ಕೆಲಸಕ್ಕೆ ಬೇಕು, ಆದ್ರೆ ಕನ್ನಡಿಗರು ಬೇಡ್ವಂತೆ: ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಖಾಸಗಿ ಕಂಪನಿಗಳು ಕನ್ನಡ ನೆಲದಲ್ಲಿದ್ರೂ, ಕನ್ನಡಿಗರನ್ನ ಕಡೆಗಣಿಸೋದ್ರಲ್ಲಿ ಮುಂದಾಗಿದ್ದಾರೆ. ಕಳೆದ ವಾರ ಕಾಲೇಜ್ ನಲ್ಲಿ ಕನ್ನಡ ಮಾತನಾಡುವುದಕ್ಕೆ ದೊಡ್ಡ ಗಲಾಟೆಯೇ ನಡೆದಿತ್ತು. ಇದೀಗ ಬೆಂಗಳೂರಿನ ಜೆ ಪಿ ನಗರದಲ್ಲಿರುವ 'ಸ್ಕಿಲ್ಸ್ ಸೋನಿಕ್ಸ್' ಅನ್ನೋ ಖಾಸಗಿ ಕಂಪನಿಯಿಂದ ನೌಕ್ರಿ ಡಾಟ್ ಕಾಂ ನಲ್ಲಿ ನೌಕರಿಗಾಗಿ ಪ್ರಕಟಣೆ ಹೊರಡಿಸಿದ್ದು, ಕನ್ನಡ ಗೊತ್ತಿಲ್ಲದ ಅಭ್ಯರ್ಥಿಗಳಿಗೆ ಆದ್ಯತೆ "NON KANNADA HR" ಬೇಕು ಅಂತ ಪ್ರಕಟಣೆ ಕೊಟ್ಟದ್ದಾರೆ. ಈ ಪ್ರಕಟಣೆ ಕನ್ನಡಿಗರನ್ನ ಕೆರಳಿಸಿದ್ದು, ಎಕ್ಸ್ ನಲ್ಲಿ ಭಾರೀ ಟೀಕೆಗೆಗೆ ಗುರಿಯಾಗಿದೆ. ಕೂಡಲೇ ಈ ಪೋಸ್ಟ್ ವಾಪಸ್ಸು ತೆಗೆದುಕೊಳ್ಳಬೇಕು ಇಲ್ಲವಾದ್ರೆ ಉಗ್ರ ಹೋರಾಟ ಮಾಡಲಾಗುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು, (ಜನವರಿ 11): ಖಾಸಗಿ ಕಂಪನಿಗಳು ಕನ್ನಡ (Kannada) ನೆಲದಲ್ಲಿದ್ರೂ, ಕನ್ನಡಿಗರನ್ನ ಕಡೆಗಣಿಸೋದ್ರಲ್ಲಿ ಮುಂದಾಗಿದ್ದಾರೆ. ಕಳೆದ ವಾರ ಕಾಲೇಜ್ ನಲ್ಲಿ ಕನ್ನಡ ಮಾತನಾಡುವುದಕ್ಕೆ ದೊಡ್ಡ ಗಲಾಟೆಯೇ ನಡೆದಿತ್ತು. ಇದೀಗ ಬೆಂಗಳೂರಿನ (Bengaluru) ಜೆ ಪಿ ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಅನ್ನೋ ಖಾಸಗಿ ಕಂಪನಿಯಿಂದ ನೌಕ್ರಿ ಡಾಟ್ ಕಾಂ ನಲ್ಲಿ ನೌಕರಿಗಾಗಿ ಪ್ರಕಟಣೆ ಹೊರಡಿಸಿದ್ದು, ಕನ್ನಡ ಗೊತ್ತಿಲ್ಲದ ಅಭ್ಯರ್ಥಿಗಳಿಗೆ ಆದ್ಯತೆ “NON KANNADA HR” ಬೇಕು ಅಂತ ಪ್ರಕಟಣೆ ಕೊಟ್ಟದ್ದಾರೆ. ಈ ಪ್ರಕಟಣೆ ಕನ್ನಡಿಗರನ್ನ ಕೆರಳಿಸಿದ್ದು, ಎಕ್ಸ್ ನಲ್ಲಿ ಭಾರೀ ಟೀಕೆಗೆಗೆ ಗುರಿಯಾಗಿದೆ. ಕೂಡಲೇ ಈ ಪೋಸ್ಟ್ ವಾಪಸ್ಸು ತೆಗೆದುಕೊಳ್ಳಬೇಕು ಇಲ್ಲವಾದ್ರೆ ಉಗ್ರ ಹೋರಾಟ ಮಾಡಲಾಗುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಖಾಸಗಿ ಕಂಪನಿಗಳಿಗೆ ಬದುಕೋಕೆ ಕನ್ನಡ ನೆಲ ಬೇಕು ಆದ್ರೆ ಉದ್ಯೋಗ ಮಾಡಲು ಕನ್ನಡಿಗರು ಬೇಡವಾ? ಕನ್ನಡ ನಾಡಿನಲ್ಲಿ ಬಂದು ಕನ್ನಡಿಗರಿಗೆ ಈ ರೀತಿ ಇವರು ಪೋಸ್ಟ್ ಹಾಕಿರೋದು ಕನ್ನಡಿಗರನ್ನ ಕೆರಳಿಸುವಂತೆ ಮಾಡಿದೆ. ಅನ್ಯ ಭಾಷಿಕರಿಗೆ ಜಾಗ ಕೊಟ್ಟಿದ್ದು ತಪ್ಪಾಯ್ತಾ? ಕೂಡಲೇ ಕನ್ನಡಿಗರನ್ನ ಕ್ಷಮೆ ಕೇಳ್ಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.
