ಗುರುವಾರ ಹುತಾತ್ಮನಾದ ರವಿಚಂದ್ರ ಯಲ್ಲಪ್ಪ ತಳವಾರ ಪಾರ್ಥೀವ ಶರೀರಕ್ಕೆ ಇಡೀ ಊರಿನ ಜನರಿಂದ ಪುಷ್ಪನಮನ
ಗ್ರಾಮದ ಮಹಿಳೆಯರು, ಹಿರಿಯರು, ವೃದ್ಧರು, ಮಕ್ಕಳು ಮತ್ತು ಯುವಕರು ರವಿಚಂದ್ರ ಅವರ ಪಾರ್ಥೀವ ಶರೀರರಕ್ಕೆ ಪುಷ್ಪನಮನ ಸಲ್ಲಿಸಿದರು. ಹಿನ್ನೆಲೆಯಲ್ಲಿ ದಿವಂಗತ ಲತಾ ಮಂಗೇಶ್ಕರ್ ಅವರು ಹಾಡಿದ ‘ಯೇ ಮೇರೆ ವತನ್ ಕೇ ಲೋಗೋ ಜರಾ ಆಂಖೋ ಮೇ ಭರ್ಲೋ ಪಾನಿ....’ ಕೇಳಿಸುತ್ತಿದ್ದಿದ್ದು ಅತ್ಯಂತ ಅರ್ಥಗರ್ಭಿತನಾಗಿತ್ತು ಮತ್ತು ನಿಂಗಾನಟ್ಟಿ ಗ್ರಾಮದಲ್ಲಿನ ಸನ್ನಿವೇಶವನ್ನು ವಿವರಿಸುವಂತಿತ್ತು.
ಬೆಳಗಾವಿ: ಅಸ್ಸಾಂ ರೈಫಲ್ಸ್ 11 ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿಯ ವೀರಯೋಧ ರವಿಚಂದ್ರ ಯಲ್ಲಪ್ಪ ತಳವಾರ ಗುರುವಾರದಂದು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹುತಾತ್ಮರಾಗಿದ್ದು ಪಾರ್ಥೀವ ಶರೀರ ಇಂದು ಸ್ವಗ್ರಾಮ ನಿಂಗಾನಟ್ಟಿಗೆ ಆಗಮಿಸಿದಾಗ ಇಡೀ ಊರು ರಸ್ತೆಯಲ್ಲಿ ನಿಂತು ಗೌರವ ಸಲ್ಲಿಸಿತು. ಮೂರು ದಿನಗಳ ಹಿಂದೆ ರವಿಚಂದ್ರ ಅವರಿದ್ದ ವಾಹನ ಅಪಘಾತಕ್ಕೀಡಾಗಿತ್ತು ಮತ್ತು ಅವರೊಂದಿದ್ದ ಇನ್ನಿಬ್ಬರು ಯೋಧರು ಸಹ ವೀರಮರಣವನ್ನಪ್ಪಿದ್ದರು. ಶಾಲಾ ಮಕ್ಕಳು ರಸ್ತೆಯ ಬದಿಯಲ್ಲಿ ಕೈಗಳಲ್ಲಿ ಹೂಹಿಡಿದು ರವಿ ದೇಹವನ್ನು ಹೊತ್ತ ವಾಹನದ ಆಗಮನಕ್ಕಾಗಿ ಕಾಯುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಗ್ರಾಮದ ಪ್ರತಿಯೊಂದು ಆತ್ಮ ಶೋಕಸಾಗರದಲ್ಲಿ ಮುಳುಗಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಯೋಧರು ಉಗ್ರರ ನಡುವೆ ಗುಂಡಿನ ಕಾಳಗ, ಇಬ್ಬರು ಸೈನಿಕರು ಹುತಾತ್ಮ, ಮೂವರಿಗೆ ಗಾಯ