ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹುಂಡಿಯಲ್ಲಿ ಸಿಕ್ತು ಫಾರಿನ್ ಕರೆನ್ಸಿ ಸೇರಿ 3 ಕೋಟಿ ರೂ.ಗೂ ಹೆಚ್ಚು ಹಣ!

Updated on: Nov 27, 2025 | 10:45 AM

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷದಿಂದಾಗಿ ದಾಖಲೆಯ ಹುಂಡಿ ಸಂಗ್ರಹವಾಗಿದೆ. ನಂಜನಗೂಡಿನ ಪ್ರಸಿದ್ಧ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಶ್ರೀಕಂಠೇಶ್ವರ ದೇವಾಲಯದಲ್ಲಿ ಈ ಬಾರಿ ಕಾರ್ತೀಕ ಮಾಸದ ವಿಶೇಷ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಹುಂಡಿ ಕಾಣಿಕೆ ಸಂಗ್ರಹದಲ್ಲೂ ದಾಖಲೆಯ ಹೆಚ್ಚಳ ಕಂಡಿದೆ. ದೇವಾಲಯದಲ್ಲಿ ನಡೆದ ಇತ್ತೀಚಿನ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು 3,02,63,795 ರೂ ಹಣ ಸಂಗ್ರಹವಾಗಿದೆ. ಜೊತೆಗೆ 82 ಗ್ರಾಂ 800 ಮಿಲಿಗ್ರಾಂ ಚಿನ್ನ, 2 ಕೆಜಿ 680 ಗ್ರಾಂ ಬೆಳ್ಳಿ ಹಾಗೂ 34 ವಿಧದ ವಿದೇಶಿ ಕರೆನ್ಸಿಗಳೂ ಪತ್ತೆಯಾಗಿವೆ.

ಮೈಸೂರು, ನವೆಂಬರ್ 27: ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ ಕಾರ್ಯಕ್ರಮದಿಂದಾಗಿ ದಾಖಲೆಯ ಹುಂಡಿ ಸಂಗ್ರಹವಾಗಿದೆ. ನಂಜನಗೂಡಿನ ಪ್ರಸಿದ್ಧ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಶ್ರೀಕಂಠೇಶ್ವರ ದೇವಾಲಯದಲ್ಲಿ ಈ ಬಾರಿ ಕಾರ್ತಿಕ ಮಾಸದ ವಿಶೇಷ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಹುಂಡಿ ಕಾಣಿಕೆ ಸಂಗ್ರಹದಲ್ಲೂ ದಾಖಲೆಯ ಹೆಚ್ಚಳ ಕಂಡಿದೆ. ದೇವಾಲಯದಲ್ಲಿ ನಡೆದ ಇತ್ತೀಚಿನ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು 3,02,63,795 ರೂ ಹಣ ಸಂಗ್ರಹವಾಗಿದೆ. ಜೊತೆಗೆ 82 ಗ್ರಾಂ 800 ಮಿಲಿಗ್ರಾಂ ಚಿನ್ನ, 2 ಕೆಜಿ 680 ಗ್ರಾಂ ಬೆಳ್ಳಿ ಹಾಗೂ 34 ವಿಧದ ವಿದೇಶಿ ಕರೆನ್ಸಿಗಳೂ ಪತ್ತೆಯಾಗಿವೆ. ಎಣಿಕೆ ಕಾರ್ಯವನ್ನು ದೇವಾಲಯದ ದಾಸೋಹ ಭವನದಲ್ಲಿ ನಡೆಸಲಾಗಿದ್ದು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.