Assembly Session; ಅಕ್ರಮ ರೆವೆನ್ಯೂ ಬಡಾವಣೆಗಳನ್ನು ತಡೆಗಟ್ಟಲು ಹಿಂದಿನ ಸರ್ಕಾರ ಜಾರಿಗೊಳಿಸಿದ ನಿಯಮ ಸಮರ್ಪಕವಾಗಿದೆ: ಕೃಷ್ಣ ಭೈರೇಗೌಡ

ಇದರಲ್ಲಿ ರಾಜಕೀಯದ ಪ್ರಶ್ನೆ ಉದ್ಭವಿಸುವುದಿಲ್ಲ, ನಿಯಮಗಳು ಸರಿಯಾಗಿದ್ದರೆ ನಮ್ಮ ಸರ್ಕಾರ ಅವುಗಳನ್ನು ಮುಂದುವರಿಸುತ್ತದೆ ಎಂದು ಸಚಿವ ಹೇಳಿದರು.

Assembly Session; ಅಕ್ರಮ ರೆವೆನ್ಯೂ ಬಡಾವಣೆಗಳನ್ನು ತಡೆಗಟ್ಟಲು ಹಿಂದಿನ ಸರ್ಕಾರ ಜಾರಿಗೊಳಿಸಿದ ನಿಯಮ ಸಮರ್ಪಕವಾಗಿದೆ: ಕೃಷ್ಣ ಭೈರೇಗೌಡ
|

Updated on: Jul 10, 2023 | 3:58 PM

ಬೆಂಗಳೂರು: ಅನಧಿಕೃತ ರೆವೆನ್ಯೂ ಬಡಾವಣೆಗಳ (illegal Revenue Layouts) ಧಂದೆ ಅವ್ಯಾಹವಾಗಿ ನಡೆಯುತ್ತಿರುವುದನ್ನು ತಡೆಯಲು ಹಿಂದಿನ ಸರ್ಕಾರ 2021 ರಲ್ಲಿ ಜಾರಿಗೊಳಿಸಿದ ನಿಯಮ ಬಹಳ ಉಪಯೋಗಕಾರಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಸಮರ್ಥನೆ ಮಾಡಿಕೊಂಡರು. ಸದನದಲ್ಲಿಂದು (the House) ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಭೈರೇಗೌಡ ಅನಧಿಕೃತ ಕಂದಾಯ ಬಡಾವಣೆಗಳು ತಲೆಯೆತ್ತುವುದನ್ನು ತಡೆಯಲು ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ಜಾಗ ಮಾರಾಟ ಮಾಡಲು ಬಯಸಿದಲ್ಲಿ ಅವನು ಮಾರುವ ಜಾಗ ಕನಿಷ್ಟ 5 ಗುಂಟೆ ಇರಬೇಕು ಇಲ್ಲವೇ ಅದಕ್ಕಿಂತ ಜಾಸ್ತಿ ಇರಬೇಕು ಅಂತ ಜಾರಿಗೊಳಿಸಿರುವ ನಿಯಮ ಸಮರ್ಪಕವಾಗಿದೆ ಎಂದರು. ಇದರಲ್ಲಿ ರಾಜಕೀಯದ ಪ್ರಶ್ನೆ ಉದ್ಭವಿಸುವುದಿಲ್ಲ, ನಿಯಮಗಳು ಸರಿಯಾಗಿದ್ದರೆ ನಮ್ಮ ಸರ್ಕಾರ ಅವುಗಳನ್ನು ಮುಂದುವರಿಸುತ್ತದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us