ಆರ್ ಅಶೋಕ್ ಮತ್ತು ಅಶ್ವತ್ಥ ನಾರಾಯಣ ನಡುವೆ ಜಗಳ ನಡೆದಿಲ್ಲ ಎಂದರು ಶಾಸಕ ರೇಣುಕಾಚಾರ್ಯ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಮ್ ಪಿ ರೇಣುಕಾಚಾರ್ಯ ಅವರನ್ನು ಇದೇ ವಿಷಯವಾಗಿ ಮಾಧ್ಯಮದವರು ಕೇಳಿದಾಗ, ಆ ಸಂದರ್ಭದಲ್ಲಿ ತಾನು ಅಲ್ಲೇ ಇದ್ದಿದ್ದು ಮತ್ತು ಅಶೋಕ್ ಹಾಗೂ ಅಶ್ವತ್ಥ ನಾರಾಯಣ ಅವರ ನಡುವೆ ಜಟಾಪಟಿ ನಡೆದಿಲ್ಲ ಎಂದು ಹೇಳಿದರು.
ಯಕಶ್ವಿತ್ ಒಬ್ಬ ತಹಸಿಲ್ದಾರನ ವರ್ಗಾವಣೆಗೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ಅವರ ಸಂಪುಟದ ಇಬ್ಬರು ಪ್ರಮುಖ ಮತ್ತು ಹಿರಿಯ ಸಚಿವರ ನಡುವೆ ಮಾತಿನ ಜಟಾಪಟಿ ನಡೆದಿದೆ ಅಂದರೆ ನಂಬುತ್ತೀರಾ? ನಮಗೆ ಲಭ್ಯವಾಗಿರುವ ಖಚಿತ ಮಾಹಿತಿಯ ಪ್ರಕಾರ ಕಂದಾಯ ಸಚಿವ ಆರ್ ಅಶೋಕ್ (R Ashoka) ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ ಅಶ್ವತ್ಥ ನಾರಾಯಣ (Dr CN Ashwath Narayan) ನಡುವೆ ಮಾಗಡಿ ತಹಸೀಲ್ದಾರರ (Magadi Tahsildar) ವರ್ಗಾವಣೆ ವಿಷಯದಲ್ಲಿ ಶುಕ್ರವಾರದಂದು ಬಿರುಸಿನ ಮಾತುಕತೆ ನಡೆದಿದೆ. ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಅಶ್ವತ್ಥ ನಾರಾಯಣ ಅವರಿಗೆ ಮಾಗಡಿಯಲ್ಲಿ ಪ್ರಸ್ತುತವಾಗಿ ತಹಸೀಲ್ದಾರ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಅಲ್ಲಿ ಮುಂದುವರಿಯುವುದು ಬೇಕಿಲ್ಲ, ಅವರನ್ನು ವರ್ಗಾಯಿಸಿ ಬೇರೆಯವರನ್ನು ತನ್ನಿ ಅಂತ ಕಂದಾಯ ಸಚಿವರಿಗೆ ಹೇಳಿದ್ದಾರೆ. ಅವರ ಬೇಡಿಕೆಗೆ ಅಶೋಕ ನಕಾರಾತ್ಮವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವನ ಬೇಡಿಕೆಗೆ ಬೆಲೆ ಇಲ್ಲ ಎಂದರೆ ಹೇಗೆ ಅಂತ ಡಾಕ್ಟ್ರು ಬೇಸರದಲ್ಲಿ ಹೇಳಿದ್ದಾರೆ. ಆಮೇಲೆ ಅವರಿಬ್ಬರ ನಡುವೆ ಬಿರುಸು ನುಡಿಗಳ ವಿನಿಮಯವೂ ಆಗಿದೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಮ್ ಪಿ ರೇಣುಕಾಚಾರ್ಯ ಅವರನ್ನು ಇದೇ ವಿಷಯವಾಗಿ ಮಾಧ್ಯಮದವರು ಕೇಳಿದಾಗ, ಆ ಸಂದರ್ಭದಲ್ಲಿ ತಾನು ಅಲ್ಲೇ ಇದ್ದಿದ್ದು ಮತ್ತು ಅಶೋಕ್ ಹಾಗೂ ಅಶ್ವತ್ಥ ನಾರಾಯಣ ಅವರ ನಡುವೆ ಜಟಾಪಟಿ ನಡೆದಿಲ್ಲ ಎಂದು ಹೇಳಿದರು.
ಅವರಿಬ್ಬರ ನಡುವೆ ಸೌಹಾರ್ದಯುತವಾಗಿ ಮಾತುಕತೆ ನಡೆಯಿತು, ಜಗಳದಂಥ ಪ್ರಸಂಗ ಉದ್ಭವಿಸಿಲ್ಲ ಎಂದು ಹೊನ್ನಾಳಿ ಶಾಸಕ ಹೇಳಿದರು. ಅವರು ಸಚಿವರನ್ನು ಬಿಟ್ಟುಕೊಡಲು ತಯಾರಿಲ್ಲ ಅನ್ನೋದು ಮಾತಿನಲ್ಲಿ ಸ್ಪಷ್ಟವಾಗುತ್ತದೆ. ಶಿಸ್ತಿನ ಪಕ್ಷ ಎಂದು ಹೆಸರಾಗಿರುವ ಬಿಜೆಪಿಯಲ್ಲಿ ಸಚಿವರು ಜಗಳವಾಡಿರುವುದನ್ನು ಅವರು ಹೇಗೆ ಮಾಧ್ಯಮದವರ ಮುಂದೆ ಬಾಯಿಬಿಟ್ಟಾರು?
ಆದರೆ ಅಸಲು ಸಂಗತಿಯೇನೆಂದರೆ, ಹಿರಿಯ ಸಚಿವರಿಬ್ಬರ ಜಗಳ ಮುಖ್ಯಮಂತ್ರಿಗಳ ಕಿವಿಗೂ ಬಿದ್ದಿದೆ. ಅವರು ಇಬ್ಬರನ್ನು ಕರೆಸಿ ಬುದ್ಧಿವಾದ ಹೇಳುವ ಸಾಧ್ಯತೆ ಇದೆ. ಅಶೋಕ ಮತ್ತು ಅಶ್ವತ್ಥ ನಾರಾಯಣ ನಡುವೆ ಯಾವುದಾದರೊಂದು ಭಿನ್ನಾಭಿಪ್ರಾಯ ಸದಾ ಇದ್ದೇ ಇರುತ್ತದೆ.
ಇದನ್ನೂ ಓದಿ: ಮಂಟಪಕ್ಕೆ ಬರುವ ವಧುವನ್ನು ತನ್ನ ನೃತ್ಯದ ಮೂಲಕ ಬರ ಮಾಡಿಕೊಂಡ ವರ; ಇಲ್ಲಿದೆ ನೆಟ್ಟಿಗರು ಮೆಚ್ಚಿಕೊಂಡ ವೈರಲ್ ವಿಡಿಯೋ