Koppal: ಹುಲಿಗಿ ಗ್ರಾಮದಲ್ಲಿ ರೇಲ್ವೇ ಸೇತುವೆ ಮಾಡಿಸಿಕೊಡುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಸಚಿವ ಆನಂದ್ ಸಿಂಗ್ ಗೆ ಗ್ರಾಮಸ್ಥರಿಂದ ತರಾಟೆ

ಅರುಣ್​ ಕುಮಾರ್​ ಬೆಳ್ಳಿ

Updated on: Mar 06, 2023 | 6:34 PM

ಆದರೆ ಇಂದು ಹುಲಿಗೆ ಗ್ರಾಮದಲ್ಲಿ ಅಮ್ಮ ನಿಲಯ ಉದ್ಘಾಟನೆಗೆ ಬಂದಿದ್ದ ಆನಂದ್ ಸಿಂಗ್ ರನ್ನು ಗ್ರಾಮಸ್ಥರು ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡರು.

ಕೊಪ್ಪಳ: ಜಿಲ್ಲೆಯ ಕೊಪ್ಪಳ ತಾಲೂಕಿನ ಹುಲಿಗೆ ಗ್ರಾಮದ ಜನ ಇಂದು ಸಚಿವ ಆನಂದ್ ಸಿಂಗ್ (Anand Singh) ವಿರುದ್ಧ ರೊಚ್ಚಿಗೆದ್ದಿದ್ದರು. ಅದಕ್ಕೆ ಕಾರಣ ಇಲ್ಲದಿಲ್ಲ. ಗ್ರಾಮಸ್ಥರಿಗೆ ಒಂದು ರೇಲ್ವೇ ಸೇತುವೆ (railway bridge) ಬೇಕಾಗಿದೆ ಮತ್ತು ಮೂರು ವರ್ಷಗಳ ಹಿಂದೆ ಅದನ್ನು ಮಾಡಿಸಿಕೊಡುವ ಆಶ್ವಾಸನೆಯನ್ನು ಸಚಿವರು ಗ್ರಾಮಸ್ಥರಿಗೆ ನೀಡಿದ್ದರು. ಆದರೆ ಸೇತುವೆ ಕೆಲಸ ಆರಂಭವಾಗಿಲ್ಲ. ಸಚಿವರು ಪ್ರತಿಬಾರಿ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು ಅನಿಸುತ್ತೆ. ಆದರೆ ಇಂದು ಹುಲಿಗೆ ಗ್ರಾಮದಲ್ಲಿ ಅಮ್ಮ ನಿಲಯ ಉದ್ಘಾಟನೆಗೆ ಬಂದಿದ್ದ ಆನಂದ್ ಸಿಂಗ್ ರನ್ನು ಗ್ರಾಮಸ್ಥರು ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡರು. ಜನರ ಆಕ್ರೋಶ ಕಂಡು ಬೆಚ್ಚಿದ ಸಚಿವರ ಬಾಯಿಂದ ಮಾತೇ ಹೊರಡದಂತಾಗಿತ್ತು. ಅನಂದ್ ಅವರೊಂದಿಗಿದ್ದ ಶಾಸಕ ರಾಘವೇಂದ್ರ ಹಿಟ್ನಾಳ್, ಸಚಿವ ಹಾಲಪ್ಪ ಆಚಾರ್ (Halappa Achaar) ಮತ್ತು ಸಂಸದ ಸಂಗಣ್ಣ ಕರಡಿ ಸಹ ಗ್ರಾಮಸ್ಥರ ಕೋಪಕ್ಕೀಡಾದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.