ಚಾಮರಾಜನಗರದಲ್ಲಿ ಒಬ್ಬ ಲ್ಯಾಬ್ ಟೆಕ್ನಿಷಿಯನ್ ವೈದ್ಯನಂತೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ!
ಚಾಮರಾಜನಗರದಲ್ಲಿ ಶಿವಕುಮಾರ ಹೆಸರಿನ ಒಬ್ಬ ಲ್ಯಾಬ್ ಟೆಕ್ನಿಷಿಯನ್ ಅರ್ ಎಮ್ ಪಿ ಸರ್ಟಿಫಿಕೇಟ್ ಪಡೆಯದೆ ಒಬ್ಬ ವೈದ್ಯನಂತೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ.
ಚಾಮರಾಜನಗರ: ನಮ್ಮ ರಾಜ್ಯದ ಮತ್ತು ದೇಶದ ಮಹಿಮೆಯೇ ಹಾಗೆ ಸ್ವಾಮಿ, ಇಲ್ಲಿ ಯಾರು ಬೇಕಾದರೂ ವೈದ್ಯರಾಗಬಹುದು. ಸಾವಿರ-ಎರಡು ಸಾವಿರ ರೂಪಾಯಿಗಳಿಗೆ ಸಿಗುವ ಬಿ ಎ ಎಮ್ ಎಸ್, ಬಿ ಇ ಎಮ್ ಎಸ್ ಮೊದಲಾದ ಸರ್ಟಿಫಿಕೇಟ್ ಗಳನ್ನು ಖರೀದಿಸಿ ಆರ್ ಎಮ್ ಪಿ ಗಳೆನಿಸಿಕೊಂಡು ಬಿಡುತ್ತಾರೆ. ನಿಮಗೆ ಗೊತ್ತಿರಲಿ, ಎಮ್ ಬಿ ಬಿ ಎಸ್, ಎಮ್ ಡಿ, ಎಮ್ ಎಸ್, ಎಫ್ ಆರ್ ಸಿ ಎಸ್ ಮೊದಲಾದ ಕೋರ್ಸ್ಗಳನ್ನು ಮಾಡಿದವರು ಕೂಡ ಆರ್ ಎಮ್ ಪಿ ಗಳೇ (RMP). ಅಸಲಿಗೆ ಆರ್ ಎಮ್ ಪಿ ಅಂದರೆ ರಿಜಿಸ್ಟರ್ಡ್ ಮೆಡಿಕಲ್ ಪ್ರ್ಯಾಕ್ಟೀಶನರ್ ಅಂತ. ವೈದ್ಯಕೀಯ ವ್ಯಾಸಂಗ ಮಾಡಿದವರೆಲ್ಲ ಪ್ರ್ಯಾಕ್ಟೀಸ್ ಶುರುಮಾಡುವ ಮೊದಲು ಈ ಪ್ರಮಾಣ ಪತ್ರ ಪಡೆಯಲೇ ಬೇಕು.
ಇಲ್ನೋಡಿ, ಚಾಮರಾಜನಗರದಲ್ಲಿ ಶಿವಕುಮಾರ (Shivakumar) ಹೆಸರಿನ ಒಬ್ಬ ಲ್ಯಾಬ್ ಟೆಕ್ನಿಷಿಯನ್ ಅರ್ ಎಮ್ ಪಿ ಸರ್ಟಿಫಿಕೇಟ್ ಪಡೆಯದೆ ಒಬ್ಬ ವೈದ್ಯನಂತೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ. ಜಿಲ್ಲಾ ವೈದ್ಯಾಧಿಕಾರಿ (ಡಿ ಹೆಚ್ ಒ) ಡಾ ವಿಶ್ವೇಶ್ವರಯ್ಯ (Dr KM Vishweshwaraiah) ಅವರು ಶಿವಕುಮಾರ ನಡೆಸುತ್ತಿದ್ದ ಕ್ಲಿನಿಕ್ ಮೇಲೆ ದಾಳಿ ಮಾಡಿ, ತಪಾಸಣೆ ನಡೆಸಿ ಅವನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.