ತುಮಕೂರು: ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯತನಕ್ಕೆ ಪ್ರಾಣಾಪಾಯಕ್ಕೆ ಸಿಕ್ಕ ಪ್ರಯಾಣಿಕರು, ಸ್ಥಳೀಯರ ನೆರವಿನಿಂದ ಪಾರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 19, 2022 | 3:57 PM

ಖಾಸಗಿ ಬಸ್ಸಿನ ಚಾಲಕ ವಾಹನದಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರ (passengers) ಪ್ರಾಣವನ್ನು ಅಪಾಯಕ್ಕೊಡ್ಡಿ ಜೋರಾಗಿ ಹರಿಯುತ್ತಿದ್ದ ನೀರಲ್ಲಿ ಬಸ್ಸನ್ನು ಓಡಿಸುವ ಪ್ರಯತ್ನ ಮಾಡಿ ನೀರಿನ ಮಧ್ಯೆ ಅದು ಸಿಲುಕುವಂತೆ ಮಾಡಿದ್ದಾನೆ.

ತುಮಕೂರು: ಬಸ್ಸುಗಳ ಚಾಲಕರು ಅದರಲ್ಲೂ ವಿಶೇಷವಾಗಿ ಖಾಸಗಿ ಬಸ್ (private bus) ಚಾಲಕರು ತಮ್ಮನ್ನು ತಾವು ಸೂಪರ್ ಮ್ಯಾನ್ ಅಂದುಕೊಳ್ಳುತ್ತಾರೇನೋ ಎಂಬ ಸಂಶಯ ನಿಮ್ಮಲ್ಲೂ ಹುಟ್ಟಿರಲಿಕ್ಕೆ ಸಾಕು. ಈ ಖಾಸಗಿ ಬಸ್ಸಿನ ಚಾಲಕ ವಾಹನದಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರ (passengers) ಪ್ರಾಣವನ್ನು ಅಪಾಯಕ್ಕೊಡ್ಡಿ ಜೋರಾಗಿ ಹರಿಯುತ್ತಿದ್ದ ನೀರಲ್ಲಿ ಬಸ್ಸನ್ನು ಓಡಿಸುವ ಪ್ರಯತ್ನ ಮಾಡಿ ನೀರಿನ ಮಧ್ಯೆ ಅದು ಸಿಲುಕುವಂತೆ ಮಾಡಿದ್ದಾನೆ. ಸದರಿ ಘಟನೆ ತುಮಕೂರು ಜಿಲ್ಲೆ ಪಾವಗಡ (Pavagada) ತಾಲ್ಲೂಕಿನ ವೆಂಕಟಾಪುರದ ಬಳಿ ಜರುಗಿದೆ. ಸ್ಥಳೀಯರ ಸಹಾಯದಿಂದ ಬಸ್ಸಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ದಡ ಸೇರಿಸಲಾಗಿದೆ.