ನಿಜಲಿಂಗ ಸ್ವಾಮೀಜಿ ಉರುಫ್ ಮೊಹಮ್ಮದ್ ನಿಸ್ಸಾರ್​ನ ತಾಯಿ ರೆಹನಾ ಬೇಗಂ ಏನು ಹೇಳುತ್ತಾರೆ ಗೊತ್ತಾ?

Updated on: Aug 06, 2025 | 8:34 PM

ಚಾನರಾಜನಗರ ಜಿಲ್ಲೆ ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾಮಠದ ಮಠಾಧೀಶನಾಗಿದ್ದಾಗ ನಿಸ್ಸಾರ್​ನ ಮೊಬೈಲ್ ಫೋನ್ ಬೇರೆಯವರ ಕೈಗೆ ಸಿಕ್ಕು ಅವನ ನಿಜಬಣ್ಣ ಬಯಲಾಗಿದೆ. ನಿಸಾರ್ ಮದ್ಯವ್ಯಸನಿ ಮತ್ತು ಸಲಿಂಗಕಾಮಿ ಅನ್ನೋದು ಮೊಬೈಲ್ ಪರಿಶೀಲಿಸಿದಾಗ ಗೊತ್ತಾಗಿದೆ. ಮಠದಿಂದ ಹೊರಹಾಕಿದ ಬಳಿಕ ಅವನು ತನ್ನೂರ ಕಡೆ ಬಂದ ಅಂತ ಹೇಳಲಾಗುತ್ತಿದ್ದರೂ ಅವನ ತಾಯಿ ಮಾತ್ರ ಬಂದೇ ಇಲ್ಲ ಎನ್ನುತ್ತಾರೆ.

ಕಲಬುರಗಿ, ಆಗಸ್ಟ್ 6: ಈ ಕತೆಯನ್ನು ಅರ್ಥಮಾಡಿಕೊಳ್ಳಲು ಕೊಂಚ ಸಮಯ ಹಿಡಿಯುತ್ತದೆ. ಚಾಮರಾಜನಗರ ಜಿಲ್ಲೆ ಚೌಡಹಳ್ಳಿಯ ಮಠವೊಂದರಲ್ಲಿ ಸಿಕ್ಕಿಬಿದ್ದಿರುವ ಕಳ್ಳಸ್ವಾಮಿ ಅಸಲಿಗೆ ಕಲಬುರಗಿ ಜಿಲ್ಲೆಯವ. ಎಲ್ಲಿ ಕಲಬುರಗಿ ಎಲ್ಲಿಯ ಚಾಮರಾಜನಗರ ಸ್ವಾಮೀ? ಉತ್ತರಧ್ರುವದಿಂ ದಕ್ಷಿಣ ಧ್ರುವಕ್ಕೂ…..ಇಲ್ಲಿ ಯಾವ ಗಾಳಿ ಬೀಸಿದೆಯೋ? ಈ ಐನಾತಿ ಸ್ವಾಮಿ ಒಂದು ಮುಸ್ಲಿಂ ಕುಟುಂಬದವ, ಹೆಸರು ಮೊಹ್ಮದ್ ನಿಸಾರ್, ಜಿಲ್ಲೆಯ ಕಾಳಗಿ ತಾಲೂಕಿನ ರಾಜಾಪುರ ಗ್ರಾಮದ ನಿವಾಸಿ. ಅವನ ತಾಯಿ ರೆಹನಾ ಬೇಗಂ ಮಾಧ್ಯಮಗಳೊಂದಿಗೆ ಮಾತಾಡಿದ್ದು, ನಿಸ್ಸಾರ್ ಚಿಕ್ಕವನಾಗಿದ್ದಾಗಲೇ ಮನೆಯಲ್ಲಿ ಲಿಂಗವನ್ನು ತಂದಿಟ್ಟು ಲಿಂಗಪೂಜೆ ಮಾಡುತ್ತಿದ್ದಂತೆ. ರೆಹನಾ ಬೇಗಂ ಆಕ್ಷೇಪಣೆ ವ್ಯಕ್ತಪಡಿಸಿದಾಗ ಅವನು ಮನೆಬಿಟ್ಟು ಹೋದನಂತೆ.

ಇದನ್ನೂ ಓದಿ:   ಲಿಂಗಾಯತ ವಿರಕ್ತ ಮಠಕ್ಕೆ ಮುಸಲ್ಮಾನ ಪೀಠಾಧಿಪತಿ: ಒಂದುವರೆ ತಿಂಗಳ ಬಳಿಕ ಸತ್ಯ  ಬಹಿರಂಗ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ