಬುರ್ಖಾ ಧರಿಸಿದವರನ್ನು ಉಗ್ರರೆಂದು ಬಿಂಬಿಸಿದ ಮಕ್ಕಳು
ರಾಯಚೂರಿನಲ್ಲಿ ಮಳೆ ಅಬ್ಬರ: ಜಿಲ್ಲಾಧಿಕಾರಿ ಕಚೇರಿ ರಸ್ತೆ ಸಂಪೂರ್ಣ ಜಲಾವೃತ
ರಾಯಚೂರಿನಲ್ಲಿ ಮಳೆ ಅಬ್ಬರ: ಜಿಲ್ಲಾಧಿಕಾರಿ ಕಚೇರಿ ರಸ್ತೆ ಸಂಪೂರ್ಣ ಜಲಾವೃತ
ಶೂ ಧರಿಸಿ ಹವನದಲ್ಲಿ ಪಾಲ್ಗೊಂಡು ಜನರ ಕೆಂಗಣ್ಣಿಗೆ ಗುರಿಯಾದ ಲಾಲು ಪ್ರಸಾದ್
ಶೂ ಧರಿಸಿ ಹವನದಲ್ಲಿ ಪಾಲ್ಗೊಂಡು ಜನರ ಕೆಂಗಣ್ಣಿಗೆ ಗುರಿಯಾದ ಲಾಲು ಪ್ರಸಾದ್
ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ​ ನೀರು ಬಿಡುಗಡೆ
ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ​ ನೀರು ಬಿಡುಗಡೆ
ಝೆಲೆನ್ಸ್ಕಿ ಬಟ್ಟೆ ನೋಡಿ ಹೀಯಾಳಿಸಿದ್ದ ಪತ್ರಕರ್ತನಿಂದ ಇಂದು ಹೊಗಳಿಕೆಯ ಮಾತು
ಝೆಲೆನ್ಸ್ಕಿ ಬಟ್ಟೆ ನೋಡಿ ಹೀಯಾಳಿಸಿದ್ದ ಪತ್ರಕರ್ತನಿಂದ ಇಂದು ಹೊಗಳಿಕೆಯ ಮಾತು
Daily devotional: ನಿಂತು ಊಟ ಮಾಡಬಾರದು ಯಾಕೆ ಅಂತ ತಿಳಿದುಕೊಳ್ಳಿ!
Daily devotional: ನಿಂತು ಊಟ ಮಾಡಬಾರದು ಯಾಕೆ ಅಂತ ತಿಳಿದುಕೊಳ್ಳಿ!