ಮಹಾರಾಷ್ಟ್ರ ನೋಂದಣಿಯ 2 ಐಷಾರಾಮಿ ಕಾರುಗಳಿಗೆ ₹ 38 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿಸಿದ ಕೆಜಿಎಫ್ ಬಾಬು

ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2025 | 2:33 PM

ಮಾಧ್ಯಮಗಳೊಂದಿಗೆ ಮಾತಾಡಿದ ಮಹಿಳಾ ಅಧಿಕಾರಿ, ಬಾಬು ಅವರ ಮಹಾರಾಷ್ಟ್ರ ನೋಂದಣಿಯ ಎರಡು ಐಷಾರಾಮಿ ಕಾರುಗಳು ಬೆಂಗಳೂರಲ್ಲಿ ಓಡಾಡುತ್ತಿರೋದು ಗಮನಕ್ಕೆ ಬಂತು, ಕರ್ನಾಟಕದಲ್ಲಿ ಟ್ಯಾಕ್ಸ್ ಕಟ್ಟುವ ವಿಚಾರ ತಿಳಿಸಿದಾಗ ಅವರು ₹19.73 ಲಕ್ಷ ಮತ್ತು ₹18.53 ಲಕ್ಷಗಳ ಎರಡು ಚೆಕ್​ಗಳನ್ನು ಇಲಾಖೆಗೆ ನೀಡಿ ಸಹಕರಿಸಿದ್ದಾರೆ ಎಂದು ಹೇಳಿದರು.

ಬೆಂಗಳೂರು, ಜುಲೈ 23: ರೀಯಲ್ಟರ್ ಕೆಜಿಎಫ್ ಬಾಬು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನಡುವೆ ಮಹಾರಾಷ್ಟ್ರ ನೋಂದಣಿಯ ಎರಡು ಕಾರುಗಳ ತೆರಿಗೆಗೆ ಸಂಬಂಧಿಸಿದ ವಿವಾದ ಸುಖಾಂತ್ಯ ಕಂಡಿದೆ. ಹಿರಿಯ ಮಹಿಳಾ ಅಧಿಕಾರಿಯೊಬ್ಬರು (women officer) ಯಾಕೆ ತೆರಿಗೆ ಕಟ್ಟಬೇಕು ಅನ್ನೋದನ್ನು ಬಾಬು ಅವರಿಗೆ ವಿವರಿಸಿದ ಬಳಿಕ ಉದ್ಯಮಿ ತೆರಿಗೆ ಹಣಕ್ಕೆ ಚೆಕ್ ಗಳನ್ನು ನೀಡಿದರು. ಚೆಕ್ ಗಳನ್ನು ಅಧಿಕಾರಿಯ ಕೈಗೆ ನೀಡುತ್ತ ಅವರ ಬಗ್ಗೆ ಮಾತಾಡಿದ ಬಾಬು, ನಿಮ್ಮಂಥ ಅಧಿಕಾರಿಗಳು ಇಲಾಖೆಗೆ ಬೇಕು, ನೀವು ಇಲ್ಲಿಯವರೆಗೆ ಬಂದು ತೆರಿಗೆ ಯಾವ ಬಾಬತ್ತಿನಲ್ಲಿ ಕಟ್ಟಬೇಕು ಮತ್ತು ಕಟ್ಟಿದ ಹಣ ರೀಫಂಡ್ ಆಗುವ ಬಗ್ಗೆ ವಿವರಿಸಿದ್ದೀರಿ, ನಿಮ್ಮ ಬಗ್ಗೆ ನಮಗೆ ಬಹಳ ಗೌರವ ಮತ್ತು ಹೆಮ್ಮೆ ಹುಟ್ಟಿದೆ ಎಂದು ಹೇಳಿದರು.

ಇದನ್ನೂ ಓದಿ:   ಕೆಜಿಎಫ್ ಬಾಬುಗೆ ಮುಳುವಾಯ್ತು ಅಮಿತಾಭ್, ಆಮಿರ್​ ಬಳಿ ಖರೀದಿಸಿದ ಐಷಾರಾಮಿ ಕಾರುಗಳು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.