ಚಿಕ್ಕಬಳ್ಳಾಪುರ ಜಡಲತಿಮ್ಮನಹಳ್ಳಿಯ ರಸ್ತೆಯಲ್ಲಿ ಹೊಂಡದಂಥ ಗುಂಡಿಗಳು, ಪ್ರತಿಭಟನೆಗಿಳಿದ ಗ್ರಾಮಸ್ಥರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 19, 2022 | 11:48 AM

ಜಲ್ಲಿ ಲೋಡಿನ ಟಿಪ್ಪರ್ ಗಳ ನಿರಂತರ ಹೋರಾಟದಿಂದಲೇ ರಸ್ತೆ ಮೇಲೆ ಹೊಂಡದಂಥ ಗುಂಡಿ ಸೃಷ್ಟಿಯಾಗಿವೆ ಎಂದು ಗ್ರಾಮಸ್ಥರು ದೂರಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಜಡಲತಿಮ್ಮನಹಳ್ಳಿ (Jadalatimmanahalli) ಗ್ರಾಮದ ನಿವಾಸಿಗಳು ತಮ್ಮೂರಿನ ಮೂಲಕ ಹಾದುಹೋಗುವ ರಸ್ತೆ ಎಕ್ಕುಟ್ಟಿ ಹೋಗಿದ್ದರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಭಾಗವಾಗಿ ಬಸ್ಸು, ಲಾರಿ ಮತ್ತು ಜಲ್ಲಿ ಲೋಡ್ ಹೊತ್ತ ಟಿಪ್ಪರ್ ಗಳನ್ನು (tipper) ತಡೆದರು. ತಹಸಿಲ್ದಾರ (tahsildar) ತಮ್ಮ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿ ಮಾಡಿಸುವ ಆಶ್ವಾಸನೆ ನೀಡದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಅಂತ ಗ್ರಾಮಸ್ಥರು ಹೇಳಿದರು. ಜಲ್ಲಿ ಲೋಡಿನ ಟಿಪ್ಪರ್ ಗಳ ನಿರಂತರ ಹೋರಾಟದಿಂದಲೇ ರಸ್ತೆ ಮೇಲೆ ಹೊಂಡದಂಥ ಗುಂಡಿ ಸೃಷ್ಟಿಯಾಗಿವೆ ಎಂದು ಅವರು ದೂರಿದರು.