ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಅವರನ್ನು ಜೈಲಿನಿಂದ ಹೊರತರಬೇಕು ಎಂಬ ಕಾನೂನಿನ ಹೋರಾಟಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿದೆ. ಅದೇ ಹಣಕಾಸಿನ ಕಾರಣದಿಂದಲೇ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಅವರ ನಡುವೆ ಕಿರಿಕ್ ಆಗಿದೆ ಎಂಬುದು ತಿಳಿದುಬಂದಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..
ನಟ ಧನ್ವೀರ್ ಹಾಗೂ ವಿಜಯಲಕ್ಷ್ಮಿ ಅವರ ನಡುವೆ ಮನಸ್ತಾಪ ಉಂಟಾಗಿದೆ. ಹಣಕಾಸಿನ ವಿಚಾರಕ್ಕೆ ಶುರುವಾದ ಜಗಳ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದರ್ಶನ್ ಅವರಿಗೆ ಧನ್ವೀರ್ ಬಹಳ ಆಪ್ತರಾಗಿದ್ದಾರೆ. ದರ್ಶನ್ ಅವರನ್ನು ಜೈಲಿನಿಂದ ಹೊರತರಬೇಕು ಎಂಬ ಕಾನೂನಿನ ಹೋರಾಟಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿದೆ. ಅದೇ ಹಣಕಾಸಿನ ಕಾರಣದಿಂದಲೇ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಅವರ ನಡುವೆ ಕಿರಿಕ್ ಆಗಿದೆ ಎಂಬುದು ತಿಳಿದುಬಂದಿದೆ. ಪಿಎ ನಾಗರಾಜ್ ಮೂಲಕ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಅವರು ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದೇ ರೀತಿ, ಧನ್ವೀರ್ ಅವರ ತಂದೆ ತಿಮ್ಮೆಗೌಡ ಅವರು ರಾರಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
