ಬಿಜೆಪಿಯ ಮಾಜಿ ಉಚ್ಚಾಟಿತ ಶಾಸಕ ಗುರು ಸಿದ್ದನಗೌಡ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಜೊತೆ ರೇಣುಕಾಚಾರ್ಯ ಮಾತುಕತೆ!

ಬಿಜೆಪಿಯ ಮಾಜಿ ಉಚ್ಚಾಟಿತ ಶಾಸಕ ಗುರು ಸಿದ್ದನಗೌಡ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಜೊತೆ ರೇಣುಕಾಚಾರ್ಯ ಮಾತುಕತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 11, 2023 | 7:50 PM

ಅವರ ನಡುವೆ ನಡೆದ ಚರ್ಚೆ ಏನು ಅಂತ ಗೊತ್ತಾಗಿಲ್ಲ. ಆದರೆ, ಈ ಮೂವರ ಭೇಟಿ ಮತ್ತು ರಹಸ್ಯಮಯ ಮಾತುಕತೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ. ಕಳೆದೊಂದು ತಿಂಗಳಿಂದ ರೇಣುಕಾಚಾರ್ಯ ಒಬ್ಬ ರೆಬೆಲ್ ಕಾರ್ಯಕರ್ತನಂತೆ ವರ್ತಿಸುತ್ತಿರುವುದು ಕನ್ನಡಿಗರಿಗೆಲ್ಲ ಗೊತ್ತು.

ದಾವಣಗೆರೆ: ಮಾಜಿ ಶಾಸಕ ಮತ್ತು ಬಿಜೆಪಿ ಮುಖಂಡ ಎಂಪಿ ರೇಣುಕಾಚಾರ್ಯ (MP Renukacharya) ಅವರ ತಲೇಲಿ ಏನೆಲ್ಲ ವಿಚಾರಗಳು ಹೊಕ್ಕಿವೆ ಅಂತ ಅರ್ಥವಾಗದು ಮಾರಾಯ್ರೇ. ಇವತ್ತು ಅವರು ದಾವಣಗೆರೆ ಜಿಲ್ಲೆಯ ಕೆಲ ಮಾಜಿ ಬಿಜೆಪಿಯ ಶಾಸಕರನ್ನು ಭೇಟಿಯಾಗಿ ರಹಸ್ಯವಾಗಿ ಸಭೆಯನ್ನೂ ನಡೆಸಿದರು. ಕಳೆದ ವಾರವಷ್ಟೇ ಬಿಜೆಪಿಯಿಂದ ಉಚ್ಚಾಟನೆಗೊಂಡ ಟಿ ಗುರು ಸಿದ್ದನಗೌಡ (T Guru Siddanagouda) ಅವರ ಮನೆಗೆ ಭೇಟಿ ನೀಡಿದರು ಮತ್ತು ಬಿಜೆಪಿಯ ಇನ್ನೊಬ್ಬ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಅವರನ್ನು ಸಹ ಭೇಟಿಯಾದರು. ಇವರಿಬ್ಬರಲ್ಲದೆ ಕೆಲ ಸ್ಥಳೀಯ ನಾಯಕರೊಂದಿಗೆ ವಿರೂಪಾಕ್ಷಪ್ಪ ಮನೆಯಲ್ಲಿ ಒಂದು ಸಭೆಯನ್ನು ರೇಣುಕಾಚಾರ್ಯ ನಡೆಸಿದರು. ಅವರ ನಡುವೆ ನಡೆದ ಚರ್ಚೆ ಏನು ಅಂತ ಗೊತ್ತಾಗಿಲ್ಲ. ಆದರೆ, ಈ ಮೂವರ ಭೇಟಿ ಮತ್ತು ರಹಸ್ಯಮಯ ಮಾತುಕತೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ. ಕಳೆದೊಂದು ತಿಂಗಳಿಂದ ರೇಣುಕಾಚಾರ್ಯ ಒಬ್ಬ ರೆಬೆಲ್ ಕಾರ್ಯಕರ್ತನಂತೆ ವರ್ತಿಸುತ್ತಿರುವುದು ಕನ್ನಡಿಗರಿಗೆಲ್ಲ ಗೊತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ