ರೇಣುಕಾಸ್ವಾಮಿ ಮಗನಿಗೆ ನಾಮಕರಣ; ಇಟ್ಟ ಹೆಸರೇನು?

|

Updated on: Feb 23, 2025 | 2:46 PM

ರೇಣುಕಾಸ್ವಾಮಿ ಅವರು ಇತ್ತೀಚೆಗೆ ಕೊಲೆ ಆಗಿದ್ದಾರೆ. ಅವರ ಸಾವಿನ ಹಿಂದಿನ ರಹಸ್ಯ ಇನ್ನೂ ಸ್ಪಷ್ಟವಾಗಿ ಹೊರ ಬಿದ್ದಿಲ್ಲ. ಪ್ರಕರಣದಲ್ಲಿ ಕೊಲೆ ಆದ ರೇಣುಕಾ ಸ್ವಾಮಿಗೆ ಇತ್ತೀಚೆಗೆ ಮಗು ಜನಿಸಿತ್ತು. ಈ ಮಗುವಿಗೆ ಇಟ್ಟ ಹೆಸರು ಏನು ಎಂಬುದನ್ನು ಕುಟುಂಬದವರು ರಿವೀಲ್ ಮಾಡಿದ್ದಾರೆ.

ರೇಣುಕಾಸ್ವಾಮಿ ಅವರು ಕೊಲೆ ಆಗಿ ಹಲವು ತಿಂಗಳು ಕಳೆದಿದೆ. ಇವರು ಸಾಯುವಾಗ ಅವರ ಪತ್ನಿ ಗರ್ಭಿಣಿ ಆಗಿದ್ದರು. ಇತ್ತೀಚೆಗೆ ಅವರಿಗೆ ಮಗು ಜನಿಸಿತ್ತು. ಇಂದು (ಫೆಬ್ರವರಿ 23) ಮಗುವಿಗೆ ನಾಮಕರಣ ಮಾಡಲಾಗಿದೆ. ನಾಮಕರಣದ ಬಳಿಕ ರೇಣುಕಾಸ್ವಾಮಿ ತಂದೆ ಹೇಳಿಕೆ ನೀಡಿದ್ದಾರೆ. ‘ಮೊಮ್ಮೊಗ ಬಂದಿರೋದು ಖುಷಿ ಇದೆ. ನಮ್ಮ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಲಾಗಿದೆ. ಗುರುಗಳ ಆಶೀರ್ವಾದಂತೆ ಶಶಿಧರ ಎಂದು ಹೆಸರು ಇಡುತ್ತಿದ್ದೇವೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.